Monday, September 30, 2024

ರಾಜ್ಯ

ಅತ್ಯಾಚಾರ ದೂರು!ಕೊಟ್ಟ ಸಂತ್ರಸ್ತ ಮಹಿಳೆ ಸಿಗದೆ ಜೆ.ಪಿ.ನಗರ ಪೊಲೀಸರು ಕಂಗಾಲು!

ಬೆಂಗಳೂರು, ಫೆ. 18: ವಿಳಾಸವಿಲ್ಲದ ದೆಹಲಿ ಮೂಲದ ಮಹಿಳೆಯೊಬ್ಬರು ಇ ಮೇಲ್ ಮೂಲಕ ಸಲ್ಲಿಸಿದ ದೂರನ್ನು ಆಧರಿಸಿ ಬೆಂಗಳೂರು ಪೊಲೀಸರು ಅತ್ಯಾಚಾರ ಕೇಸು ದಾಖಲಿಸಿದ್ರು. ಆದ್ರೆ, ಐದು ತಿಂಗಳಾದರೂ ಆ ಮಹಿಳೆ, ತನಿಖಾಧಿಕಾರಿಗಳ ಮುಖ ನೋಡಿಲ್ಲ. ತನಿಖಾಧಿಕಾರಿಗಳು ಹೋಗಿ ಆಕೆಯನ್ನು ಪತ್ತೆ ಮಾಡಲಾಗಿಲ್ಲ. ಹೈ ಪ್ರೊಫೈಲ್ ಕೇಸ್ ಅಂತ ಭಾವಿಸಿ ಮೇಲಾಧಿಕಾರಿಗಳ ಆಜ್ಞೆಯ ಮೇರೆಗೆ...

“ನಮ್ಮ ನಡೆ ಗ್ರಾಮದ ಕಡೆ” ಕಾಂಗ್ರೆಸ್ ಪಕ್ಷ 2023ಕ್ಕೆ ಅಧಿಕಾರಕ್ಕೆ ಬಂದೆ ಬರುತ್ತೆ : ಕೆಪಿಸಿಸಿ ಸದಸ್ಯ ವಿನಯ್ ಶ್ಯಾಮ್.

ಚಿಕ್ಕಬಳ್ಳಾಪುರ : ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕೊಡುಗೆ ನೀಡಿರುವ ಯಾವುದಾದರೂ ಪಕ್ಷವಿದ್ದರೆ ಅದು ಕಾಂಗ್ರೆಸ್ ಪಕ್ಷವಾಗಿದೆ. ಕಳೆದ 7 ವರ್ಷಗಳಲ್ಲಿ ಪಕ್ಷಕ್ಕೆ ರಾಷ್ಟ್ರ ರಾಜಕಾರಣದಲ್ಲಿ ಸ್ವಲ್ಪ ಹಿನ್ನಡೆ ಆಗಿರಬಹುದು, ಅದೇ ಅಂತಿಮವಲ್ಲ. ಮುಂದಿನ ದಿನಗಳಲ್ಲಿ ಖಂಡಿತವಾಗಿ ನಮ್ಮ ಪಕ್ಷ ದೇಶ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ ಈ ದಿಸೆಯಲ್ಲಿ ನಾವು ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ದನಿಯಾಗುವ...

ಕ್ಷಯ ರೋಗಿಗಳನ್ನು ದತ್ತು ಪಡೆದ ಜಿಲ್ಲಾಧಿಕಾರಿ: ಆರ್.ಲತಾ.

ಚಿಕ್ಕಬಳ್ಳಾಪುರ: ಬಡತನ ರೇಖೆಗಿಂತ ಕೆಳಗಿರುವ ಹಾಗೂ ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿರುವ ಜಿಲ್ಲೆಯ ಮೂವರು ಕ್ಷಯರೋಗಿಗಳು ಸಂಪೂರ್ಣವಾಗಿ ಗುಣಮುಖರಾಗುವರೆಗೂ ಅವರ ವೈದ್ಯಕೀಯ ಸೌಲಭ್ಯದ ವೆಚ್ಚ , ಪೌಷ್ಟಿಕ ಆಹಾರ ಪೂರೈಕೆ ಸೇರಿದಂತೆ ಇತರ ಅಗತ್ಯ ವೆಚ್ಚಗಳ ಜವಾಬ್ದಾರಿಯ ಹೊಣೆಯನ್ನು ವೈಯಕ್ತಿಕವಾಗಿ ವಹಿಸಿಕೊಂಡು ಜಿಲ್ಲಾಧಿಕಾರಿ ಆರ್.ಲತಾ ಅವರು ದತ್ತು ಪಡೆದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ...

ಮಾರ್ಚ್ 12ರ ಒಳಗೆ ತಾಲ್ಲೂಕು ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟಗಳನ್ನು ಮುಕ್ತಾಯಗೊಳಿಸಲು ಜಿಲ್ಲಾಧಿಕಾರಿ ಆರ್.ಲತಾ ಸೂಚನೆ

ಚಿಕ್ಕಬಳ್ಳಾಪುರ: 2021-22 ನೇ ಸಾಲಿನ ತಾಲ್ಲೂಕು ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕ್ರತಿಕ ಸ್ಪರ್ಧೆಗಳನ್ನು ಮಾರ್ಚ್ 12ರ ಒಳಗೆ ನಡೆಸಿ ಮುಕ್ತಾಯಗೊಳಿಸುವಂತೆ ಹಾಗೂ ಮಾರ್ಚ್ 12ರ ನಂತರ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಆಯೋಜಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್,ಲತಾ ಅವರು ಸೂಚನೆ ನೀಡಿದರು. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ 2021-22ನೇ ಸಾಲಿನ...

ಕಸಾಪ ವತಿಯಿಂದ ಸಮನ್ವಯ ಕವಿ ಚೆನ್ನವೀರ ಕಣವಿ ನಿಧನಕ್ಕೆ ಶ್ರದ್ಧಾಂಜಲಿ 

ಬೆಳಗಾವಿ ಫೆ.17:  ನೆಹರು ನಗರದ ಕನ್ನಡ ಭವನದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ ವತಿಯಿಂದ ಸಮನ್ವಯ ಕವಿ ಚೆನ್ನವೀರ ಕಣವಿಯವರ ನಿಧನಕ್ಕೆ ಶ್ರದ್ಧಾಂಜಲಿ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪೂಜೆ ನಮನ ಸಲ್ಲಿಸಿ ಮಾತನಾಡಿದ ಹಿರಿಯ ಸಾಹಿತಿ ಪತ್ರಕರ್ತ ಡಾ.ಸರಜೂ ಕಾಟ್ಕರ್ ವಿನಯಶೀಲ, ನವೋದಯ, ಗ್ರಾಮ್ಯ ಪ್ರಗತಿಶೀಲ ಕವಿಯಾಗಿದ್ದ ಕಣವಿಯವರು ಎಲ್ಲ ಯುಗಗಳ ಕಾವ್ಯದ...

ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವ ಎಂ.ಕೆ ಹುಬ್ಬಳ್ಳಿ ಪಟ್ಟಣ: ಕಂಗೆಟ್ಟ ನಾಗರಿಕರು

ಎಂ.ಕೆ ಹುಬ್ಬಳ್ಳಿ :ಬೆಳಗಾವಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕಿತ್ತೂರು ತಾಲ್ಲೂಕಿನ ಎಂ.ಕೆ ಹುಬ್ಬಳ್ಳಿ ಪಟ್ಟಣದ ಜನತೆಯು ಹಲವಾರು ಸಮಸ್ಯೆಗಳಿಂದ ಕಂಗೆಟ್ಟಿದ್ದಾರೆ. ಪಟ್ಟಣದಲ್ಲಿ ಸ್ವಚ್ಛತೆಯೇ ಮರೀಚಿಕೆಯಾಗಿರುವುದು, ಸಮರ್ಪಕವಾಗಿ ಚರಂಡಿ ವ್ಯವಸ್ಥೆ ಇಲ್ಲದಿರುವುದು, ಮುಖ್ಯ ರಸ್ತೆ ಹದಗೆಟ್ಟಿರುವುದು, ಕುಡಿಯುವ ನೀರಿನ ಸಮಸ್ಯೆ, 3 ತಿಂಗಳಿಂದ ಕುಡಿಯುವ ನೀರಿನ ಘಟಕಗಳು ಬಂದ್ ಆಗಿರುವುದು, ಪಟ್ಟಣ ಪಂಚಾಯಿತಿಗೆ ಸುಸಜ್ಜಿತವಾದ...

ಎಸ್‌ಡಿಎಂಸಿ ಅಧ್ಯಕ್ಷನಾಗಿ ಆದಪ್ಪ ಕುಂಬಾರ ಆಯ್ಕೆ

ಲಿಂಗಸೂರು:ಸಮೀಪದ ಈಚನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಅಧ್ಯಕ್ಷರಾಗಿ ಆದಪ್ಪ ಕುಂಬಾರ ಅವರನ್ನು  ಆಯ್ಕೆ ಮಾಡಿದ್ದಾರೆ.  ಒಟ್ಟು 18 ಸದಸ್ಯರನ್ನೊಳಗೊಂಡ ಸಮಿತಿಯಲ್ಲಿ ಸರ್ವಾನುಮತದಿಂದ ಆದಪ್ಪ.ಕುಂಬಾರ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದಾರೆ.  ಈ ಸಂದರ್ಭದಲ್ಲಿ ಮುಖ್ಯ ಗುರುಗಳು ಬಾಳಪ್ಪ ನಾಗರಹಾಳ,ಹಾಗೂ ನೂತನ ಅಧ್ಯಕ್ಷ ರಾದ ಆದಪ್ಪ ಕುಂಬಾರ ,ಸಹದೇವ‌ ಕರಡಿ ,ಹನುಮಂತ ಗೌಂಡಿ ,ಶಿವರಾಜ ಕುಂಬಾರ, ಬಸವಲಿಂಗಪ್ಪ, ಮುತ್ತಪ್ಪ...

ಪ್ಲಾಸ್ಟಿಕ್‌ ಬಳಕೆಯ ದುಷ್ಪರಿಣಾಮಗಳ ಬಗ್ಗೆ LED ಪರದೆಯ ವಾಹನ ಮುಖಾಂತರ ಪ್ರದಶ೯ನ .

ಮುದಗಲ್ಲ:ನಗರಾಭಿವೃದ್ಧಿ ಇಲಾಖೆ ಪೌರಾಡಳಿತ ನಿದೇ೯ಶನಾಲಯ ಇಂದ ಏಕ ಬಳಿಕೆ ಪ್ಲಾಸ್ಟಿಕ್ ನಿಷೇಧ ಬಗ್ಗೆ ಮುದಗಲ್ಲ ಪುರಸಭೆ ಮುಂದೆ LED ಪರದೆ ಮುಖಾಂತರ ಜನರಿಗೆ ಜಾಗೃತಿ ಮೂಡಿಸವಾಯಿತ್ತು. ಪ್ಲಾಸ್ಟಿಕ್‌ ಇಂದು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು. ಕಡಿಮೆ ವೆಚ್ಚದಲ್ಲಿ ತಯಾರಿಕೆ ಹಾಗೂ ಕೈಗೆಟಕುವ ದರದಲ್ಲಿ ಈ ಪ್ಲಾಸ್ಟಿಕ್‌ ಉತ್ಪನ್ನಗಳು ದೊರೆಯುವುದರಿಂದ ಮಾನವನು ಈ ವಸ್ತುವಿಗೆ...

ಸಂವಿಧಾನ ಅರ್ಥ ಮಾಡಿಕೊಳ್ಳಬೇಕು ವಿಶ್ರಾಂತ ನ್ಯಾಯಮೂರ್ತಿ:ಎಚ್.ಎನ್. ನಾಗ ಮೋಹನ್‌ದಾಸ್

ಚಿಕ್ಕಬಳ್ಳಾಪುರ : ಭಾರತೀಯರಿಗೆ ಸಂವಿಧಾನ ಮಹಾಗ್ರಂಥ. ಇದನ್ನು ಓದಬೇಕು, ಅರ್ಥ ಮಾಡಿಕೊಳ್ಳಬೇಕು. ಅದರಂತೆ ನಡೆಯಬೇಕು. ಈ ಮೂಲಕ ಸಂವಿಧಾನ ಸಾಕ್ಷರತೆ ಹೆಚ್ಚಾಗಬೇಕು ಎಂದು ಉಚ್ಛನ್ಯಾಯಾಲಯ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗ ಮೋಹನ್‌ ದಾಸ್ ಹೇಳಿದರು. ನಗರದ ಜಚನಿ ವಿದ್ಯಾ ಸಂಸ್ಥೆಯ ಸಿದ್ದರಾಮಯ್ಯ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಭಾರತದ ಸಂವಿಧಾನ ಸಂರಕ್ಷಣೆ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ...

ಕಸಾಪದಿಂದ ದಿನವೂ ವಿನೂತನ ಕಾರ್ಯಕ್ರಮಗಳ ಆಯೋಜನೆ : ಡಾ. ಮಹೇಶ ಜೋಶಿ

ಬೆಳಗಾವಿ : ಕನ್ನಡ ಸಾಹಿತ್ಯ ಪರಿಷತ್ ರಾಜ್ಯದ ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿದ್ದು ಕನ್ನಡ ನಾಡು ನುಡಿ ನೆಲದ ರಕ್ಷಣೆಗೆ ಸದಾ ಕಂಕಣಭದ್ದವಾಗಿದೆ. ಕಸಾಪದ ಸದಸ್ಯರುಗಳನ್ನು ಹೆಚ್ಚಿಸುವುದರ ಜೊತೆಗೆ ಇಡೀ ರಾಜ್ಯದ ಜನ ಕನ್ನಡ ಸಾಹಿತ್ಯ ಪರಿಷತ್ ಮುಖಾಂತರ ಪ್ರತಿ ದಿನವೂ ಕನ್ನಡದ ಹಬ್ಬವನ್ನಾಗಿ ಆಚರಿಸಲು ವಿನೂತನ  ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!