Thursday, September 19, 2024

ಸ್ಥಳೀಯ ಸುದ್ದಿ

ಗೋಮಾಳಗಳನ್ನು ರಕ್ಷಿಸಿಕೊಳ್ಳಲು ರೈತ ಸಂಘಟನೆಗಳು ಪ್ರತಿಭಟಸಬೇಕೆಂದು ಬಿ.ಎಂ.ಚಿಕ್ಕನಗೌಡರ ಆಗ್ರಹ.

ಬೈಲಹೊಂಗಲ:ಸಂಘ ಪರಿವಾರದ ಅನತಿಯಂತೆ ರಾಜ್ಯದ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತಂದು ಗೋವುಗಳನ್ನು ಮಾರದಂತೆ ರಕ್ಷಿಸಿದ್ದು. ರಕ್ಷಿತ ಗೋವುಗಳಿಗೆ ಮೇವು ಉತ್ಪಾದಿಸುವ ರಾಜ್ಯದ 19.39ಲಕ್ಷ ಎಕರೆ ಗೋಮಾಳವನ್ನೇ ಸಂಘ ಪರಿವಾರ ನುಂಗಲು ಸಂಚು ರೂಪಿಸಿದೆ. ಗೋವುಗಳ ಮೇವಿಗಾಗಿ ಇದ್ದ ಗೋಮಾಳಗಳನ್ನು ಉಳಿಸಲು ರಾಜ್ಯದ ರೈತ ಸಂಘಟನೆಗಳು ಮುಂದಾಗಬೇಕು ಎಂದು ಬಿ.ಎಂ.ಚಿಕ್ಕನಗೌಡರ ಮಾಧ್ಯಮಯೊಂದಕ್ಕೆ...

ಉಪವಾಸ ಸತ್ಯಾಗ್ರಹ: ಓರ್ವ ವ್ಯಾಪಾರಿ ಅಸ್ತವ್ಯಸ್ಥ. ಖಾಸಗಿ ಭಾಜಿ ಮಾರ್ಕೆಟ್ ಅವಾಂತರ

ಬೆಳಗಾವಿ: ಬೆಳಗಾವಿ ಖಾಸಗಿ ಭಾಜಿ ಮಾರ್ಕೆಟ್ ಬಂದ್ ಮಾಡುವಂತೆ ಆಗ್ರಹಿಸಿ ರೈತ ಮುಖಂಡರು, ವ್ಯಾಪಾರಿಗಳು ನಡೆಸುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದ ಓರ್ವ ವ್ಯಾಪಾರಿ ಆರೋಗ್ಯದಲ್ಲಿ ಏರುಪೇರಾಗಿರುವ ಘಟನೆ ನಡೆದಿದೆ. ಬೆಳಗಾವಿ ಎಪಿಎಂಸಿ ಕಚೇರಿಯ ಮುಂಭಾಗದಲ್ಲಿ ಭಾರತೀಯ ಕೃಷಿಕ ಸಮಾಜ, ಬೆಳಗಾವಿ ಜಿಲ್ಲಾ ಸಗಟು ತರಕಾರಿ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘ ಹಾಗೂ ವಿವಿಧ ರೈತಪರ, ಕಾರ್ಮಿಕ ಮಹಿಳಾ...

ಸೂರ್ಯ ದೇವರ ದರ್ಶನ ಪಡೆದು ಪುನೀತರಾದ ಭಕ್ತರು.

ಚನ್ನಮ್ಮನ ಕಿತ್ತೂರು : ಸಮೀಪದ ಗಿರಿಯಾಲ ಗ್ರಾಮದ ಸೂರ್ಯ ದೇವರ ಜಾತ್ರೆಯಲ್ಲಿ ಸೋಮವಾರ ವಿಜ್ರಂಭಣೆಯಿಂದ ರಥೋತ್ಸವ ನಡೆಯಿತು. ನೂತನವಾಗಿ ನಿರ್ಮಿಸಿರುವ ಈ ದೇವಸ್ಥಾನವೂ ಹಲವಾರು ವಿಶೇಷತೆಗಳಿಂದ ಕೂಡಿದ್ದು ಸೂರ್ಯನಾರಾಯಣ ಸ್ವಾಮೀಯ ದೇವಸ್ಥಾನ ಇದಾಗಿದೆ, ಅಲ್ಲದೆ ಸೂರ್ಯ ದೇವರ ಸ್ವಾಮೀಯ ಸುತ್ತಲೂ ನವಗ್ರಹ ಮೂರ್ತಿಗಳಿವೆ. ಸೋಮವಾರ ರಥಸಪ್ತಮಿಯ ದಿನವಾದ ಕಾರಣದಿಂದ ನೂತನವಾಗಿ ನಿರ್ಮಿಸಿದ್ದ ರಥದ ಉತ್ಸವವೂ ನಡೆಯಿತು....

ನೂತನ ಕಸಾಪ ಅಧ್ಯಕ್ಷರಾದ ಎನ್.ಆರ್ ಠಕ್ಕಾಯಿ ಅವರಿಗೆ ಸನ್ಮಾನ

ಬೈಲಹೊಂಗಲ: ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಬೈಲಹೊಂಗಲ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಎನ್.ಆರ್ ಠಕ್ಕಾಯಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್.ಕಸಾಳೆ ಮಾತನಾಡಿ ಪರಿಷತ್ತಿನಿಂದ ಕನ್ನಡದ ವಿನೂತನ ಕಾರ್ಯಕ್ರಮಗಳು ಜರುಗಲಿ ಎಂದು ಅಭಿಪ್ರಾಯಪಟ್ಟರು. ಈ ಕಾರ್ಯಕ್ರಮದಲ್ಲಿ ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು, ಸಮನ್ವಯಾಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು....

ಖಾಸಗಿ ಮಾರುಕಟ್ಟೆಯ ವಿಚಾರ: ರೈತ ಮುಖಂಡರೊಂದಿಗೆ ಸತೀಶ್ ಜಾರಕಿಹೊಳಿ ಮಾತುಕತೆ

ಬೆಳಗಾವಿ: ರೈತರು ಹಾಗೂ ವ್ಯಾಪಾರಸ್ಥರು ಜೈ ಕಿಸಾನ ಖಾಸಗಿ ಮಾರುಕಟ್ಟೆ ರದ್ದುಪಡಿಸುವ ಸಲುವಾಗಿ ನಡೆದ ಅನಿರ್ದಿಷ್ಟ ಆಮರಣ ಉಪವಾಸ ಸತ್ಯಾಗ್ರಹ ಇವತ್ತು 6 ನೇಯ ದಿನ ಯಶಸ್ವಿಯಾಯಿತು. ಈ ಹೋರಾಟಕ್ಕೆ ಯಮಕನಮರಡಿ ಶಾಸಕರಾದ ಸತೀಶ ಜಾರಕಿಹೊಳಿ ಅವರು ಇಂದು ಸಾಯಂಕಾಲ ಧರಣಾ ಸ್ಥಳಕ್ಕೆ ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು. ನಗರದಲ್ಲಿ ಜೈ ಕಿಸಾನ್ ಖಾಸಗಿ ಮಾರುಕಟ್ಟೆಯನ್ನು ಬಂದ್...

ಪ್ರತಿಷ್ಠಿತ ಜಿ. ನಾರಾಯಣಸ್ವಾಮಿ ಪ್ರಶಸ್ತಿ ಪುರಸ್ಕೃತ ಈಶ್ವರ ಹೋಟಿ ಅವರಿಗೆ ಸನ್ಮಾನ

ಬೈಲಹೊಂಗಲ: ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಂಗಸಂಸ್ಥೆಯಾದ ಹಾಗೂ ಕರ್ನಾಟಕ ಸರಕಾರದಿಂದ ಮಾನ್ಯತೆ ಪಡೆದಿರುವ ಏಕೈಕ ಬೃಹತ್ ಪ್ರಮಾಣದ ಪತ್ರಕರ್ತರ ಸಂಘಟನೆಯಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅತ್ಯುತ್ತಮ ಗ್ರಾಮಾಂತರ ವರದಿ (ಲೇಖನ)ಗಳಿಗೆ ಕೊಡಮಾಡುವ ಪ್ರತಿಷ್ಠಿತ ಜಿ. ನಾರಾಯಣಸ್ವಾಮಿ ಪ್ರಶಸ್ತಿ ಪುರಸ್ಕೃತ ವಿಜಯ ಕರ್ನಾಟಕ ದಿನಪತ್ರಿಕೆಯ ತಾಲೂಕಾ ಮುಖ್ಯ ವರದಿಗಾರರು ಹಾಗೂ ಹಿರಿಯ ಪತ್ರಕರ್ತರಾದ...

ನಾಡು-ನುಡಿ, ಭಾಷೆ, ಧರ್ಮದ ಹೆಸರಿನಲ್ಲಿ ಮಹಾತ್ಮರ ಹೆಸರಿಗೆ ಮಸಿ ಬಳೆಯುವ ಕಾರ್ಯ ನಿಲ್ಲಿಸಿ, ಭಾರತೀಯರೆಂಬ ಸೌಹಾರ್ದತೆಯಿಂದ ಬದುಕಿ: ಬೈಲೂರ ಶ್ರೀಗಳು

 ನೇಗಿನಹಾಳ: ಕ್ಷುಲ್ಲಕ ಕಾರಣಗಳಿಗೆ ಮಹಾತ್ಮರ, ಸಂತರ, ದೇಶಭಕ್ತರ ಮೂರ್ತಿಗಳಿಗೆ ಅವಮಾನ ಸರಿಯಲ್ಲ, ನಮ್ಮ ನಾಡು, ಭಾಷೆ, ಧರ್ಮದ ಕುರಿತು ಅಭಿಮಾನವಿರಲಿ ಆದೇ ರೀತಿ ಅನ್ಯ ಭಾಷೆ, ಧರ್ಮಗಳ ಕುರಿತು ಗೌರವದಿಂದ ಬದುಕುಬೇಕು. ಈ ನೆಲದ ಮೂಲ ದ್ರಾವಿಡರಿಗೆ, ಹಿಂದೂಗಳಿಗೆ ಭಾರತ ತಾಯಿ ಆದರೆ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮೀಯರಿಗೆ ಸಾಕು ತಾಯಿ ಇದ್ದಂತೆ ಹೀಗಾಗಿ...

ಚಚಡಿಯಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಹನುಮ ಮಾಲಾ ದೀಕ್ಷೆ ಹಾಗೂ ಸಂಕಿರ್ತನಾ ಯಾತ್ರೆ ಜರುಗಿತು

ಸುದ್ದಿ ಸದ್ದು ನ್ಯೂಸ್ ಬೈಲಹೊಂಗಲ: ತಾಲೂಕಿನ ಚಚಡಿ ಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಹನುಮ ಮಾಲಾ ದೀಕ್ಷಾ ಕಾರ್ಯಕ್ರಮ ಹಾಗೂ ಸಂಕಿರ್ತನಾ ಯಾತ್ರೆ  ವಿಜೃಂಭಣೆಯಿಂದ ನಡೆಯಿತ. ವಿಶ್ವ ಹಿಂದೂ ಪರಿಷತ್ ಉತ್ತರ ಕರ್ನಾಟಕ ಪ್ರಾಂತ ಸಹ ಕೋಶಾಧ್ಯಕ್ಷ ಕೃಷ್ಣಾ ಭಟ್ಟ, ವಿಭಾಗ ಸಹಕಾರ್ಯದರ್ಶಿ ಅಚ್ಯುತ ಕುಲಕರ್ಣಿ ಹನುಮ ಮಾಲಾಧಾರಿಗಳಿಗೆ ಹಾಗೂ ಕಾರ್ಯಕರ್ತರಿಗೆ ಸಂಕೀರ್ತನ...

ನಿಘಂಟು ಬಳಕೆಯಿಂದ ಶಬ್ದ ಸಂಪತ್ತು ವೃದ್ದಿ-  ಕಿತ್ತೂರು ಬಿಇಒ ಆರ್.ಟಿ .ಬಳಿಗಾರ

ಕಿತ್ತೂರು: ತಾಲೂಕಿನ ಕಾದರವಳ್ಳಿ ಎಸ್ ವಿ ಕೆ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಸೇತು ಪುಸ್ತಕ ವಿತರಿಸುವ ಕಾರ್ಯಕ್ರಮದಲ್ಲಿ ಕಿತ್ತೂರ ಕ್ಷೇತ್ರ ಶಿಕ್ಷಣಾಧಿಕಾರಿ ಅರ್ ಟಿ ಬಳಿಗಾರ ಮಾತನಾಡಿದ ಅವರು ಭಾಷಾ ಅಧ್ಯಯನದಲ್ಲಿ ತೊಡಗಿರುವವರು ನಿಘಂಟು ಬಳಕೆ ಮಾಡುವದರಿಂದ ಸುಲಭವಾಗಿ ಶಬ್ದಸಂಪತ್ತನ್ನು ಹೆಚ್ಚಿಸಿಕೊಂಡು ನಿರರ್ಗಳವಾಗಿ ಮಾತನಾಡಲು ಮತ್ತು ಬರವಣಿಗೆ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಎಸ್ ವಿ ಕೆ...

ಬೂದಿಹಾಳದ ಸರಕಾರಿ ಪ್ರೌಢಶಾಲೆಯಲ್ಲಿ ಸೈಬರ್ ಜಾಗೃತಿ ಕಾರ್ಯಕ್ರಮ

ಬೈಲಹೊಂಗಲ: ತಾಲೂಕಿನ ಬೂದಿಹಾಳದ ಸರಕಾರಿ ಪ್ರೌಢಶಾಲೆಯಲ್ಲಿ ಸೈಬರ್ ಜಾಗೃತಿ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿಯ ಎಚ್.ಡಿ.ಎಫ್.ಸಿ ಬ್ಯಾಂಕಿನ ಆಡಿಟ್ ಅಧಿಕಾರಿಗಳಾದ ಈರಣ್ಣ ಚಂದ್ರು ಬಡಿಗೇರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಆನ್ ಲೈನ್ ವಂಚನೆ ಹೆಚ್ಚುತ್ತಿದ್ದು ಎಲ್ಲರೂ ಬಹಳಷ್ಟು ಜಾಗರೂಕರಾಗಿರುವುದು ಅಗತ್ಯವಿದೆ ಎಂದು ಹೇಳಿದರು. ಸೈಬರ್ ಅಪರಾಧಗಳು,...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!