ಕಿತ್ತೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಾವು ದಿನದಿಂದ ಏರುತ್ತಲೇ ಇದೆ. ಹಾಗೆಯೇ ಈ ಸಮಯದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಎಲ್ಲೆಡೆ ಅಲರ್ಟ್ ಆಗಿದ್ದು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಈ ಹಿನ್ನಲೇ ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ವಿಧಾನಸಭಾ ಕ್ಷೇತ್ರದ ಲಿಂಗದಹಳ್ಳಿ ಅರಣ್ಯ ವಲಯದಲ್ಲಿ 3,60.000. ರೂಪಾಯಿ ಮೌಲ್ಯದ ಅಕ್ರಮ ಮದ್ಯ, ಹಾಗೂ ಎರ್ಟಿಗಾ ಕಾರು ಗಾಡಿಯನ್ನು ಅಬಕಾರಿ ಇಲಾಖೆ ಜಪ್ತಿ ಮಾಡಿದೆ. ದೂರು ಕೂಟ್ಟ ಯುವಕನ ಮೇಲೆ ಹಲ್ಲೆ ನಡೆದಿದ್ದು ಕಿತ್ತೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೆ.
ಚುನಾವಣಾ ಹಿನ್ನಲೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ಸಲುವಾಗಿ ಜಾರಿ ಮತ್ತು ತನಿಖಾ ಕಾರ್ಯಗಳನ್ನು ಚುರುಕುಗೊಳಿಸಿ ದಾಳಿಯನ್ನು ನಡೆಸಿದ್ದು, ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ವಿಧಾನಸಭಾ ಕ್ಷೇತ್ರದ ಲಿಂಗದಹಳ್ಳಿ ಅರಣ್ಯ ವಲಯದಲ್ಲಿ ಅಕ್ರಮ ಮದ್ಯ ದಾಸ್ತಾನು ಹಾಗೂ ಸರಬರಾಜು ಮಾಡುತ್ತಿರುವುದು ಕಂಡುಬಂದ ಹಿನ್ನಲೇ ಗಸ್ತು ಮಾಡುತ್ತಿದ್ದ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ದೇಗಾಂವ ಗ್ರಾಮದ ಯುವಕ ಅದೃಶಪ್ಪ ಗಳಗಿ ದೂರು ಕೊಟ್ಟಿದ್ದರಿಂದ ಫಕೀರಪ್ಪ ರುದ್ರಪ್ಪ ಜೋಗುಳಬೆಟ್ಟ ಇವರು ಅಕ್ರಮವಾಗಿ ಸಾಗಿಸುತ್ತಿದ್ದ 3,60.000. ರೂಪಾಯಿ ಮೌಲ್ಯದ 345.60 ಲೀ. ಗೋವಾ ರಾಜ್ಯದ ಮದ್ಯ, ಹಾಗೂ ಬಿಳಿ ಬಣ್ಣದ ನಾಲ್ಕು ಚಕ್ರದ ಎರ್ಟಿಗಾ ಕಾರು ಗಾಡಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಅಬಕಾರಿ ನಿರೀಕ್ಷಕರಾದ ಬಸವರಾಜ ಮುಡಸಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದಾಳಿ ವೇಳೆ ಕುರುಟ್ಟಿ,ವಿ ಎಂ ಕರಾಳೆ,ಎ ಎಸ್ ಜಾಲಿಕಟ್ಟಿ,ಎಮ್ ಬಿ ಮುಲ್ಲಾ ಇದ್ದರು.ಅಬಕಾರಿ ನಿರೀಕ್ಷಕರಾದ ಆರ್ ಬಿ ಹೊಸಳ್ಳಿ ಅವರು ದೂರು ದಾಖಲಿಸಿರುತ್ತಾರೆ.
ಇದೇ ವೇಳೆ ದೂರು ಕೊಟ್ಟ ದೇಗಾಂವ ಗ್ರಾಮದ ಯುವಕ ಅದೃಶಪ್ಪ ಗಳಗಿ ಮೇಲೆ ಹಲ್ಲೆ ನಡೆದಿದ್ದು, ಹಲ್ಲೆ ನಡೆಸಿದ್ದ ರಮೇಶ ಈರಪ್ಪ ಉಗರಕೋಡ,ಖಂಡೋಭಾ ಉಗರಕೋಡ,ಯಲ್ಲಪ್ಪ ಉಗರಕೋಡ, ಗೋಪಾಲ ಉಗರಕೋಡ, ವಿಠ್ಠಲ ಜೋಗುಳಬೆಟ್ಟ ಅವರ ಮೇಲೆ ಕಿತ್ತೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದೆ.