ಬೈಲೂರು ಶ್ರೀಗಳಿಗೆ ಮತ್ತೆ ಜೀವ ಬೆದರಿಕೆ; ಅವು ಜೀವ ಬೆದರಿಕೆ ಪತ್ರಗಳಲ್ಲ, ಪ್ರೇಮ ಪತ್ರಗಳು: ಬೈಲೂರು ನಿಜಗುಣಾನಂದ ಶ್ರೀ

ಉಮೇಶ ಗೌರಿ (ಯರಡಾಲ)

ಚನ್ನಮ್ಮನ ಕಿತ್ತೂರು: ʼಇಲ್ಲಿವರೆಗೆ ನನಗೆ 20 ಜೀವ ಬೆದರಿಕೆ ಪತ್ರಗಳು ಬಂದಿವೆ. ಆದರೆ ಆ ಪತ್ರಗಳನ್ನು ನಾನು ಪ್ರೇಮ ಪತ್ರಗಳೆಂದು ಪರಿಭಾವಿಸಿದ್ದೇನೆʼಎಂದು ಸೈದ್ಧಾಂತಿಕ ವಿರೋಧಿಗಳಿಗೆ ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಶ್ರೀಗಳು ತಿರುಗೇಟು ನೀಡಿದ್ದಾರೆ.

ಬೈಲೂರಿನ ನಿಷ್ಕಲ ಮಂಟಪದಲ್ಲಿ ಪ್ರವಚನ ಪಿತಾಮಹ ಲಿಂಗಾನಂದ ಸ್ವಾಮೀಜಿಯ ಪುಣ್ಯ ಸ್ಮರಣೆ ಮತ್ತು ಚನ್ನ ಬಸವೇಶ್ವರ ಮೂರ್ತಿ ಪ್ರತಿಷ್ಟಾಪನೆ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿಜಗುಣಾನಂದ ಶ್ರೀಗಳು ʼನನಗೆ ಸಾಯುವುದಕ್ಕೆ ಭಯವಿಲ್ಲ ಆದರೆ ಸಾಮಾಜಿಕ ಸೇವೆ ಸ್ಥಗಿತವಾಗುತ್ತದೆʼ ಎನ್ನುವ ಆತಂಕವಿದೆ ಎಂದು ಹೇಳಿದರು.

ನನ್ನನ್ನು ಕೊಲ್ಲುವುದಕ್ಕೆ ಬೆದರಿಕೆ ಹಾಕುವಂತಹವರು ವೈಯಕ್ತಿಕ ದ್ವೇಷ, ಸಾಧಿಸುತ್ತಿಲ್ಲ ಬದಲಾಗಿ ಸೈದ್ಧಾಂತಿಕವಾಗಿ ವಿರೋಧಿಸುತ್ತಿದ್ದಾರೆ ಎಂದು ಹೇಳಿದ ಬೈಲೂರು ಮಠದ ಶ್ರೀಗಳು ಪೊಲೀಸ್ ಇಲಾಖೆಯಿಂದ ಸೂಕ್ತ ಭದ್ರತೆ ಒದಗಿಸಲಾಗಿದ್ದರೂ ಒಬ್ಬೊಬ್ಬನೇ ಓಡಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

Share This Article
";