ನಡೆಯುವವರು ಜಾರದಂತೆ, ಜಾರಿದವರು ಬೀಳದಂತೆ, ಬಿದ್ದವರನ್ನು ಎಬ್ಬಿಸುವ ಜನಜಾಗೃತಿ ಜಾಥಾ ಹಾಗೂ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ನ್ನಮ್ಮನ ಕಿತ್ತೂರು: ಪಟ್ಟಣದ ಗುರುವಾರ ಪೇಠೆಯಲ್ಲಿರುವ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟದ ಸಭಾ ಭವನದಲ್ಲಿ ಅ 11 ಮುಂಜಾನೆ 10 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ .ಬಿ.ಸಿ. ಟ್ರಸ್ಟ್ ಕಿತ್ತೂರ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಧರ್ಮಸ್ಥಳ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಬೆಳಗಾವಿ ಇವರುಗಳ ಜಂಟಿ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಹಾಗೂ ನಡೆಯುವವರು ಜಾರದಂತೆ, ಜಾರಿದವರು ಬೀಳದಂತೆ, ಬಿದ್ದವರನ್ನು ಎಬ್ಬಿಸುವ ಜನಜಾಗೃತಿ ಜಾಥಾ ಹಾಗೂ ಬೃಹತ್‌ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.  

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಗಳು ವಹಿಸಲಿದ್ದಾರೆ. ಶಾಸಕ ಬಾಬಾಸಾಹೇಬ ಪಾಟೀಲ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಜನಜಾಗೃತಿ ಜಾಥಾಗೆ ಚಾಲನೆ ನೀಡಲಿದ್ದಾರೆ. ಅಧ್ಯಕ್ಷ ಸ್ಥಾನವನ್ನು ಬೆಳಗಾವಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಬಸವರಾಜ ಸೊಪ್ಟಿಮಠ ವಹಿಸಲಿದ್ದಾರೆ. ಅಖಿಲ ಕರ್ಣಾಟಕ ಜನ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ  ರಾಜಣ್ಣ ಕೊರವಿ, ಧಾರವಾಡ ವಿಭಾಗ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್ ಎಮ್‌, ಕಿತ್ತೂರು ತಹಸಿಲ್ದಾರರು ಹಾಗೂ ತಾಲೂಕಾ ದಂಡಾಧಿಕಾರಿ ರವೀಂದ್ರ ಹಾದಿಮನಿ, ವೃತ್ ನೀರಿಕ್ಷಕ ಮಹಾಂತೇಶ ಹೊಸಪೇಟ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ, ತಾಲೂಕಾ ಆರೋಗ್ಯ ಅಧಿಕಾರಿ ಸಂಜಯ ಸಿದ್ದನ್ನವರ, ದಂತ ವೈದ್ಯರು ಹಾಗೂ ಬೆಳಗಾವಿ ಜಿಲ್ಲಾ ಜನಜಾಗೃತಿ ನಿಕಟಪೂರ್ವ ಅಧ್ಯಕ್ಷ ಡಾ। ಜಗದೀಶ ಹಾರೂಗೊಪ್ಪ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

 

Share This Article
";