Tuesday, May 28, 2024

ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಹಾಗೂ ಕಲ್ಮಠದ ಶ್ರೀಗಳು,ಶಾಸಕರು

ಕಿತ್ತೂರ (ಅ.23) :ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಐತಿಹಾಸಿಕ ಹಿನ್ನೆಲೆಯುಳ್ಳ ವೀರ ರಾಣಿ ಚನ್ನಮ್ಮಾಜಿ ವಿಜಯೋತ್ಸವಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ.

ಪಟ್ಟಣದ ಗಡಾದ ಮರಡಿಯಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನಂದಿ ಧ್ವಜಾರೋಹನ ಮಾಡಿ ಚಾಲನೆ ನೀಡಿದರು.

ಚನ್ನಮ್ಮ ವೃತ್ತದಲ್ಲಿ ಸಂಸದರಾದ ಮಂಗಲಾ ಅಂಗಡಿ ಅವರು ನಂದಿ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು. ನಂತರ ಕಿತ್ತೂರು ವಿಜಯೋತ್ಸವದ ವಿಜಯ ಜ್ಯೋತಿಯನ್ನು ಪೂಜೆ ಮಾಡುವುದರ ಮೂಲಕ ಶಾಸಕರು ಸಂಸದರು ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಬರಮಾಡಿಕೊಂಡರು.

ಅಲ್ಲಿಯೇ ಜನಪದ ಕಲಾಮೇಳಗಳನ್ನು ಒಳಗೊಂಡ ಅದ್ದೂರಿ ಮೆರವಣಿಗೆಗೆ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ರಾಜಗುರು ಸಂಸ್ಥಾನ ಕಲ್ಮಠ ಕಿತ್ತೂರು ಇವರು ಚಾಲನೆ ನೀಡಿದರು.

ಕೆ.ಎನ್.ವಿ.ವಿ ಕಾಲೇಜು ಆವರಣದಲ್ಲಿನ ವಸ್ತು ಪ್ರದರ್ಶನ ಮಳಿಗೆಗಳನ್ನು ಶಾಸಕ ಮಹಾಂತೇಶ ದೊಡ್ಡಗೌಡರ ಉದ್ಘಾಟಿಸಿದರು.

ಉತ್ಸವದಲ್ಲಿ ಮುಂಜಾನೆ ಆರಂಭ ಗೊಂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಗೀತ ಗಾನ ಸುದೆ ಹಾಡಿದ ಕಿತ್ತೂರು ಪ್ರತಿಭೆ ಗಳಾದ ಕುಮಾರ ಪಂಕಜ ಹಾಗೂ ಶಿವಾನಂದ ಉತ್ತಮ ಪ್ರತಿಭೆ ಪ್ರದರ್ಶನಮಾಡಿದರು. ಇವರಿಗೆ ಮುಖ್ಯ ವೇದಿಕೆಯಲ್ಲಿ ಕಿತ್ತೂರು ತಾಲೂಕಾ ಕ ಸಾ ಪ ಅಧ್ಯಕ್ಷರಾದ ಡಾ ಸೋಮಶೇಖರ ಹಲಸಗಿ ಯವರು. ಜಿಲ್ಲಾ ಆಡಳಿತ ಪರವಾಗಿ ಬಾಲ ಪ್ರತಿಭೆ ಗಳಿಗೆ ಸ್ಮರಣಿಕೆ ಪ್ರ ಪತ್ರ ನೀಡಿ ಗೌರವಿಸಿದರು.

ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಕಿತ್ತೂರು ಉತ್ಸವಕ್ಕೆ ಈ ಬಾರಿ ಅದ್ದೂರಿ ಚಾಲನೆ ದೊರೆತಿದ್ದು ಸಂಜೆ 7.00 ಗಂಟೆಗೆ ಕೋಟೆ ಆವರಣದಲ್ಲಿನ ಬೃಹತ್ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದು ಉತ್ಸವದ ಸಂಭ್ರಮಕ್ಕೆ ಸಹಸ್ರಾರು ಜನ ಸಾಕ್ಷಿಯಾಗಿದ್ದು ಅಪಾರ ಸಂಖ್ಯೆಯಲ್ಲಿ ಜನಸಾಗರ ಹರಿದು ಬರುತ್ತಿದೆ.

ನೆತ್ತಿ ಸುಡುವ ಬಿಸಿಲಿನ ಧಗೆಯ ಬಾಯಾರಿಕೆ ತಣಿಸಲು ಇಲ್ಲಿನ ಬಸವ ಮೋಟರ್ಸ್ ಮಾಲೀಕರಾದ ಬಸವರಾಜ ಚಿನಗುಡಿ ಮತ್ತು ಸಂತೋಷ ತಲ್ಲೂರ ಸಹಯೋಗದಲ್ಲಿ ನೂರಾರು ಜನರಿಗೆ ಮಜ್ಜಿಗೆ ಮತ್ತು ತಂಪು ನೀರು ನೀಡುವ ಮೂಲಕ ಸೇವೆ ಮಾಡಿದ್ದು ವಿಶೇಷವಾಗಿತ್ತು.

 

ಜಿಲ್ಲೆ

ರಾಜ್ಯ

error: Content is protected !!