Wednesday, September 18, 2024

ವೈಯಕ್ತಿಕ ದ್ವೇಷಕ್ಕೆ ಸಹೋದರನ ಕೊಲೆ

ಸವದತ್ತಿ: ತಾಲ್ಲೂಕಿನ ಗೊರವನಕೊಳ್ಳ ಸಮೀಪದಲ್ಲಿ ಈಚೆಗೆ ನಡೆದ ಕೊಲೆಯೊಂದನ್ನು ಅಪಘಾತ ಎಂಬಂತೆ ಬಿಂಬಿಸಲಾಗಿತ್ತು. ನಿಖರ ತನಿಖೆ ನಡೆಸಿದ ಪೊಲೀಸರು ಕೊಲೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

‘ಗೊರವನಕೊಳ್ಳಕ್ಕೆ ತೆರಳುವ ಮಾರ್ಗದಲ್ಲಿ ಕಾಲುವೆ ಬಳಿ ಮಹಾಂತೇಶ ಅಳಗೋಡಿ ಶವ ಮತ್ತು ಬೈಕ್‌ ಈಚೆಗೆ ಪತ್ತೆಯಾಗಿತ್ತು. ರಸ್ತೆ ಅಪಘಾತವಾಗಿದೆ ಎಂದು ಮೃತನ ಪತ್ನಿ ದೂರು ದಾಖಲಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆ ವೇಳೆ ಕುತ್ತಿಗೆ ಭಾಗದಲ್ಲಿ ಗಾಯದ ಗುರುತು ಕಂಡುಬಂದಿತ್ತು. ಈ ಸುಳಿವು ಆಧರಿಸಿ ಪೊಲೀಸರು ತನಿಖೆ ಕೈಗೊಂಡಾಗ ಸ್ವತಃ ಸಹೋದರನೇ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ ಸುಳಿವು ಸಿಕ್ಕಿದೆ’ ಎಂದು ಎಸ್ಪಿ ಗುಳೇದ ಹೇಳಿದರು.

‘‌ಮಹಾಂತೇಶ ಅವರ ಸಹೋದರ ಸಿದ್ದಪ್ಪ ಹಾಗೂ ಅವರ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಬಾಬು ಲಮಾಣಿ ಸೇರಿಕೊಂಡು 15 ದಿನಗಳಿಂದ ಕೊಲೆಗೆ ಸಂಚು ರೂಪಿಸಿದ್ದರು. ಮಹಾಂತೇಶ ಅವರಿಗೆ ಬಾಬು ಮದ್ಯ ಕುಡಿಸಿಕೊಂಡು ಗೊರವನಕೊಳ್ಳ ಮಾರ್ಗಕ್ಕೆ ಕರೆತಂದಿದ್ದರು. ಅಲ್ಲಿ ಟಾವೆಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದೇವೆ ಎಂದು ಇಬ್ಬರೂ ಆರೋಪಿಗಳು ಒಪ್ಪಿಕೊಂಡಿದ್ದಾರೆ’ ಎಂದರು. ವೈಯಕ್ತಿಕ ದ್ವೇಷ ಕೊಲೆಗೆ ಕಾರಣ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ ಎಂದು ಎಸ್ಪಿ ತಿಳಿಸಿದರು.

ಜಿಲ್ಲೆ

ರಾಜ್ಯ

error: Content is protected !!