“ಮಾತಾಡ್ ಮಾತಾಡ್ ಕನ್ನಡ, ಕನ್ನಡಕ್ಕಾಗಿ ನಾವು ಅಭಿಯಾನದಡಿ” ಸಮೂಹ ಗೀತೆ ಹಾಡಿದ ವಿದ್ಯಾರ್ಥಿಗಳು

 

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರು: ಕರ್ನಾಟಕ ಘನ ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸೂಚನೆಯನುಸಾರ ಕಾದರವಳ್ಳಿ ಎಸ್ ವಿ ಕೆ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ “ಮಾತಾಡ್ ಮಾತಾಡ್ ಕನ್ನಡ, ಕನ್ನಡಕ್ಕಾಗಿ ನಾವು” ಅಭಿಯಾನದಡಿ ಕನ್ನಡ ನಾಡಿನ ಐತಿಹ್ಯವನ್ನು ಬಿಂಬಿಸುವ ಕುವೆಂಪು ವಿರಚಿತ “ಬಾರಿಸು ಕನ್ನಡ ಡಿಂಡಿಮ ಓ ಕರ್ನಾಟಕ ಹೃದಯ ಶಿವ “ ಕೆ. ಎಸ್ ನಿಸಾರ್ ಅಹಮದ್ ವಿರಚಿತ “ನಿತ್ಯೋತ್ಸವ” ಹಾಗೂ ಹಂಸಲೇಖ ವಿರಚಿತ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಎಂಬ ಹಾಡುಗಳನ್ನು 275 ವಿದ್ಯಾರ್ಥಿಗಳು ಸೇರಿ ಏಕಕಾಲಕ್ಕೆ ಹಾಡುವುದರ ಮೂಲಕ ಕನ್ನಡ ರಾಜ್ಯೋತ್ಸವದ ಸಂತಸದಲ್ಲಿ ಮಿಂದೆದ್ದರು

ಇದೆ ಸಂದರ್ಭದಲ್ಲಿ ತಾಯಿ ಭುವನೇಶ್ವರಿ ಪಾತ್ರದಲ್ಲಿ ಜ್ಯೋತಿ ಡಪಳಿ, ಸಂಗೊಳ್ಳಿ ರಾಯಣ್ಣನ ಪಾತ್ರದಲ್ಲಿ ಶಿವನಗೌಡ ಪಾಟೀಲ, ಕಿತ್ತೂರು ಚನ್ನಮ್ಮನ ಪಾತ್ರದಲ್ಲಿ ಸ್ಫೂರ್ತಿ ಗುರುವೃನವರ, ಬೆಳವಡಿ ಮಲ್ಲಮ್ಮನ ಪಾತ್ರದಲ್ಲಿ ವಿಜಯಲಕ್ಷ್ಮಿ ಈಟಿ, ಒನಕೆ ಓಬವ್ವನ ಪಾತ್ರದಲ್ಲಿ ಸಹನಾ ರವಳೋಜಿ ಚದ್ಮ ವೇಷ ಧರಿಸಿ ನೋಡುಗರ ಮನ ತಣಿಸಿದರು.

ಚದ್ಮ ವೇಷ ಧರಿಸಿದ ವಿದ್ಯಾರ್ಥಿಗಳಿಗೆ ಕಿತ್ತೂರು ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಸೋಮಶೇಖರ್ ಹಲಸಗಿ ಪ್ರಶಸ್ತಿ ಪತ್ರ ಹಾಗೂ ಪುಸ್ತಕ ಬಹುಮಾನ ನೀಡಿ ಗೌರವಿಸಿದರು.

ಈ ವೇಳೆ ಶಾಲೆಯ ಗುರುಬಳಗ, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಇದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";