Sunday, September 8, 2024

ಕಿತ್ತೂರು ರಾಣಿ ಚನ್ನಮ್ಮನ ವೀರ ಜ್ಯೋತಿ ರಾಜ್ಯಾದ್ಯಂತ ಸಂಚರಿಸಲು ಸಿಎಂ ಆದೇಶ

ಕಿತ್ತೂರು(ಅ.23):ಬ್ರಿಟಿಷ್ ಸಾಮ್ರಾಜ್ಯವನ್ನು ಕನಸಲ್ಲೂ ಬೆಚ್ಚಿ ಬೀಳುವಂತೆ ಮಾಡಿದ ದಿಟ್ಟ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮನ ವಿಜಯೋತ್ಸವದ ರಜತ ಮಹೋತ್ಸವ ಅತಿ ವಿಜೃಂಭಣೆಯಿಂದ ಜರುಗಿತು.

ಐತಿಹಾಸಿಕ ಉತ್ಸವದ 25 ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಈ ಹೊತ್ತಲ್ಲಿ ರಾಜ್ಯ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಕಿತ್ತೂರು ಅಭಿವೃದ್ದಿ ಪ್ರಾಧಿಕಾರಕ್ಕೆ ರೂ.50.00 ಕೋಟಿ ಅನುದಾನ ಮೀಸಲಿರಿಸಿ ಪ್ರಸ್ತುತ ರೂ.10.00 ಕೋಟಿ ಅನುದಾನ ಮಂಜೂರು ಮಾಡಿದ ಸರ್ಕಾರಕ್ಕೆ ಧನ್ಯವಾದಗಳನ್ನು ಬೆಳಗಾವಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ತಿಳಿಸಿದರು.

ಕಾರ್ಯಕ್ರಮ ಉಧ್ಘಾಟಿಸಿದ ಚಿತ್ರ

ವೇದಿಕೆಯ ಮೇಲಿರುವ ಉದ್ಘಾಟಕರಾದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ, ಸಚಿವರಾದ ಮುರುಗೇಶ ನಿರಾಣಿ, ಉಮೇಶ ಕತ್ತಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದೆ ಮಂಗಲಾ ಅಂಗಡಿ, ಕರ್ನಾಟಕ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಉಪಸಭಾಧ್ಯಕ್ಷರು ಆನಂದ ಮಾಮನಿ, ಶಾಸಕರಾದ ಅನೀಲ ಬೆನಕೆ, ಮಹೇಶ ಕುಮಠಳ್ಳಿ, ಮಹಾದೇವಪ್ಪ ಯಾದವಾಡ, ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಮಹಾಂತೇಶ ಕೌಜಲಗಿ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಪ್ರಶಸ್ತಿ ಪುರಸ್ಕೃತ ಕೃಷಿಕರು ಕವಿತಾ ಮಿಶ್ರಾ ಹಾಗೂ ಇತರೆ ಎಲ್ಲ ಅತಿಥಿಗಳು ಗಣ್ಯರುಗಳಿಗೆ ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಪುಸ್ತಕ ಮತ್ತು ನೆನಪಿನ ಕಾಣಿಕೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತಿಸಿಕೊಂಡರು.

ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಅವರು
1998 ರಿಂದ ಇಲ್ಲಿಯವರೆಗೆ ಆಗಿನ ಮುಖ್ಯಮಂತ್ರಿ ಜೆ.ಎಚ್ ಪಟೇಲ್ ಅವರ ಅಧಿಕಾರದ ಸಂದರ್ಭದಲ್ಲಿ ಆರಂಭಗೊಂಡ ಉತ್ಸವಕ್ಕೆ ಇಂದು 25 ನೇ ವರ್ಷದ ಸಂಭ್ರಮ ಎಂದರು.

ಕಿತ್ತೂರು ಶಾಸಕ ಮಾತನಾಡುತ್ತಿರುವುದು

ಈ ಭಾಗದ ಜನರು ತುಂಬ ಸ್ವಾಭಿಮಾನಗಳು ಹೀಗಾಗಿ ಕಿತ್ತೂರು ಉತ್ಸವವನ್ನು ಕೇವಲ ಜಿಲ್ಲಾ ಉತ್ಸವವನ್ನಾಗಿ ಪರಿಗಣಿಸದೇ ರಾಜ್ಯ ಮಟ್ಟದ ಉತ್ಸವವನ್ನಾಗಿ ಪರಿಗಣಿಸಬೇಕು.
ಮುಂಬಯಿ ಕರ್ನಾಟಕದ ಬದಲಿಗೆ ಕಿತ್ತೂರು ಕರ್ನಾಟಕ ಎಂಬ ಮರುನಾಮಕರಣ ಮಾಡಬೇಕು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕೆಲವು ಶಾಖೆಯನ್ನು ಕಿತ್ತೂರು ಪಟ್ಟಣದಲ್ಲಿ ಆರಂಭಿಸಬೇಕು ಅದಕ್ಕಾಗಿ ಅಗತ್ಯ ಸ್ಥಳಾವಕಾಶವನ್ನು ಒದಗಿಸಲಾಗುವುದು. ಉತ್ಸವಕ್ಕೆ 2 ಕೋಟಿ ಅನುದಾನ ನೀಡಬೇಕು.
ಏತ ನೀರಾವರಿಗೆ ಆದ್ಯತೆ ನೀಡುವುದು ಮತ್ತು ಅಗತ್ಯ ಅನುದಾನ ನೀಡಬೇಕು. ಅರಮನೆ ಮಾದರಿ ಮರು ಸೃಷ್ಟಿ ಕಾರ್ಯ ಈಗಾಗಲೇ ಪ್ರಗತಿಯಲ್ಲಿದೆ. ಬಾಕಿ ಉಳಿದ ರೂ.40 ಕೋಟಿ ಅನುದಾನವನ್ನು ಮಂಜೂರು ಮಾಡಬೇಕು ಇದಕ್ಕಾಗಿ ಆರ್ಥಿಕ ಇಲಾಖೆಯಲ್ಲಿ ಸಲ್ಲಿಸಲಾದ ಬೇಡಿಕೆ ಅನುಸಾರ 150 ಕೋಟಿ ಅನುದಾನವನ್ನು ನೀಡಬೇಕು.
ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಿಸುವ ಪ್ರೀತಿಯ ಮನವಿ ಇದೆ ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಅಗತ್ಯ ಅನುದಾನ ಮಂಜೂರಿಸುವಂತೆ ಶಾಸಕರು ಮನವಿ ಮಾಡಿದರು.

ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಂಭ್ರಮದಲ್ಲಿ ಭಾಗಿಯಾಗಲು ಸಂತೋಷ ಅನಿಸುತ್ತದೆ.
ನನ್ನ ಹಳೆಯ ದಿನಗಳು ನೆನಪಾದವು ಈ ಮೊದಲು ಈ ತರಹದ ವ್ಯವಸ್ಥೆ ಇರಲಿಲ್ಲ, ತುಂಬ ಇಕ್ಕಟ್ಟಾದ ರಸ್ತೆ.ಸರಿಯಾದ ವ್ಯವಸ್ಥೆ ಇರಲಿಲ್ಲ. ಪ್ರಾಧಿಕಾರದ ರಚನೆಯಾಗಿದ್ದ 2008 ರಲ್ಲಿ ಉಳಿತಾಯವಾದ 8 ಕೋಟಿ ಅನುದಾನವನ್ನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಆ ಸಂದರ್ಭದಲ್ಲಿ ಮಂಜೂರು ಮಾಡಿದ್ದೆ.
ರಾಣಿ ಕಿತ್ತೂರು ಚನ್ನಮ್ಮಾಜಿ ಜ್ಯೋತಿ ಕೇವಲ ಜಿಲ್ಲೆಗೆ ಸೀಮಿತವಾಗಬಾರದು ಇಡೀ ಕರ್ನಾಟಕದ ತುಂಬ ಒಂದು ತಿಂಗಳ ಪರ್ಯಂತ ಸುತ್ತಿ ಬೆಂಗಳೂರು ಮೂಲಕ ಕಿತ್ತೂರು ತಲುಪುವಂತಾಗಲು ಆದೇಶಿಸಿದರು.

ಉತ್ಸವ ರಾಜ್ಯಮಟ್ಟದ ಉತ್ಸವವನ್ನಾಗಿ ಅಧಿಕೃತವಾಗಿ ಆದೇಶ ಮಾಡಲು ಸೂಚಿಸುವುದಾಗಿ ಹೇಳಿದರು.
ಬ್ರಿಟಿಷ್ ಸರ್ಕಾರಕ್ಕೆ ಕಪ್ಪು ತೆರಿಗೆ ಹಣ ನೀಡಲು ನಿರಾಕರಿಸುವ ಮೂಲಕ ಬ್ರಿಟಿಷ್ ಸರ್ಕಾರದ ವಿರುದ್ದ ಬಂಡೆದ್ದ ಈ ನೆಲದ ದಿಟ್ಟ ಮೊಟ್ಟ ಮೊದಲ ಹೋರಾಟಗಾರ್ತಿ.

ಕಿತ್ತೂರು ತನ್ನದೇಯಾದ ಮಹತ್ವವನ್ನು ಹೊಂದಿದೆ ಈ ನೆಲದ ಮಕ್ಕಳು ರಾಯಣ್ಢ ಚನ್ನಮ್ಮನಂತಾಗಬೇಕು ಅನ್ನೋ ಆಸೆ ಈ ನೆಲದಲ್ಲಿ ಉಳಿಯುವ ಮೂಲಕ ಚನ್ನಮ್ಮ ಮನೆ ಮನದಲ್ಲೂ ನಮ್ಮಲ್ಲಿ ಆದರ್ಶ ಪ್ರಾಯಳಾಗಿ ಮಿಂಚಿದ್ದಾಳೆ.

ಸಂಘಟನೆಯ ಮೂಲಕ ಕಿತ್ತೂರು ಸ್ವತಂತ್ರವಾಗಲು ರಾಯಣ್ಣ ಅಮಟೂರು ಬಾಳಪ್ಪ ಮೊದಲಾದವರು ಹೋರಾಟಕ್ಕಳಿದಾಗ ಅವಳ ಮಾನಸ ಪುತ್ರ ರಾಯಣ್ಣನನ್ನು ಸೆರೆಹಿಡಿದಿರುವುದಾಗಿ ಚನ್ನಮ್ಮಾಜಿ ಸೆರೆಯಲ್ಲಿದ್ದ ಸಂದರ್ಭದಲ್ಲಿ ಕೇಳಿ ಆಕ್ರಂದನಕ್ಕೊಳಗಾಗಿ ಕುಸಿದು ತನ್ನ ಪ್ರಾಣವನ್ನು ಈ ಸ್ವತಂತ್ರಕ್ಕಾಗಿ ಮುಡಿಪಾಗಿಟ್ಟಿದ್ದು ಇತಿಹಾಸ.

ದೇಶ ಉಳಿದರೆ ನಾವು ಉಳಿಯುವುದು ದೇಶ ಮೊದಲು ದೇಶದ ರಕ್ಷಣೆ ಅಭ್ಯುದಯುಖ್ಯವಾಗಿದ್ದು ಆ ಹಿನ್ನೆಲೆ ದೇಶದ ಪ್ರಧಾನಿ ಮೋದಿಯವರು ನಿರಂತರವಾಗಿ ಶ್ರಮಿಸಿದ್ದು ನಮ್ಮೆಲ್ಲರ ಭಾಗ್ಯ ಎಂದರು.

ಶಾಸಕರ ಬೇಡಿಕೆಗಳನ್ನು ಪರಿಗಣಿಸಿದ್ದು ಮುಂಬೈ ಕರ್ನಾಟಕ ಕಿತ್ತೂರು ಕರ್ನಾಟಕ ಆಗಬೇಕು ಅನ್ನೋ ಆಶಯಕ್ಕೆ ಹಂಚಿ ಹರಿದು ಹೋದ ಕರ್ನಾಟಕದ ಅಖಂಡತೆಯನ್ನು ಮುಂಬರುವ ಸಚಿವ ಸಂಪುಟದಲ್ಲಿ ಕಿತ್ತೂರು ಕರ್ನಾಟಕ ಮಾಡಲು ಖಂಡಿತ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಪ್ರಾಧಿಕಾರಕ್ಕೆ ಮಾರ್ಚ ನಂತರದ ಬಜೆಟ್ ನಲ್ಲಿ ಹೆಚ್ಚಿನ ಹಣ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಶಿಕ್ಷಣಕ್ಕೆ ಉದ್ಯೋಗಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕಾಲಕಾಲಕ್ಕೆ ಅದನ್ನು ಕಲ್ಪಿಸಿಕೊಡುವ ಆಸೆ ಸರ್ಕಾರಕ್ಕೆ ಇದ್ದು ಕಾನೂನು ಚೌಕಟ್ಟಿನಲ್ಲಿ ಲಿಂಗಾಯತ ಸಮುದಾಯಕ್ಕೆ ಅಗತ್ಯ ಕಾನೂನಾತ್ಮಕ ಪರಿಹಾರ ನೀಡಲು ರೂಪು ರೇಷೆ ಹಾಕಿಕೊಳ್ಳಲಾಗಿದೆ.

ರಾಜ್ಯ ಪ್ರಾಚ್ಯವಸ್ತು ಸಂಗ್ರಹಾಲಯದ ಸಹಯೋಗದಲ್ಲಿ ಹೆದ್ದಾರಿಯಲ್ಲಿ ಚನ್ನಮ್ಮಾಜಿ ಮೂರ್ತಿ ಅಭಿವೃದ್ದಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಎಲ್ಲ ಸಮುದಾಯದ ಭಾವನೆಗಳಿಗೆ ಧಕ್ಕೆ ಬಾರದಂತೆ ಆಡಳಿತ ನಡೆಸಲಾಗುವುದು ರಾಯಣ್ಣ ಹೆಸರಿನಲ್ಲಿ ಮಿಲಿಟರಿ ಶಾಲೆ ಕುರಿತು ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಚನ್ನಮ್ಮಾಜಿ ಉತ್ಸವವನ್ನು ರಾಜ್ಯಮಟ್ಟದಲ್ಲಿ ಆಚರಿಸಲು ಕ್ರಮ ಕೈಗೊಳ್ಳಲಾಗುವುದು.

ಬೆಳಗಾವಿ ಧಾರವಾಡ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಡಬಲ್ ಲೈನ್ ಬೆಳಗಾವಿ ಬೆಂಗಳೂರು ಕೇವಲ 5 ಗಂಟೆಯಲ್ಲಿ ತಲುಪಲು ಅಗತ್ಯ ಹೈ ಸ್ಪೀಡ್ ರೈಲು ಲೈನ್ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಪರಿಹಾರ ಚೆಕ್ ವಿತರಿಸುತ್ತಿರುವುದು

ಇದೆ ವೇಳೆ ಡಾ.ಸಂತೋಷ ಹಾನಗಲ್ ಸಂಶೋಧಕರು ರಚಿಸಲಾದ ರಾಣಿ ಚನ್ನಮ್ಮಾಜಿ ಸಾಹಸಗಾಥೆ ಕುರಿತಾದ ಕೃತಿ ಭಾರತ ಸ್ವಾತಂತ್ರ್ಯದ ಬೆಳ್ಳಿ ಚುಕ್ಕಿ ಕೃತಿ ಲೋಕಾರ್ಪಣೆ.ಪಟ್ಟಣದಲ್ಲಿ ಅಳವಡಿಸಲಾದ ಸಿ.ಸಿ. ಕ್ಯಾಮೆರಾ ಉದ್ಘಾಟನೆ.

ಕೋವಿಡ್ ನಿಂದಾಗಿ ಮೃತರಾದ ಕುಟುಂಬದವರಿಗೆ ಪರಿಹಾರ ಧನ ಚೆಕ್ ವಿತರಣೆ ಮಾಡಿದರು, ಕವಿತಾ ಮಿಶ್ರಾ ರವರಿಗೆ ಹಾಗೂ ಕಿತ್ತೂರು ವಂಶಜರಾದ ಬಾಳಾಸಾಹೇಬ ದೇಸಾಯಿ ಅವರಿಗೆ ಸನ್ಮಾನ ಮಾಡಲಾಯಿತು.

ಸ್ವಾತಂತ್ರ್ಯ ದೊರೆತ ನಂತರದ ಈ ದಿನಗಳಲ್ಲಿ ಅದಕ್ಕಾಗಿ
ಹೋರಾಡಿದ ಹೋರಾಟಗಾರರ ಕುರಿತು ಅಧ್ಯಯನ ನಡೆಯಬೇಕು.ಅಂತಹ ಹೋರಾಟಗಾರರ ಹೆಸರುಗಳನ್ನು ಸರ್ಕಾರದ ಯೋಜನೆಗಳಿಗೆ ಇರಿಸದೇ ಒಂದೇ ಕುಟುಂಬದವರ ಹೆಸರನ್ನು ಇಟ್ಟಿದ್ದು ನಾವೆಲ್ಲ ಕಂಡಿದ್ದೇವೆ ಅಂತ ಪರೋಕ್ಷವಾಗಿ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರನ್ನು ಕುಟುಕಿದರು. ರಾಯಣ್ಣನ ಸಾಮರ್ಥ್ಯದ ಮೇಲೆ ಚನ್ನಮ್ಮಾಜಿ ಇರಿಸಿದ ಅಪಾರ ನಂಬಿಕೆಯ ಪ್ರತಿಫಲ ಈ ಕಿತ್ತೂರು ವಿಜಯೋತ್ಸವಕ್ಕೆ ಮುಖ್ಯ ಕಾರಣ.

ಕಾಲೇಜುಗಳಲ್ಲಿ ಕಿತ್ತೂರು ಇತಿಹಾಸವನ್ನು ಬಿಂಬಿಸುವ ಪ್ರಬಂಧ ರಚನೆ ಭಾಷಣ ಸಂಶೋಧನಾ ಕೃತಿ ತರಹದ ಸ್ಪರ್ಧೆ ಇರಿಸುವ ಮೂಲಕ ಗತ ಇತಿಹಾಸವನ್ನು ಪುನರ್ ಸೃಷ್ಟಿಸುವ ಮತ್ತು ಇಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಆಗಬೇಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಮೂಲಭೂತ ಸೌಲಭ್ಯಗಳಿಗೆ ಸರ್ಕಾರ ಸ್ಪಂದಿಸಿ ಅಗತ್ಯ ಅನುದಾನ ಒದಗಿಸುತ್ತಿದೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮತ್ತು ಇತರೆ ಹೋರಾಟಗಾರರು ಮತ್ತವರ ಹೋರಾಟದ ಇತಿಹಾಸವನ್ನು ಇಂದಿನ ಪೀಳಿಗೆಗೂ ತಲುಪಿಸುವ ಕಾರ್ಯ ಮಾಡಬೇಕಿದೆ ಎಂದು ಆನಂದ ಮಾಮನಿ ಹೇಳಿದರು.

ಕಿತ್ತೂರು ಉತ್ಸವದಿನ ಅಲಂಕಾರಗೊಂಡ ಚನ್ನಮನ ವೃತ್ತ

ಕವಿತಾ ಮಿಶ್ರಾ ಮಾತನಾಡಿ ಈ ನಾಡಿನ ದಿಟ್ಟ ಮೊಟ್ಟ ಮೊದಲ ಹೋರಾಟಗಾರಳಾದ ರಾಣಿ ಚನ್ನಮ್ಮಾಜಿಯ ಕಿತ್ತೂರು ಉತ್ಸವದಲ್ಲಿ ಸನ್ಮಾನಿತಳಾಗಿದ್ದು ನನ್ನ ಸಂತೃಪ್ತಿಯ ಕ್ಷಣಗಳಲ್ಲಿ ಒಂದು. ಯಾವುದೇ ಕಾರಣಕ್ಕೂ ಯಾವುದೇ ಕಷ್ಟ ಬಂದರೂ ಕೊಟ್ಟ ಮನೆಗೆ ಮತ್ತು ಹುಟ್ಟಿದ ಮನೆಗೆ ಕೀರ್ತಿ ತರುವ ಕಾರ್ಯಕ್ಕೆ ಸನ್ನದ್ದರಾಗುವಂತೆ ಸಲಹೆ ನೀಡಿದರು.

ಸಚಿವ ಮುರುಗೇಶ ನಿರಾಣಿ ಮಾತನಾಡಿ ಹುಬ್ಬಳ್ಳಿ ಬೆಳಗಾವಿ ಯಲ್ಲಿ ಡೊಮೆಸ್ಟಿಕ್ ವಿಮಾನ ನಿಲ್ದಾಣ ಮತ್ತು ಕಿತ್ತೂರು ಪಟ್ಟಣದಲ್ಲಿ ಅಂತರಾಷ್ಟ್ರೀಯ ರಾಣಿ ಚನ್ನಮ್ಮಾಜಿ ಹೆಸರಿನಲ್ಲಿ ವಿಮಾನ ನಿಲ್ದಾಣ ಮಾಡಲು ಸರ್ಕಾರ ಸಿದ್ದವಿದೆ ಸ್ಥಳೀಯ ಶಾಸಕರ ಬೇಡಿಕೆಗಳು ತುಂಬ ಸೂಕ್ತವಾಗಿದ್ದು ಆ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಕ್ರಮ ವಹಿಸುವುದಾಗಿ ಹೇಳಿದರು.

ಪೂಜ್ಯ ವಚನಾನಂದ ಸ್ವಾಮೀಜಿ ಹರಿಹರ ಪೀಠ
ಶ್ರೀಗಳು ಮಾತನಾಡಿ ರಾಜವಂಶಸ್ಥರು ರಾಣಿಯರು ಈ ಭಾರತದ ಇತಿಹಾಸದಲ್ವಿ ಆಳ್ವಿಕೆ ನಡೆಸಿದ್ದರೂ ರಾಣಿ ಚನ್ನಮ್ಮಾಜಿ ಹೋರಾಟದ ಹಿನ್ನೆಲೆಯಲ್ಲಿ ಈ ಎಲ್ಲ ರಾಣಿಯರಲ್ಲಿ ಅಗ್ರಗಣ್ಯರಾಗಿದ್ದಾರೆ.
ಕಿತ್ತೂರು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸವಂತಾಗಬೇಕು ಹಾಳಾಗಿರುವ ಕೋಟೆಯ ಪುನರುತ್ಥಾನ ಕಾರ್ಯ ಬೊಮ್ಮಾಯಿಯವರ ಆಡಳಿತದಲ್ಲಿ ಈ ಆಶಯ ಈಡೇರುತ್ತಿರುವುದು ಸಂತೋಷದ ಸಂಗತಿ.

ಸಿಎಂ ಅವರಿಗೆ ನೆನಪಿನ ಕಾಣಿಕೆ ನೀಡುತ್ತಿರುವುದು

ಈ ಹಿಂದಿನ ಕಲ್ಮಠಕ್ಕೂ ಈಗಿನ ಕಲ್ಮಠಕ್ಕೂ ಅಜಗಜಾಂತರ ಬದಲಾವಣೆ ಆಗಿದ್ದು ವಿಶೇಷ ಇದಕ್ಕೆ ಕಾರಣೀಭೂತರಾದ ಶ್ರೀಗಳ ಕಾರ್ಯತತ್ಪರತೆ ಮೆಚ್ಚುವಂತದ್ದು. ಕಿತ್ತೂರು ಐತಿಹಾಸಿಕ ಪರಂಪರೆಯ ಥ್ಯಾಕರೆ ಸಮಾಧಿ ಮುಂತಾದ ಕುರುಹುಗಳ ಸಂರಕ್ಷಣೆಯಾಗಬೇಕಿದೆ. ಮುಖ್ಯಮಂತ್ರಿಗಳ ಮನವೊಲಿಸಿ ಕಿತ್ತೂರು ಅಭಿವೃದ್ದಿಗೆ ಅನುದಾನ ತರುವ ನಿಟ್ಟಿನಲ್ಲಿ ಶಾಸಕರ ಶ್ರಮವೂ ಶ್ಲಾಘನೀಯ. ಕಲ್ಯಾಣ ಕರ್ನಾಟಕದ ಮಾದರಿಯಲ್ಲೆಯೇ ಕಿತ್ತೂರು ಕರ್ನಾಟಕ ಹಾಗೂ ರಾಷ್ಟ್ರೀಯ ಸ್ಮಾರಕವನ್ನಾಗಿ ರೂಪುಗೊಳ್ಳಲು ಅಗತ್ಯ ಅನುದಾನ ಘೋಷಿಸಿದ ಮಾನ್ಯ ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಸಂತೋಷ ಅನಿಸುತ್ತದೆ ಎಂದರು.

ಸುವರ್ಣ ವಿಧಾನಸೌಧದಲ್ಲೆ ಅಧಿವೇಶನಕ್ಕೆ ಹೋಗುವ ಮುನ್ನ ಬೈಲಹೊಂಗಲದ ಚನ್ನಮ್ಮಾಜಿ ಸಮಾಧಿಗೆ ಹೋಗಿ ಗೌರವ ಸಲ್ಲಿಸಿ ಅಧಿವೇಶನಕ್ಕೆ ಭಾಗಿಯಾಗುವಂತಾಗಲಿ ಅನ್ನೋ ಬೇಡಿಕೆ ಇದೆ

ಜಯಮೃತ್ಯುಂಜಯ ಶ್ರೀಗಳು ಕೂಡಲಸಂಗಮ ಪೀಠ
ಈ ಉತ್ಸವದಲ್ಲಿ ಭಾಗಿಯಾಗುವುದೇ ಒಂದು ಸಂಭ್ರಮ ಇಂತ ಉತ್ಸವದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದು ಅತ್ಯಂತ ಸಂತೋಷದ ಸಂಗತಿ.
ಚನ್ನಮ್ಮನ ಐಕ್ಯಸ್ಥಳದ ಅಭಿವೃದ್ದಿಗೆ ಹಾಗೂ ಆ ಇತಿಹಾಸದ ಪರಂಪರೆಯ ಉಳಿವಿಗೆ ಹಾಗೂ ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಲು 2018 ರಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು ಬಸವರಾಜ ಬೊಮ್ಮಾಯಿ ಅವರ ಆಡಳಿತಾವಧಿಯಲ್ಲಿ ಈ ಎಲ್ಲ ಬೇಡಿಕೆ ಈಡೇರಿದ್ದು ನಿಜಕ್ಕೂ ಅಭಿಮಾನದ ಸಂಗತಿಯಾಗಿದೆ.

ಈ ಕಿತ್ತೂರು ಯಾವಾಗಲೋ ಅಭಿವೃದ್ದಿ ಆಗಬೇಕಿತ್ತು ಮಹಾತ್ಮ ಗಾಂಧೀಜಿಯವರನ್ನು ಈ ದೇಶದ ಮಹಾತ್ಮ ಅಂತ ಘೋಷಿಸಿದ ಮಾದರಿಯಲ್ಲೇ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ಕಿತ್ತೂರು ಸಂಗ್ರಾಮವನ್ನಾಗಿ ಘೋಷಿಸಬೇಕು ಚನ್ನಮ್ಮಾಜಿಯವರ ಹೋರಾಟದ ಹಿನ್ನೆಲೆಯಲ್ಲಿ ಮರಣೋತ್ತರವಾಗಿ ಭಾರತರತ್ನ ಪುರಸ್ಕಾರ ನೀಡಬೇಕು ಅನ್ನೋ ಬೇಡಿಕೆ ನಮ್ಮದು ಈ ಹಿನ್ನೆಲೆಯಲ್ಲಿ ದೇಹಲಿವರೆಗೂ ರಾಣಿ ಚನ್ನಮ್ಮ ಅವರ ಹೋರಾಟದ ದಿಟ್ಟ ಇತಿಹಾಸ ತಲುಪಬೇಕಿದೆ.

ಕಿತ್ತೂರಿನ ಕಲ್ಮಠ ಶ್ರೀಗಳು ಮಾತನಾಡಿ
ಸ್ಥಳೀಯ ಶಾಸಕರು ಸೇರಿದಂತೆ ಸಚಿವರು ಮತ್ತು ಮುಖ್ಯಮಂತ್ರಿಗಳು ಕಿತ್ತೂರು ನೆಲದ ಬಗ್ಗೆ ಇಲ್ಲಿನ ಇತಿಹಾಸದ ಬಗ್ಗೆ ಕೊಟ್ಟ ಮಾತು ಭರವಸೆಗಳನ್ನು ಈಡೇರಿಸಲು ಮೊದಲು ಕಾರ್ಯತತ್ಪರರಾಗಬೇಕು. ಕೇವಲ ಉತ್ಸವದ ವೇದಿಕೆಗಳಲ್ಲಿ ಭಾಷಣ ಮಾಡಿದರೆ ಏನೂ ಆಗದು ಅಭಿವೃದ್ದಿ ಮಾತಾಗಬೇಕು ಎಂದರು.

ಜಿಲ್ಲೆ

ರಾಜ್ಯ

error: Content is protected !!