ಬೈಲಹೊಂಗಲ: ಸಮೀಪದ ಹೊಸೂರ ಗ್ರಾಮದ ರೈತರ ಜಮೀನಿನಲ್ಲಿ ಮೊಸಳೆ ಬಂದು ರೈತರು ಜೀವ ಭಯದಲ್ಲಿ ಕಾಲ ಕಳೆಯುವಂತಾಗಿದ ಘಟನೆಯೊಂದು ಇಂದು ನಡೆದಿದೆ.
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ
ಹೇಳುವದು ಏನು ಉಳಿದು ಹೋಗಿದೆ ..
ಹೇಳಲಿ ಹೇಗೆ ತಿಳಿಯದಾಗಿದೆ….
ಈ ಹಾಡಿನಂತೆ ಮಳೆ ತಾತ್ಕಾಲಿಕವಾಗಿ ನಿಂತರು ಅದರ ಅವಾಂತರ ಹೇಳತಿರದಾಗಿದೆ.ಎರಡಮೂರು ದಿನಗಳ ಹಿಂದೆ ಬಾರಿ ಮಳೆಯಿಂದ ಗ್ರಾಮದ ಸೇತುವೆ ಮೇಲೆಯಿಂದ ಮಲಪ್ರಭಾ ನದಿಗೆ ನೀರು ಹರಿದ ಪರಿಣಾಮ ನದಿಯಲಿದ್ದ ಮೊಸಳೆ ರೈತರ ಜಮೀನಿಗೆ ಬಂದಿದೆ.
ಬೆಳಿಗಿನ ಜಾವ ಗ್ರಾಮದ ರೈತನ ಹೊಲದಲ್ಲಿ ಕಟ್ಟಿದ್ದ ನಾಯಿಯೊಂದು ಬಹಳಷ್ಟು ಕಿರಚ ತೊಡಗಿದಾಗ ರೈತ ಹೋಗಿ ನೊಡುವಷ್ಟರಲ್ಲಿ ನಾಯಿ ಮೊಸಳೆಯ ಬಾಯಿಗೆ ಆಹಾರವಾಗಿತ್ತು.ಇದನ್ನು ನೋಡಿದ ರೈತ ಗ್ರಾಮದ ಯುವಕರಿಗೆ ವಿಷಯ ಮುಟ್ಟಿಸಿದ್ದರಿಂದ ಕಬ್ಬು ಗದ್ದೆಗೆ ತೆರಳಿದ ಗ್ರಾಮದ ಯುವಕರ ತಂಡ ಕಬ್ಬು ಬೆಳೆಯಲ್ಲಿ ನಾಯಿಯನ್ನು ತಿಂದ ಮೊಸಳೆ ಕಣ್ಣಿಗೆ ಬಿದ್ದುದೆ. ಭಯ ಬಿತರಾದ ಯುವಕರು ತಕ್ಷಣ ಪೋಲಿಸ್ ಹಾಗೂ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ
ಪೋಲಿಸ್ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಅಗಮಿಸಿದರೆ ಅರಣ್ಯ ಇಲಾಖೆಯ ಸಿಬ್ಬಂದಿಯ ಸುಳಿವೆ ಇರಲಿಲ್ಲ ಆದರೆ ಮೊಸಳೆ ಮಾತ್ರ ತನ್ನ ದಾರಿಗೆ ಸುಂಕುವಿಲ್ಲ ಎಂದು ಕಬ್ಬು ಬೇಳೆಯಲ್ಲಿ ಹೊಗಲು ಯತ್ನಿಸಿದಾಗ ಯುವಕರ ತಂಡ ತಡ ಮಾಡದೆ ಕಬ್ಬು ಬೆಳೆ ತಗೆದು ಹಗ್ಗ ಬಳಸಿ ಮೊಸಳೆಯನ್ನು ಕಟ್ಟಿ ಹಾಕಿದ್ದಾರೆ
ವಿಷಯ ತಿಳಿಸಿದರು ಗಾಡ ನಿದ್ರೆಯಲ್ಲಿರುವ ಅರಣ್ಯ ಇಲಾಖೆ: ಮೊಸಳೆ ಬಂದಿದೆ ಎಂದು ಅರಣ್ಯ ಇಲಾಖೆಗೆ ಗ್ರಾಮಸ್ಥರು ತಿಳಿಸಿದರು ಬರುತ್ತೆವೆ, ಬರಲು ಎಲ್ಲ ವ್ಯವಸ್ಥೆ ಮಾಡಿಕೊಳ್ಳು ತಿದ್ದೆವೆ ಎಂದು ಹೆಳುತ್ತ ಅರ್ಧ ದಿನ ಕಳೆದರು ಇಲಾಖೆಯ ಸಿಬ್ಬಂದಿ ಮಾತ್ರ ಯಾರು ಇತ್ತ ಸುಳಿದಿಲ್ಲ ಪ್ರಾಣಿಗಳ ರಕ್ಷಣೆಗೆ ಮುಂದಾಗ ಬೇಕಿದ್ದ ಅರಣ್ಯ ಇಲಾಖೆ ಕಾಲಹರಣ ಮಾಡಿ ಬೇಜವಾಬ್ದಾರಿಯಿಂದ ನಡೆದುಕೊಂಡು ನಂತರ ಪ್ರಾಣಿಗಳು ತಪ್ಪಿಸಿಕೊಂಡು ಹೊದ ನಂತರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸ್ಥಳದಲ್ಲಿ ಬಿಡು ಬಿಡುವದೆ ಅರಣ್ಯ ಇಲಾಖೆಯ ಕಾರ್ಯವೆ? ಎಂಬುವದು ಪ್ರಜ್ಞಾವಂತ ನಾಗರಿಕರ ಪ್ರಶ್ನೆ ಯಾಗಿದೆ. ಗ್ರಾಮಸ್ಥರು ಇಲಾಖೆಯ ಸಿಬ್ಬಂದಿಯ ಕ್ರಮಕ್ಕೆ ಅಕ್ರೋಶ ವ್ಯಕ್ತಪಡಿಸಿದ್ದಾರೆ.