Saturday, July 20, 2024

ಚಚಡಿಯಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಹನುಮ ಮಾಲಾ ದೀಕ್ಷೆ ಹಾಗೂ ಸಂಕಿರ್ತನಾ ಯಾತ್ರೆ ಜರುಗಿತು

ಸುದ್ದಿ ಸದ್ದು ನ್ಯೂಸ್

ಬೈಲಹೊಂಗಲ: ತಾಲೂಕಿನ ಚಚಡಿ ಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಹನುಮ ಮಾಲಾ ದೀಕ್ಷಾ ಕಾರ್ಯಕ್ರಮ ಹಾಗೂ ಸಂಕಿರ್ತನಾ ಯಾತ್ರೆ  ವಿಜೃಂಭಣೆಯಿಂದ ನಡೆಯಿತ.

ವಿಶ್ವ ಹಿಂದೂ ಪರಿಷತ್ ಉತ್ತರ ಕರ್ನಾಟಕ ಪ್ರಾಂತ ಸಹ ಕೋಶಾಧ್ಯಕ್ಷ ಕೃಷ್ಣಾ ಭಟ್ಟ, ವಿಭಾಗ ಸಹಕಾರ್ಯದರ್ಶಿ ಅಚ್ಯುತ ಕುಲಕರ್ಣಿ ಹನುಮ ಮಾಲಾಧಾರಿಗಳಿಗೆ ಹಾಗೂ ಕಾರ್ಯಕರ್ತರಿಗೆ ಸಂಕೀರ್ತನ ಯಾತ್ರೆಯ ಉದ್ದೇಶಿಸಿ ಮಾರ್ಗದರ್ಶನ ಮಾಡಿದರು. ಮುಖ್ಯ ಅಥಿತಿಗಳಾಗಿ ಬೆಳಗಾವಿ ಸಹ  ಕಾರ್ಯದರ್ಶಿ ಆನಂದ ಕರಲಿಂಗನವರ, ಬೈಲಹೊಂಗಲ ತಾಲೂಕಾ ಅಧ್ಯಕ್ಷ ಪ್ರಮೋದಕುಮಾರ ವಂಕ್ಕುಂದಮಠ, ಗ್ರಾಮದ ಹಿರಿಯರಾದ ನಾಗರಾಜ ದೇಸಾಯಿ ಉಪಸ್ಥಿತರಿದ್ದರು.

ಈ ವೇಳೆ ಬೈಲಹೊಂಗಲ ತಾಲೂಕಾ ಉಪಾಧ್ಯಕ್ಷ ಶಿವಾನಂದ ಬಡ್ಡಿಮನಿ, ಕಾರ್ಯದರ್ಶಿ ಅಶೋಕ ಸವದತ್ತಿ, ವಿವೇಕಾನಂದ ಪೂಜಾರ, ಮಠ ಮಂದಿರ ಪ್ರಮುಖ ಮಲ್ಲಿಕಾರ್ಜುನ ಏನಗಿಮಠ, ಸಿದ್ದು ಗಣಾಚಾರಿ, ಗ್ರಾಮದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು. ಸಂಕೀರ್ತನ ಯಾತ್ರೆಯಲ್ಲಿ ತಿಗಡಿ, ನಾವಲಗಟ್ಟಿ, ಹಲಕಿ, ಮಳಗಲಿ ಗ್ರಾಮಗಳ ಹನುಮ ಮಾಲಾದಾರಿಗಳು, ಮಾತೆಯರು ಪಾಲ್ಗೊಂಡಿದ್ದರು.

ಜಿಲ್ಲೆ

ರಾಜ್ಯ

error: Content is protected !!