“ಬೆಳಗಾವಿ ಬುಡಾ ಅಧ್ಯಕ್ಷರ ದಿಢೀರ್ ಬದಲಾವಣೆ”

ಉಮೇಶ ಗೌರಿ (ಯರಡಾಲ)

ದಿಢೀರ್ ಬೆಳಗಾವಿ ಬುಡಾ ಅಧ್ಯಕ್ಷ ಬದಲಾವಣೆ: ಸಂಜಯ ಬೆಳಗಾಂವ್ಕರ್ ನೂತನ ಅಧ್ಯಕ್ಷರಾಗಿ ಆಯ್ಕೆ

ಬೆಳಗಾವಿ: ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗೂಳಪ್ಪ ಹೊಸಮನಿ ಅವರನ್ನು ಅಧ್ಯಕ್ಷಸ್ಥಾನದಿಂದ ದಿಢೀರ್ ಬದಲಾವಣೆ ಮಾಡಿ, ಸಂಜಯ ಬೆಳಗಾಂವ್ಕರ್ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಿ ಗುರುವಾರ ಆದೇಶ ಹೊರಡಿಸಿದೆ.

ನೂತನ ಅಧ್ಯಕ್ಷ ಸಂಜಯ ಬೆಳಗಾಂವ್ಕರ್ ಭಾವಚಿತ್ರ

ಗೂಳಪ್ಪ ಹೊಸಮನಿ ಅವರ ಬಗ್ಗೆ ಬೆಳಗಾವಿಯ ಬಿಜೆಪಿಯ ಇಬ್ಬರು ಶಾಸಕರೂ ತೀವ್ರ ಅಸಮಾಧಾನ ಹೊಂದಿದ್ದರು. ಅವರ ಅವಧಿಯಲ್ಲಿ ಬುಡಾ ಮೇಲೆ ಅನೇಕ ಭ್ರಷ್ಟಾಚಾರ ಆರೋಪಗಳು ಕೂಡ ಕೇಳಿಬಂದಿದ್ದವು. ನಗರದ ಬಿಲ್ಡರ್ ಗಳು ಕೂಡ ಆರೋಪಗಳನ್ನು ಮಾಡಿದ್ದರು. ವಿಶೇಷವಾಗಿ ಎನ್ಎ ಮಾಡಲು ನಿರಾಕ್ಷೇಪಣಾ ಪತ್ರ ನೀಡಲು ಭಾರಿ ಪ್ರಮಾಣದಲ್ಲಿ ಹಣ ಕೇಳಲಾಗುತ್ತಿದೆ ಎನ್ನುವ ದೂರು ಇತ್ತು. ಇದೀಗ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ.

ಮುಂದಿನ 3 ವರ್ಷಗಳವರೆಗೆ ಸಂಜಯ ಬೆಳಗಾಂವ್ಕರ್ ಬುಡಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಹೊಸ ಅಧ್ಯಕ್ಷರು ಯಾವ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಲಿದ್ದಾರೆ ಕಾದು ನೋಡಬೇಕಿದೆ.

Share This Article
";