ವೀರ ರಾಣಿ ಕಿತ್ತೂರು ಚನ್ನಮ್ಮನ ಆತ್ಮ ಜ್ಯೋತಿಯಾತ್ರೆಯ ವೇಳಾಪಟ್ಟಿ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು : ಕಿತ್ತೂರು ಉತ್ಸವದ ಅಂಗವಾಗಿ ರಾಣಿ ಚನ್ನಮ್ಮನ ವಿಜಯ ಜ್ಯೋತಿ‌ ಯಾತ್ರೆಯು ಅಕ್ಟೋಬರ್ 18 ರಿಂದ ಅಕ್ಟೋಬರ್ 23 ರವರೆಗೆ ಬೆಳಗಾವಿ ಜಿಲ್ಲೆಯಾದ್ಯಂತ ಸಂಚರಿಸಲಿದೆ.

ಅಕ್ಟೋಬರ್ 18 ರಂದು ಮುಂಜಾನೆ 9 ಗಂಟೆಗೆ ಬೈಲಹೊಂಗಲದಿಂದ ಜ್ಯೋತಿ ಯಾತ್ರೆಯು ಪ್ರಾರಂಭಗೊಳ್ಳಲಿದ್ದು, ಅಕ್ಟೋಬರ್ 23 ರಂದು ಬೆಳಿಗ್ಗೆ 10 ಗಂಟೆಗೆ ಕಿತ್ತೂರಿನ ಚನ್ನಮ್ಮ ವೃತ್ತಕ್ಕೆ ಆಗಮಿಸಲಿದೆ.

ವೀರ ಜ್ಯೋತಿ ಯಾತ್ರೆಯ ವೇಳಾಪಟ್ಟಿ :

ಅಕ್ಟೋಬರ್ 18 (ಸೋಮವಾರ) ರಂದು ಬೆಳಿಗ್ಗೆ 9 ಗಂಟೆಗೆ ಬೈಲಹೊಂಗಲದಿಂದ ಜ್ಯೋತಿ ಯಾತ್ರೆಯು ಮೆರವಣಿಗೆ ಆರಂಭಗೊಳ್ಳಲಿದೆ. ಬೆಳಿಗ್ಗೆ 10 ಗಂಟೆಗೆ ಆನಿಗೋಳ ಗ್ರಾಮದಲ್ಲಿ ಜ್ಯೋತಿಯ ಸ್ವಾಗತ ಹಾಗೂ ಬಿಳ್ಕೋಡುಗೆ ಕಾರ್ಯಕ್ರಮ ನಡೆಯಲಿದೆ. ನಂತರ, ಬೆಳಿಗ್ಗೆ 10: 30 ಗಂಟೆಗೆ ಆನಿಗೋಳದಿಂದ – ಕೆಂಗಾನೂರ – ಗರ್ಜೂರ ಮಾರ್ಗವಾಗಿ ರಾಯಣ್ಣನ ಸಂಗೊಳ್ಳಿಗೆ ಜ್ಯೋತಿ ತಲುಪಲಿದೆ.

ಮಧ್ಯಾಹ್ನ 2:30 ಗಂಟೆಗೆ ಸಂಗೊಳ್ಳಿಯಿಂದ ತುರಮರಿ- ಹುಣಶಿಕಟ್ಟಿ- ಇಟಗಿ ಕ್ರಾಸ್ ಮಾರ್ಗವಾಗಿ ಇಟಗಿಗೆ ಜ್ಯೋತಿ ತಲುಪಲಿದೆ. ಸಂಜೆ 4 ಗಂಟೆಗೆ ಇಟಗಿಯಿಂದ ಜ್ಯೋತಿಯ ಬೀಳ್ಕೊಡುಗೆ ನಡೆಯಲಿದೆ.

ಜ್ಯೋತಿಯು ಸಾಯಂಕಾಲ 6 ಗಂಟೆಗೆ ತೋಲಗಿ-ಬೇಕವಾಡ ಮಾರ್ಗವಾಗಿ ನಂದಗಡ ಗ್ರಾಮಕ್ಕೆ ಆಗಮಿಸಿ, ಸಾಯಂಕಾಲ 7:30 ಗಂಟೆಗೆ ಖಾನಾಪೂರ ತಲುಪಲಿದ್ದು, ಖಾನಾಪೂರದಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ.

ಅಕ್ಟೋಬರ್ 19 ರಂದು ಬೆಳಿಗ್ಗೆ 9 ಗಂಟೆಗೆ ಖಾಪೂರದಿಂದ ಜ್ಯೋತಿಯನ್ನು ಬೀಳ್ಕೊಡಲಾಗುವುದು. ಬೆಳಿಗ್ಗೆ 11 ಗಂಟೆಗೆ

ಜ್ಯೋತಿಯು ಬೆಳಗಾವಿಗೆ ಆಗಮಿಸಲಿದ್ದು,ನಂತರ ಬೀಳ್ಕೊಡಲಾಗುವುದು. ಮಧ್ಯಾಹ್ನ 1 ಗಂಟೆಗೆ ಕಾಕತಿ ಹಾಗೂ ಮಧ್ಯಾಹ್ನ 2:30 ಗಂಟೆಗೆ ಹುಕ್ಕೇರಿಗೆ ಆಗಮಿಸಲಿದೆ. ಮಧ್ಯಾಹ್ನ 03.30 ಗಂಟೆಗೆ ಹುಕ್ಕೇರಿಯಿಂದ ತೆರಳಿ, ಸಾಯಂಕಾಲ 04.30 ಕ್ಕೆ ಸಂಕೇಶ್ವರ ಹಾಗೂ ಸಾಯಂಕಾಲ 7:30 ಕ್ಕೆ ನಿಪ್ಪಾಣಿಗೆ ಆಗಮಿಸಲಿದ್ದು ನಿಪ್ಪಾಣಿಯಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ.

ಅಕ್ಟೋಬರ್ 20 ರಂದು ಬೆಳಿಗ್ಗೆ 9 ಗಂಟೆಗೆ ನಿಪ್ಪಾಣಿಯಿಂದ ಯಾತ್ರೆ ಪ್ರಾರಂಭಿಸಿ, 11 ಗಂಟೆಗೆ ಚಿಕ್ಕೋಡಿ ತಲುಪಲಿದೆ. ಮಧ್ಯಾಹ್ನ 2:30 ಕ್ಕೆ ಕಾಗವಾಡಕ್ಕೆ ತಲುಪಲಿದೆ ಮತ್ತು ಸಾಯಂಕಾಲ 4 ಗಂಟೆಗೆ ಕಾಗವಾಡದಿಂದ ತೆರಳಿ, ಸಾಯಂಕಾಲ 7:30 ಕ್ಕೆ ಅಥಣಿ ತಲುಪಲಿದ್ದು, ಅಥಣಿಯಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ.

ಅಕ್ಟೋಬರ್ 21 ರಂದು ಬೆಳಿಗ್ಗೆ 9 ಗಂಟೆಗೆ ಅಥಣಿಯಿಂದ ತೆರಳಿ, ಮಧ್ಯಾಹ್ನ 12 ಗಂಟೆಗೆ ರಾಯಬಾಗ ತಲುಪಲಿದೆ. ಮಧ್ಯಾಹ್ನ 2:30 ಕ್ಕೆ ಕಂಕಣವಾಡಿ- ಗುರ್ಲಾಪೂರ ಕ್ರಾಸ್ ಮಾರ್ಗವಾಗಿ ಮೂಡಲಗಿ ತಲುಪಲಿದೆ. ನಂತರ, ಮಧ್ಯಾಹ್ನ 3:30 ಕ್ಕೆ ಮೂಡಲಗಿಯಿಂದ‌ ತೆರಳಿ, ಸಾಯಂಕಾಲ 5 ಗಂಟೆಗೆ ಗೋಕಾಕ ತಲುಪಲಿದೆ. ಸಾಯಂಕಾಲ 7:30 ಕ್ಕೆ ಯರಗಟ್ಟಿಗೆ ಆಗಮಿಸಿ ಯರಗಟ್ಟಿಯಲ್ಲಿ ವಾಸ್ತವ್ಯವಿರಲಿದೆ.

ಅಕ್ಟೋಬರ್ 22 ರಂದು ಬೆಳಿಗ್ಗೆ 9 ಗಂಟೆಗೆ ಯರಗಟ್ಟಿಯಿಂದ ತೆರಳಿ, ಮಧ್ಯಾಹ್ನ 1 ಗಂಟೆಗೆ ಚಂದರಗಿ-ಗೊಡಚಿ ಮಾರ್ಗವಾಗಿ ರಾಮದುರ್ಗ ತಲುಪಲಿದೆ. ಮಧ್ಯಾಹ್ನ 1:30 ಕ್ಕೆ ರಾಮದುರ್ಗದಿಂದ ತೆರಳಿ, 2:30 ಕ್ಕೆ ಸವದತ್ತಿ ತಲುಪಲಿದೆ. ಮಧ್ಯಾಹ್ನ 3:30ಕ್ಕೆ ಸವದತ್ತಿಯಿಂದ ತೆರಳಿ, ಸಾಯಂಕಾಲ 4:30 ಕ್ಕೆ ಬೆಳವಡಿ ತಲುಪಲಿದೆ.

ನಂತರ,‌ ಸಾಯಂಕಾಲ 9 ಗಂಟೆಗೆ ಖೋದಾನಪೂರ-ಪಟ್ಟಿಹಾಳ ಕೆ.ಬಿ.-ಇಟಗಿ ಕ್ರಾಸ್- ಮಲಪ್ರಭಾ ಸಕ್ಕರೆ ಕಾರ್ಖಾನೆ- ಎಂ.ಕೆ.ಹುಬ್ಬಳ್ಳಿ-ದಾಸ್ತಿಕೊಪ್ಪ ಮಾರ್ಗವಾಗಿ ಕಿತ್ತೂರಿನ ಸೈನಿಕ ಶಾಲೆಯಲ್ಲಿ ವಾಸ್ತವ್ಯವಿರಲಿದೆ.

ಅಕ್ಟೋಬರ್ 23 ರಂದು ಬೆಳಿಗ್ಗೆ 9 ಗಂಟೆಗೆ ಕಿತ್ತೂರಿನ ಸೈನಿಕ‌ ಶಾಲೆಯಿಂದ ತೆರಳಿ, 10 ಗಂಟೆಗೆ ಕಿತ್ತೂರಿನ ಚನ್ನಮ್ಮ ವೃತ್ತಕ್ಕೆ ಆಗಮಿಸಲಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಹಾಗೂ ಜ್ಯೋತಿ ಉಪಸಮಿತಿಯ ಅಧ್ಯಕ್ಷ ಡಾ.ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";