Sunday, September 8, 2024

ಜಿಲ್ಲೆ

ಯಡಿಯೂರಪ್ಪ ಜೈಲಿಗೆ ಹೋಗಲು ಕುಮಾರಸ್ವಾಮಿ ಕಾರಣ: ಲಕ್ಷ್ಮಣ ಸವದಿ

ಬೆಳಗಾವಿ:ಮಾಜಿ ಸಿಎಂ ಕುಮಾರಸ್ವಾಮಿಗೆ ಸ್ವಾಭಿಮಾನ ಇರಬೇಕಿತ್ತು. ಯಾರು ಇವರನ್ನು ಇಳಿಸಿದರೋ (ಸಿಎಂ ಸ್ಥಾನದಿಂದ) ಅವರ ಜೊತೆ ದೋಸ್ತಿ ಮಾಡಿದ್ದಾರೆ. ಬಿಜೆಪಿ ಜೊತೆಗೆ ಜೆಡಿಎಸ್‌ ಹೊಂದಾಣಿಕೆ ರಾಜಕಾರಣ ರಾಜ್ಯದ ಜನ ಒಪ್ಪುವುದಿಲ್ಲ ಎಂದು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ. ಅಥಣಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಬಾರಿ ಮುಖ್ಯಮಂತ್ರಿಯಾದ ಕುಮಾರಸ್ವಾಮಿಗೆ ಸ್ವಾಭಿಮಾನ ಇರಬೇಕಿತ್ತು....

ಮೂವರು ಸಚಿವರನ್ನು ಉಲ್ಲೇಖಿಸಿ, ಬೈಲೂರು ಸ್ವಾಮೀಜಿಗೆ ಮತ್ತೆ ಜೀವ ಬೆದರಿಕೆ ಪತ್ರ..!

ಬೆಳಗಾವಿ: ಬೈಲೂರು ಸ್ವಾಮೀಜಿ ಸೇರಿ ಸಿಎಂ ಸಿದ್ದರಾಮಯ್ಯ ಸಂಪುಟದ ಮೂವರು ಸಚಿವರಿಗೆ ಅನಾಮಿಕನೋರ್ವ ಜೀವ ಬೆದರಿಕೆ ಪತ್ರ ಬರೆದಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಶ್ರೀಗಳಿಗೆ ಸೇರಿ ಮೂವರು ಸಚಿವರಿಗೆ ಅನಾಮಧೇಯ ವ್ಯಕ್ತಿಯೋರ್ವ ಜೀವ ಬೆದರಿಕೆ ಪತ್ರ ಬರೆದಿದ್ದು, ಸಚಿವ ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಹೆಸರನ್ನು ಉಲ್ಲೇಖಿಸಿ...

ʼಕಿತ್ತೂರು ಉತ್ಸವ’ಕ್ಕೆ ಬರ ! ತಗ್ಗಿದ ಉತ್ಸಾಹ; ಈ ಬಾರಿ ಉತ್ಸವ ಡೌಟ್ ?

ವರದಿ: ಬಸವರಾಜ ಚಿನಗುಡಿ ಚನ್ನಮ್ಮನ ಕಿತ್ತೂರು: "ಇಡಿಯಾದರೆ ಬದುಕುವೆವು , ಬಿಡಿಯಾದರೆ ಸಾಯುವೆವು " ಎಂಬ ಒಗ್ಗಟ್ಟಿನ ಮಂತ್ರ ಘೋಷಿಸಿ ನಾಡು-ನುಡಿಯ ಉಳವಿಗಾಗಿ "ಕಪ್ಪ ಕೊಡಬೇಕಾ ಕಪ್ಪ ನಿಮಗೇಕೆ ಕೊಡಬೇಕು ಕಪ್ಪ" ಎಂದು ಕೆಂಪು ಮೋತಿಯ ಬ್ರಿಟಿಷರ ವಿರುದ್ಧ ಗುಡುಗಿದ ಗಟ್ಟಿಗಿತ್ತಿ ಕನ್ನಡತಿಯ ಐತಿಹಾಸಿಕ 'ಚನ್ನಮ್ಮನ ಕಿತ್ತೂರು ಉತ್ಸವ' ಆಚರಣೆ ಈ ಬಾರಿ ಅನುಮಾನ!  ಪ್ರತಿವರ್ಷವೂ ಈ...

ಸಚಿವ ಸತೀಶ್ ಜಾರಕಿಹೊಳಿ ಅವರಿಂದ ಬೆಳಗಾವಿಯಲ್ಲಿ ಸೆ.26 ರಂದು “ಜನತಾ ದರ್ಶನ”: ಡಿಸಿ ನಿತೇಶ್ ಪಾಟೀಲ

ಬೆಳಗಾವಿ: ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಸ್ಥಳೀಯ ಮಟ್ಟದಲ್ಲಿಯೇ ಪರಿಹರಿಸುವ ಉದ್ಧೇಶದಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಸೆ.26 ರಂದು ಜಿಲ್ಲಾಮಟ್ಟದ "ಜನತಾ ದರ್ಶನ" ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಜನತಾ ದರ್ಶನ ಕುರಿತ ಪೂರ್ವಸಿದ್ಧತಾ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು...

ಮೇಲ್ದರ್ಜೆಗೇರಿದ ಶಾಲಾಶಿಕ್ಷಕರು; ಮೂರು ತಿಂಗಳಿನಿಂದ ವೇತನವಿಲ್ಲದೇ ಕಂಗಾಲು.

ಬೆಳಗಾವಿ: ಹಿರಿಯ ಪ್ರಾಥಮಿಕ ಶಾಲೆಗಳಿಂದ ಪ್ರೌಢಶಾಲೆಗಳಾಗಿ ಮೇಲ್ದರ್ಜೆಗೇರಿರುವ ಬೆಳಗಾವಿ ಜಿಲ್ಲೆಯ ಶಾಲೆಗಳ 54 ಶಿಕ್ಷಕರು ಕಳೆದ ಮೂರು ತಿಂಗಳಿಂದ ವೇತನವಿಲ್ಲದೆ ಪರದಾಡುವಂತಾಗಿದೆ. ಸರಕಾರ 2022 ರಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 7 ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 9 ಸೇರಿದಂತೆ ಒಟ್ಟು 16 ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸಿದೆ. ಆದರೆ, ಮೂರು ತಿಂಗಳ ಹಿಂದಿನವರೆಗೂ...

ಕ್ಷುಲ್ಲಕ ಕಾರಣಕ್ಕೆ ಎರಡು ಸಮುದಾಯಗಳ ನಡುವೆ ಕಲ್ಲು ತೂರಾಟ: ಶಾಸಕರ ಸಂಧಾನ ವಿಫಲ್.

ಖಾನಾಪುರ : ತಾಲ್ಲೂಕಿನ ತೋಪಿನಕಟ್ಟಿ ಗ್ರಾಮದಲ್ಲಿ ಶುಕ್ರವಾರ ಮರಾಠಾ ಮತ್ತು ಪರಿಶಿಷ್ಟ ಸಮುದಾಯದ ಯುವಕರ ಮಧ್ಯೆ ಘರ್ಷಣೆ ನಡೆದಿದ್ದು, ಕಲ್ಲು ತೂರಾಟ ಮಾಡಲಾಗಿದೆ. ಕೆಲವರಿಗೆ ಗಾಯಗಳಾಗಿದ್ದು, ಪೊಲೀಸರು ಲಾಠಿ ಪ‍್ರಹಾರ ಮಾಡಿದ್ದಾರೆ. ಘಟನೆಯಲ್ಲಿ ಶಾಸಕ ವಿಠ್ಠಲ ಹಲಗೇಕರ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. 'ಗ್ರಾಮದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎರಡೂ ಗುಂಪುಗಳ ತಲಾ 40...

ಕಾಲೇಜು ವಿದ್ಯಾರ್ಥಿನಿಯರಿಬ್ಬರು ಕೆಳಗೆ ಬಿದ್ದರೂ ಬಸ್‌ ನಿಲ್ಲಿಸದ ಡ್ರೈವರ್: ರಸ್ತೆ ತಡೆದು ಪ್ರತಿಭಟನೆ

ಬೆಳಗಾವಿ: ಬಸ್‌ನಿಂದ ವಿದ್ಯಾರ್ಥಿನಿಯರಿಬ್ಬರು ಕೆಳಗೆ ಬಿದ್ದರೂ ಚಾಲಕ ಬಸ್ ನಿಲ್ಲಿಸದಿದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಬಸ್ ತಡೆದು ಚಾಲಕನನ್ನು ತರಾಟೆಗೆ ತೆಗೆದುಕೊಂಡು, ರಸ್ತೆ ತಡೆದು ಪ್ರತಿಭಟಿಸಿದ ಘಟನೆ ಶುಕ್ರವಾರ ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಗ್ರಾಮದಲ್ಲಿ ಜರುಗಿದೆ. ಬೆಳಗಾವಿ-ತಿಗಡಿ ಮಾರ್ಗದ ಬಸ್ ಮೊದಲೇ ಪ್ರಯಾಣಿಕರಿಂದ ತುಂಬಿತ್ತು. ಬೆಣಚಿನಮರಡಿ, ಗಿರಿಯಾಲ, ತಿಗಡಿ ಗ್ರಾಮಗಳಿಗೆ ಹೋಗುವ ವಿದ್ಯಾರ್ಥಿಗಳೆಲ್ಲ ಈ ಬಸ್ ಹತ್ತಿದ್ದಾರೆ....

ಕಳ್ಳಬಟ್ಟಿ ಸಾರಾಯಿ ಮಾರಾಟ: ಒಂದು ವರ್ಷ ಕಠಿಣ ಜೈಲು ಶಿಕ್ಷೆ; 10 ರೂ. ದಂಡ ವಿಧಿಸಿ ಕೋರ್ಟ್ ತೀರ್ಪು

ಬೈಲಹೊಂಗಲ: ಕಳ್ಳಬಟ್ಟಿ ಸಾರಾಯಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಆರೋಪಿಗೆ ಇಲ್ಲಿನ ಪ್ರಧಾನ ಸಿವಿಲ್ ಜೆಎಂಎಫ್‌ಸಿ ನ್ಯಾಯಾಲಯ 1 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ.ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ಬೈಲಹೊಂಗಲ ತಾಲೂಕಿನ ಮೋಹರೆ ಗ್ರಾಮದ ನಿವಾಸಿ ಸದೆಪ್ಪ ಬೋರಪ್ಪ ತಳವಾರ (30) ಶಿಕ್ಷೆಗೊಳಗಾದ ವ್ಯಕ್ತಿ. ಶಿಕ್ಷೆಗೊಳಗಾಗಿರುವ ಆರೋಪಿ ಸದೆಪ್ಪ ತಳವಾರ ಮೊಹರೆಯಲ್ಲಿರುವ...

ವೈಯಕ್ತಿಕ ದ್ವೇಷಕ್ಕೆ ಸಹೋದರನ ಕೊಲೆ

ಸವದತ್ತಿ: ತಾಲ್ಲೂಕಿನ ಗೊರವನಕೊಳ್ಳ ಸಮೀಪದಲ್ಲಿ ಈಚೆಗೆ ನಡೆದ ಕೊಲೆಯೊಂದನ್ನು ಅಪಘಾತ ಎಂಬಂತೆ ಬಿಂಬಿಸಲಾಗಿತ್ತು. ನಿಖರ ತನಿಖೆ ನಡೆಸಿದ ಪೊಲೀಸರು ಕೊಲೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. 'ಗೊರವನಕೊಳ್ಳಕ್ಕೆ ತೆರಳುವ ಮಾರ್ಗದಲ್ಲಿ ಕಾಲುವೆ ಬಳಿ ಮಹಾಂತೇಶ ಅಳಗೋಡಿ ಶವ ಮತ್ತು ಬೈಕ್‌ ಈಚೆಗೆ ಪತ್ತೆಯಾಗಿತ್ತು. ರಸ್ತೆ ಅಪಘಾತವಾಗಿದೆ ಎಂದು ಮೃತನ ಪತ್ನಿ ದೂರು ದಾಖಲಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆ...

ಬೆಳಗಾವಿಯಲ್ಲಿ ರವಿವಾರ ದಿ. 24 ರಂದು ಸ್ವರ-ಸಾಹಿತ್ಯ-ಸಂಗಮ “ಭಾವಮಂಗಳ” ಧ್ವನಿ ತಟ್ಟೆ ಲೋಕಾರ್ಪಣೆ

ಬೆಳಗಾವಿ 21 : ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ರಚಿಸಿದ ಭಕ್ತಿ ಗೀತೆ, ನಾಡ ಗೀತೆ, ಜಾನಪದ ಗೀತೆ ಮತ್ತು ಬಾವ ಗೀತೆಯನ್ನೊಳಗೊಂಡ ಸುಮಾರು 20 ಹಾಡುಗಳ “ಭಾವಮಂಗಳ” ಧ್ವನಿತಟ್ಟೆ ರವಿವಾರ ದಿ.24 ರಂದು ಸಂಜೆ 4 ಗಂಟೆಗೆ ನಗರದ ನೆಹರೂ ನಗರದಲ್ಲಿನ ಕನ್ನಡ ಭವನದಲ್ಲಿ ಆಯೋಜಿಸಲಾದ ಭವ್ಯ...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!