Tuesday, September 17, 2024

ಸುದ್ದಿ-ಸದ್ದು ನ್ಯೂಸ್

*ಕಲ್ಮಠದಲ್ಲಿ ಬೂದಿ ಮುಚ್ಚಿದ ಕೆಂಡ!* *ವಿಜಯೋತ್ಸವ ಉದ್ಘಾಟನೆಯಲ್ಲಿ ಅಸಮಾಧಾನ ಸ್ಪೋಟ*

ಕಿತ್ತೂರು: ಕಲ್ಮಠದಲ್ಲಿ ಬೂದಿ ಮುಚ್ಚಿದ ಕೆಂಡ! ವೀರರಾಣಿ ಚನ್ನಮ್ಮ ಸಂಸ್ಥಾನದ ಮಾರ್ಗದರ್ಶಿಗಳು ಅರಮನೆ-ಗುರುಮನೆ ಪರಂಪರೆಯ ಐತಿಹ್ಯ ಹೊಂದಿರುವ ರಾಜಗುರು ಸಂಸ್ಥಾನ ಕಲ್ಮಠದಲ್ಲಿ ಅಸಮಾಧಾನದ ಹೊಗೆಯಾಡುತ್ತಿದ್ದು ಕಿತ್ತೂರು ವಿಜಯೋತ್ಸವದ ಬೆಳ್ಳಿ ಹಬ್ಬದ ಉದ್ಘಾಟನಾ ಸಂದರ್ಭದಲ್ಲಿ ಕಲ್ಮಠದ ಶ್ರೀಗಳ ನಡೆ ಇದಕ್ಕೆ ಪುಷ್ಠಿ ನೀಡುವಂತಿದೆ. ಉತ್ಸವದ ಆಮಂತ್ರಣ ಪತ್ರಿಕೆ ಮುದ್ರಣದಲ್ಲಿ ಗಣ್ಯರು ಹಾಗೂ ಪೂಜ್ಯರ ಹೆಸರುಗಳನ್ನು ಮುದ್ರಿಸುವಲ್ಲಿ ಗೊಂದಲ ಸೃಷ್ಟಿಯಾಗಿದ್ದು...

ಕಿತ್ತೂರು ರಾಣಿ ಚನ್ನಮ್ಮನ ವೀರ ಜ್ಯೋತಿ ರಾಜ್ಯಾದ್ಯಂತ ಸಂಚರಿಸಲು ಸಿಎಂ ಆದೇಶ

ಕಿತ್ತೂರು(ಅ.23):ಬ್ರಿಟಿಷ್ ಸಾಮ್ರಾಜ್ಯವನ್ನು ಕನಸಲ್ಲೂ ಬೆಚ್ಚಿ ಬೀಳುವಂತೆ ಮಾಡಿದ ದಿಟ್ಟ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮನ ವಿಜಯೋತ್ಸವದ ರಜತ ಮಹೋತ್ಸವ ಅತಿ ವಿಜೃಂಭಣೆಯಿಂದ ಜರುಗಿತು. ಐತಿಹಾಸಿಕ ಉತ್ಸವದ 25 ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಈ ಹೊತ್ತಲ್ಲಿ ರಾಜ್ಯ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಕಿತ್ತೂರು ಅಭಿವೃದ್ದಿ ಪ್ರಾಧಿಕಾರಕ್ಕೆ ರೂ.50.00 ಕೋಟಿ ಅನುದಾನ ಮೀಸಲಿರಿಸಿ...

ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಹಾಗೂ ಕಲ್ಮಠದ ಶ್ರೀಗಳು,ಶಾಸಕರು

ಕಿತ್ತೂರ (ಅ.23) :ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಐತಿಹಾಸಿಕ ಹಿನ್ನೆಲೆಯುಳ್ಳ ವೀರ ರಾಣಿ ಚನ್ನಮ್ಮಾಜಿ ವಿಜಯೋತ್ಸವಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಪಟ್ಟಣದ ಗಡಾದ ಮರಡಿಯಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನಂದಿ ಧ್ವಜಾರೋಹನ ಮಾಡಿ ಚಾಲನೆ ನೀಡಿದರು. ಚನ್ನಮ್ಮ ವೃತ್ತದಲ್ಲಿ ಸಂಸದರಾದ ಮಂಗಲಾ ಅಂಗಡಿ ಅವರು ನಂದಿ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು. ನಂತರ ಕಿತ್ತೂರು ವಿಜಯೋತ್ಸವದ ವಿಜಯ ಜ್ಯೋತಿಯನ್ನು...

ಆಡಂಬರವೇ ಪ್ರಧಾನ! ಅಭಿವೃದ್ಧಿ ನಿಧಾನ! ಕಿತ್ತೂರು ಚನ್ನಮ್ಮನಿಗೆ ಅವಮಾನ? “ಇಂದಿನಿಂದ ಕಿತ್ತೂರು ಉತ್ಸವ”:

ಕಿತ್ತೂರು ಚನ್ನಮ್ಮ- ಈ ಹೆಸರನ್ನು ಕೇಳದ ಕನ್ನಡಿಗರಿಲ್ಲ.ಆ ಹೆಸರನ್ನು ಕೇಳಿದಾಕ್ಷಣ ಮೈ ರೋಮಾಂಚನಗೊಳ್ಳುತ್ತದೆ, ಮನ ಹೆಮ್ಮೆಯಿಂದ ಹಿಗ್ಗುತ್ತದೆ. ಕನ್ನಡಿಗರ ಸ್ವಾಭಿಮಾನ, ಶೌರ್ಯ-ಸಾಹಸಗಳ ಸಂಕೇತವಾಗಿ, ಮಹಿಳೆಯೊಬ್ಬಳ ದಿಟ್ಟ ಹೋರಾಟದ ಕಥನವಾಗಿ ನಮ್ಮ ಮನಗಳಲ್ಲಿ ಅಚ್ಚೊತ್ತಿದೆ. ಭಾರತದ ಪ್ರಥಮ ಸ್ವಾತಂತ್ರ್ಯಸಂಗ್ರಾಮಕ್ಕೆ 33 ವರ್ಷಗಳ ಮೊದಲೇ ಬ್ರಿಟಿಷರ ವಿರುದ್ಧ ಹೋರಾಟದ ರಣ ಕಹಳೆಯನ್ನು ಊದಿ, ಧೈರ್ಯದಿಂದ ಮುನ್ನುಗ್ಗಿ ಪರಾಕ್ರಮ ಮೆರೆದು,...

ಕಿತ್ತೂರು ವಿಜಯೋತ್ಸವಕ್ಕೆ ಬೆಳ್ಳಿ ಸಂಭ್ರಮ: ಜಾತ್ರೆಯಾಗದಿರಲಿ ಉತ್ಸವ!

ಭಾರತದ ಸ್ವಾತಂತ್ರ್ಯಕ್ಕೆ ಬ್ರಿಟಿಷರ ಗುಂಡಿಗೆ ಎದೆಯೊಡ್ಡುವ ಮೂಲಕ ಫಿರಂಗಿಗಳ ಜೊತೆಗೆ ಖಡ್ಗ ಹಿಡಿದು ಸೆಣಸಾಡುವ ಮೂಲಕ ಇಡೀ ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಬೆಳ್ಳಿ ಚುಕ್ಕಿಯಾಗಿ ಹೊರಹೊಮ್ಮಿದ ವೀರರಾಣಿ ಕಿತ್ತೂರು ಚನ್ನಮ್ಮಳ ಪರಾಕ್ರಮದ ಫಲವಾಗಿ ಕಿತ್ತೂರು ಜಯಶಾಲಿಯಾಗಿದ್ದು ಆ ವಿಜಯೋತ್ಸವದ ಸವಿನೆನಪಿಗಾಗಿ ಹಮ್ಮಿಕೊಳ್ಳಲಾದ ಕಿತ್ತೂರು ಉತ್ಸವಕ್ಕೆ ಈ ಬಾರಿ 25 ರ ಸಂಭ್ರಮ. ಐತಿಹಾಸಿಕ ಹಿನ್ನೆಲೆ:-ಬೆಳಗಾವಿ ಜಿಲ್ಲೆಯ...

ಏರಿಕೆಯ ವೀರರಿಗೊಂದು ಇಳಿಕೆಯ ಪ್ರಶ್ನೆ! ಬೇಡ, ಬೆಲೆ ಏರಿಕೆಯ ಭಾರ! ಬೇಕು, ದರ ಇಳಿಕೆಯ ಪರಿಹಾರ!!

ವ್ಯವಸ್ಥೆಯಲ್ಲಿನ ಬ್ರಹ್ಮಾಂಡ ಭ್ರಷ್ಟತೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟ *ಭ್ರಷ್ಟಾಚಾರದ ವಂಶವೃಕ್ಷ* ಲೇಖನದ ನಂತರ, ಇದೀಗ ಬೆಲೆ ಏರಿಕೆಯ ಹಿಂದಿನ ಷಡ್ಯಂತ್ರವನ್ನು, ಸರ್ಕಾರಗಳ ದುಂದುವೆಚ್ಚವನ್ನು ವಿವರಿಸುವ ಮತ್ತೊಂದು ಮಹತ್ವದ ಲೇಖನ *ಮಣ್ಣೆ ಮೋಹನ್* ಲೇಖನಿಯಿಂದ. https://suddisaddu.com/News-ID.622/ ಯಾವುದೇ ಸರ್ಕಾರ ಬಂದರೂ, ಯಾರೇ ಮುಖ್ಯಮಂತ್ರಿಯಾದರೂ ಎಲ್ಲರದ್ದೂ ಒಂದೇ ಆಟ-ಪಾಠ, ಆರ್ಭಟ. ವರ್ಷಕೊಮ್ಮೆ ಕರೆಂಟ್ ಬಿಲ್ ದರ ಹೆಚ್ಚಳ, ಸಾರಿಗೆ ದರ ಹೆಚ್ಚಳ,...

ಶಾಸಕರ ಆರೋಪದಲ್ಲಿ ಯಾವುದೇ ಹುರುಳಿಲ್ಲ: ಘೂಳಪ್ಪ ಹೊಸಮನಿ

ಬೆಳಗಾವಿ (ಅ.21): ನಗರಾಭಿವೃದ್ಧಿ ಪ್ರಾಧಿಕಾರದ ಸಭೆಗೆ ನಾನು ಅಧ್ಯಕ್ಷನಾದ ವೇಳೆ ಆಹ್ವಾನ ನೀಡಿಲ್ಲ ಎಂದು ಶಾಸಕರು ಹೇಳಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಮಾಜಿ ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಹೇಳಿದರು. ಗುರುವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ ನಮ್ಮ ಸರಕಾರ ಇರುವುದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗಬಾರದು ಎನ್ನುವ ಉದ್ದೇಶ ನಂದು. ನಗರಾಭಿವೃದ್ಧಿ...

ಕೃತಿಗಳು ಹೆಚ್ಚುತ್ತಿವೆ ಓದುಗರು ಹೆಚ್ಚುತ್ತಿಲ್ಲ:- ಸಾಹಿತಿ ಬಿ. ಎಸ್. ಗವಿಮಠ ವಿಷಾದ

ಬೆಳಗಾವಿ (ಅ.21): ಇತ್ತೀಚಿನ ದಿನಗಳಲ್ಲಿ ಕೃತಿಗಳು ಹೆಚ್ಚುತ್ತಿವೆ, ಆದರೆ ಓದುಗರು ಹೆಚ್ಚುತ್ತಿಲ್ಲ. ಇದು ಸಾಹಿತ್ಯಕ್ಕೆ ಆತಂಕಕಾರಿ ಎಂದು ಹಿರಿಯ ಸಾಹಿತಿ ಬಿ.ಎಸ್. ಗವಿಮಠ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಗುರುವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಸಾಹಿತಿ ರೇಣುಕಾ ಜಾಧವ ರವರು ರಚಿಸಿದ ಅವಳಿ ಕೃತಿಗಳ ಬಿಡುಗಡೆ ಸಮಾರಂಭಸಲ್ಲಿ...

ಕಿತ್ತೂರ ಉತ್ಸವದಲ್ಲಿ ಮೂರು ಬೇಡಿಕೆಗಳ ಜಾರಿಗೆಗೆ ಅಶೋಕ ಪೂಜಾರಿ ಸಿಎಂಗೆ ಒತ್ತಾಯ

ಬೆಳಗಾವಿ: ಇದೇ ಅಕ್ಟೋಬರ್ 23 ಮತ್ತು 24 ರಂದು ನಡೆಯುವ ಕಿತ್ತೂರ ಉತ್ಸವದಲ್ಲಿ ಮೂರು ಬೇಡಿಕೆಗಳನ್ನು ಜಾರಿಗೆ ತರಬೇಕು ಎಂದು ರಾಜಕೀಯ ಮುಖಂಡ ಅಶೋಕ ಪೂಜಾರಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ ಪೂಜಾರಿ ಅವರು ಹೈದರಾಬಾದ ಪ್ರಾಂಥವು ಹೈದರಾಬಾದ್ ಸುಲ್ತಾನರ ಆಡಳಿತಕ್ಕೆ ಒಳಪಟ್ಟಿದ್ದರಿಂದ ಈ ಹೆಸರು ಪ್ರಾಪ್ತವಾಗಿತ್ತು, ಆದರೆ ಅದು ದಾಸ್ಯದ ಹೆಸರಾಗಿತ್ತು....

ಬುಡಾ ಅಧ್ಯಕ್ಷ ಘೂಳಪ್ಪ‌ ಹೊಸಮನಿ ಅವಧಿ ಮುಕ್ತಾಯವಾಗುವ ಮುನ್ನವೇ ಎತ್ತಂಗಡಿ

ಬೆಳಗಾವಿ (ಅ.21):ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಘೂಳಪ್ಪ‌ ಹೊಸಮನಿ ಅವಧಿ ಮುಕ್ತಾಯವಾಗುವ ಮುನ್ನವೆ ನೂತನ ಬುಡಾ ಅಧ್ಯಕ್ಷ ಸಂಜಯ ಬೆಳಗಾಂವಕರ ಅವರನ್ನು ಸರಕಾರ ಆಯ್ಕೆ ಮಾಡಿ ಗುರುವಾರ ಆದೇಶ ಹೊರಡಿಸಿದೆ. ಕಳೆದೊಂದು‌ ವರ್ಷದಿಂದ ಬುಡಾ ಅಭಿವೃದ್ಧಿಗೆ ನಿಕಟಪೂರ್ವ ಅಧ್ಯಕ್ಷ ಘೂಳಪ್ಪ‌ ಹೊಸಮನಿಗೆ ಸ್ಥಳೀಯ ಶಾಸಕರು ಅಭಿವೃದ್ಧಿ ಮಾಡಲು ಸಾಥ್ ನೀಡುತ್ತಿರಲಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಮಾಜಿ...

About Me

1089 POSTS
0 COMMENTS
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!