Saturday, July 27, 2024

ಕಸಾಪದಿಂದ ದಿನವೂ ವಿನೂತನ ಕಾರ್ಯಕ್ರಮಗಳ ಆಯೋಜನೆ : ಡಾ. ಮಹೇಶ ಜೋಶಿ

ಬೆಳಗಾವಿ : ಕನ್ನಡ ಸಾಹಿತ್ಯ ಪರಿಷತ್ ರಾಜ್ಯದ ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿದ್ದು ಕನ್ನಡ ನಾಡು ನುಡಿ ನೆಲದ ರಕ್ಷಣೆಗೆ ಸದಾ ಕಂಕಣಭದ್ದವಾಗಿದೆ. ಕಸಾಪದ ಸದಸ್ಯರುಗಳನ್ನು ಹೆಚ್ಚಿಸುವುದರ ಜೊತೆಗೆ ಇಡೀ ರಾಜ್ಯದ ಜನ ಕನ್ನಡ ಸಾಹಿತ್ಯ ಪರಿಷತ್ ಮುಖಾಂತರ ಪ್ರತಿ ದಿನವೂ ಕನ್ನಡದ ಹಬ್ಬವನ್ನಾಗಿ ಆಚರಿಸಲು ವಿನೂತನ  ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹಿರೇಬಾಗೇವಾಡಿಯಲ್ಲಿ ಹೇಳಿದರು.

ಬೆಳಗಾವಿಯಿಂದ ದಾರವಾಡಕ್ಕೆ ಪಯಣಿಸುವ ಮಾರ್ಗ ಮಧ್ಯದಲ್ಲಿ ಹಿರೇಬಾಗೇವಾಡಿ ಗ್ರಾಮದಲ್ಲಿ ಕಸಾಪದ ಸದಸ್ಯರುಗಳನ್ನು ಭೇಟಿ ಮಾಡಿ ಮಾತನಾಡಿದರು. ಈ ಸಂಧರ್ಭದಲ್ಲಿ ಬೆಳಗಾವಿ ಜಿಲ್ಲಾ ಕಸಾಪ ಕರ‍್ಯಕಾರಿ ಸಮಿತಿ ಸದಸ್ಯ ಆಕಾಶ ಅರವಿಂದ ಥಬಾಜ, ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ ಬಸವರಾಜ ಡೊಂಗರಗಾಂವಿ, ಸಾಮಾಜಿಕ  ಕಾರ್ಯಕರ್ತ ಬಸವರಾಜ ಕಡೇಮನಿ ಕನ್ನಡದ ಹೊತ್ತಿಗೆಗಳನ್ನು ನೀಡಿ ಕಸಾಪ ರಾಜ್ಯ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅವರನ್ನು ಗೌರವಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಹಿರೇಬಾಗೇವಾಡಿಯ ಗ್ರೂಪ್ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಬೆಳಗಾವಿ ತಾಲೂಕಿನ ಕಸಾಪದ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಜಿ.ವಾಲಿಇಟಗಿ ರವರು ಬೆಳಗಾವಿ ಗಡಿ ಪ್ರದೇಶವಾಗಿದ್ದು ಕನ್ನಡ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸಲು ವಿಶೇಷ ಪ್ರೋತ್ಸಾಹ ನೀಡುವಂತೆ ಆಗ್ರಹಿಸಿದರು.

ಈ ಸಂಧರ್ಭದಲ್ಲಿ ಕಸಾಪ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ, ಹಿರೇಬಾಗೇವಾಡಿಯ ಗ್ರೂಪ್ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಬೆಳಗಾವಿ ತಾಲೂಕಿನ ಕಸಾಪದ ಕರ‍್ಯಕಾರಿ ಸಮಿತಿ ಸದಸ್ಯ ಬಿ.ಜಿ.ವಾಲಿಇಟಗಿ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಸದಸ್ಯ ಮೋಹನ ಬಸನಗೌಡ ಪಾಟೀಲ, ಡಾ: ನೀತಾ ಚವ್ವಾಣ, ಎಸ್.ಬಿ.ಮೇಳೇದ, ಕಸಾಪ ಸದಸ್ಯರಾದ ಚನ್ನಬಸವ ಗಾಣಿಗೇರ, ಘಟಿಗೆಪ್ಪ ಗುರವನ್ನವರ, ಶಿವಕುಮಾರ ಪಾಟೀಲ, ಮನೋಹರ ಕಮ್ಮಾರ ಮತ್ತೀತರರು ಉಪಸ್ಥಿತರಿದ್ದರು.

ಜಿಲ್ಲೆ

ರಾಜ್ಯ

error: Content is protected !!