Saturday, July 27, 2024

ನಾಡು-ನುಡಿ, ಭಾಷೆ, ಧರ್ಮದ ಹೆಸರಿನಲ್ಲಿ ಮಹಾತ್ಮರ ಹೆಸರಿಗೆ ಮಸಿ ಬಳೆಯುವ ಕಾರ್ಯ ನಿಲ್ಲಿಸಿ, ಭಾರತೀಯರೆಂಬ ಸೌಹಾರ್ದತೆಯಿಂದ ಬದುಕಿ: ಬೈಲೂರ ಶ್ರೀಗಳು

 ನೇಗಿನಹಾಳ: ಕ್ಷುಲ್ಲಕ ಕಾರಣಗಳಿಗೆ ಮಹಾತ್ಮರ, ಸಂತರ, ದೇಶಭಕ್ತರ ಮೂರ್ತಿಗಳಿಗೆ ಅವಮಾನ ಸರಿಯಲ್ಲ, ನಮ್ಮ ನಾಡು, ಭಾಷೆ, ಧರ್ಮದ ಕುರಿತು ಅಭಿಮಾನವಿರಲಿ ಆದೇ ರೀತಿ ಅನ್ಯ ಭಾಷೆ, ಧರ್ಮಗಳ ಕುರಿತು ಗೌರವದಿಂದ ಬದುಕುಬೇಕು. ಈ ನೆಲದ ಮೂಲ ದ್ರಾವಿಡರಿಗೆ, ಹಿಂದೂಗಳಿಗೆ ಭಾರತ ತಾಯಿ ಆದರೆ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮೀಯರಿಗೆ ಸಾಕು ತಾಯಿ ಇದ್ದಂತೆ ಹೀಗಾಗಿ ನಾವೆಲ್ಲರೂ ಭಾರತೀಯರು ಎಂಬ ಅಭಿಮಾನದಿಂದ ಬದುಕಬೇಕು.

ಶಿವಾಜಿ ಮಹಾರಾಜರು, ಸಂಗೊಳ್ಳಿ ರಾಯಣ್ಣ, ವಿಶ್ವಗುರು ಬಸವಣ್ಣನವರ ಮೂರ್ತಿಗಳಿಗೆ ಅವಮಾನ ಮಾಡುವುದು ಬಹಳಷ್ಟು ಸಣ್ಣತನದ ಕೆಲಸ ಎಂದು ಬೈಲೂರ ನಿಷ್ಕಲ ಮಂಟಪದ ಪೂಜ್ಯಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಹೇಳಿದರು.

ನೇಗಿನಹಾಳದ ವಿಠ್ಠಲ ರುಕ್ಮಿಣಿ ಮಂದಿರದ ಸಂತ ಜ್ಞಾನೇಶ್ವರ ಹಾಗೂ ತುಕಾರಾಮ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಯ 6ನೆಯ ವಾರ್ಷಿಕೋತ್ಸವದ ನಿಮಿತ್ತ ಮಾತನಾಡಿದ ಅವರು ಭಾರತದ ಸಂಸ್ಕ್ರತಿ, ಸಂಸ್ಕಾರ, ನಾಡು, ನುಡಿ ಪರಂಪರೆಯ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶ  ನಮ್ಮದು ಎಂದರು.

ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠದ ಬಸವ ಸಿದ್ಧಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಜ್ಞಾನೇಶ್ವರ ಮಹಾರಾಜರು ಅಗ್ರಹಾರದಲ್ಲಿ ನಡೆಯುತ್ತಿದ್ದ ಅಜ್ಞಾನ, ಅಂದಾನುಕರಣೆಯನ್ನು ತೊಲಗಿಸಲು ಭಗವತಗೀತೆಯನ್ನು ಪರಿಷ್ಕರಿಸಿ ಜ್ಞಾನೇಶ್ವರ ಗ್ರಂಥ ಬರೆದರು. ಮಣಿಗಾರ ಜಾತ್ರಿಗಿಂತ ಜ್ಞಾನದ ಜಾತ್ರೆಗೆ ಮಹತ್ವದ ಕೊಡುವುದು ಬಹಳಷ್ಟು ಸಂತಸದ ವಿಷಯ ಎಂದರು.

ಬೈಲಹೊಂಗಲ ಪ್ರಜಾಪಿತ ಬ್ರಹ್ಮಕುಮಾರಿ ರಾಜಯೋಗಿನಿ ಪ್ರಭಾ ಅಕ್ಕನವರು, ಸಿದ್ಧಾರೂಢ ಮಠದ ಅಧ್ವೈತಾನಂದ ಭಾರತಿ ಮಹಾಸ್ವಾಮಿಗಳು ಮಾತನಾಡಿದರು.

ಈ ಸಂದರ್ಭದಲ್ಲಿ ದೇಮಪ್ಪ ಪಡದಪ್ಪನವರ, ರುದ್ರಪ್ಪ ಬುಡ್ಡಪ್ಪನವರ, ಸಿದ್ದಪ್ಪ ಕಾರಿಮನಿ, ಬಾಳಪ್ಪ ಕೊಡಿ, ಬಸಪ್ಪ ಬಜೇರಿ, ಗೂಳಪ್ಪ ಭೂತಾಳಿ ಹಾಗೂ ನೇಗಿನಹಾಳ ಗ್ರಾಮದ ಗುರುಹಿರಿಯರು, ಸಮಸ್ತ ಸಂತ ಸದ್ಭಕ್ತರು ಉಪಸ್ಥಿತರಿದ್ದರು.

ಸತೀಶ ಕಾರಿಮನಿ ಪ್ರಾಸ್ತಾವಿಕ ಮಾತನಾಡಿದರು, ರಾಮಣ್ಣಾ ತೋರಣಗಟ್ಟಿ ನಿರೂಪಿಸಿದರು.

ಜಿಲ್ಲೆ

ರಾಜ್ಯ

error: Content is protected !!