Wednesday, September 18, 2024

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ.

ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ ಮತಕ್ಷೇತ್ರಗಳ ಸಂಖ್ಯೆ ಹೆಚ್ಚಿಸಲಾಗಿದೆ ಹೊರತು ಸ್ಥಳೀಯರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ವಿಫಲರಾಗಿದ್ದಾರೆ. ಪ್ರಸ್ತುತ ಮಳೆಗಾಲವಾಗಿರುವುದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ.‌ ಆದರೆ ಸರಕಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಇಲ್ಲದೇ ರೋಗಿಗಳು ಪರದಾಡುವಂತಹ ಪರಿಸ್ಥಿತಿಗಳು ಕಂಡು ಬರುತ್ತಿವೆ. ಗಡಿ ಭಾಗದ ಗ್ರಾಮದ ಜನರ ಆರೋಗ್ಯದ ಕುರಿತು ಕಾಳಜಿ ವಹಿಸಿ, ಚಿಕಿತ್ಸೆ ನೀಡಬೇಕಾಗಿರುವ ವೈದ್ಯರು ರಜೆ ಮೇಲಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು ಹುಕ್ಕೇರಿ ತಾಲೂಕಿನ ಕೋಟ ಎಂಬ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಗಳೇ ಕಾಣೆಯಾಗಿದ್ದಾರೆ. ಕೇಂದ್ರದ ಆಡಳಿತ ವೈದ್ಯಾಧಿಕಾರಿ ರಜೆ ಪಡೆದ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸಬೇಕಾದ ಸಿಬ್ಬಂದಿಗಳು ಗೈರು ಹಾಜರಾಗಿ ರೋಗಿಗಳು ಪರದಾಡುವಂತೆ ಪರಿಸ್ಥಿತಿಗೆ ಕಾರಣರಾಗಿದ್ದಾರೆ.

ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿದರೂ, ಕರೆ ಸ್ವೀಕರಸಿಲ್ಲ ಮತ್ತು ಮಾಹಿತಿ ನೀಡಿಲ್ಲ. ವರದಿಗಾರರ ಕರೆಗೆ ಪ್ರತಿಕ್ರಿಯಿಸದ ಅಧಿಕಾರಿಗಳು, ಸಾರ್ವಜನಿಕರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸುತ್ತಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಜನರ ಪರದಾಟ
ಯಮಕನಮರಡಿ ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಸ್ವಕ್ಷೇತ್ರದಲ್ಲಿ ರೋಗಿಗಳು ಚಿಕಿತ್ಸೆಗಳಿಗಾಗಿ ಪರದಾಡುತ್ತಿರುವುದು ಸರಕಾರದ ಆಡಳಿತಕ್ಕೆ ಹಿಡಿದ ಕೈಗಡಿಯಾಗಿದೆ. ಇನ್ನೂ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಸಧ್ಯದಲ್ಲಿಯೇ ಉದ್ಘಾಟನೆಗೆ ಸಿದ್ದವಾಗಿದೆ ಎಂಬುವುದು ಕಳೆದ ತಿಂಗಳು ಮಾಹಿತಿ ನೀಡಿದ್ದ ಸಚಿವರಿಗೆ ಈ ಪ್ರಕರಣದ ಕುರಿತು ತಿಳಿಸುವ ಅಗತ್ಯತೆಯಿದೆ. ಜಿಲ್ಲೆಯಲ್ಲಿ ಎಲ್ಲ ಆಡಳಿತವು ಸರಿಯಾಗಿ ನಡೆಯುತ್ತಿದ್ದೇಯೆ ಎಂದು ನೋಡಿಕೊಳ್ಳಬೇಕಾದ ಸಚಿವರ ಸ್ವಕ್ಷೇತ್ರದಲ್ಲಿ ಆಡಳತ ಹದಗೆಟ್ಟಿರುವುದು ನಿಜಕ್ಕೂ ವಿಷಾದನೀಯ ಸಂಗತಿಯಾಗಿದೆ. ಇನ್ನೂದಾರೂ ಹಿರಿಯ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವವರೇ ಎಂಬುವುದನ್ನು ಕಾಯ್ದು ನೋಡಬೇಕು.

ಜಿಲ್ಲೆ

ರಾಜ್ಯ

error: Content is protected !!