ಬೆಳಗಾವಿ: ನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ಉದ್ಘಾಟನೆಯಾಗಿದ್ದ ಬ್ರಿಡ್ಜ್ ಮೇಲಿನ ರಸ್ತೆ ಹಾಳಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತಗ್ಗು ಬಿದ್ದಿರುವ ರಸ್ತೆಯಲ್ಲಿಯೇ ಸಂಚರಿಸುತ್ತಿರುವ ಭಾರೀ ವಾಹನಗಳು ಒಂದಡೆಯಾದರೆ, ಕೈಯಲ್ಲಿ ಪ್ರಾಣ ಹಿಡಿದುಕೊಂಡು ಎಲ್ಲಿ ತಮ್ಮ ವಾಹನ ಬಿದ್ದು ಬಿಡುತ್ತೋ ಎಂಬ ಭಾವನೆಯಿಂದ ಭಯದಲ್ಲೇ ಪ್ರಯಾಣ ಮಾಡುತ್ತಿರೋ ಪ್ರಯಾಣಿಕರು ಒಂದೆಡೆ,
ಹೌದು ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ ಟಿಳಕವಾಡಿಯ 3ನೇ ರೈಲ್ವೇ ಗೇಟ್ ಬಳಿ ಇತ್ತೀಚೆಗೆ ನಿರ್ಮಾಣವಾಗಿ ಉದ್ಘಾಟನೆಗೊಂಡಿರುವ ರೈಲ್ವೇ ಓವರ್ ಬ್ರಿಡ್ಜ್ ಮೇಲೆ ನರಕ ಸದೃಶ ದೃಶ್ಯಗಳು.
ಇನ್ನು ಕಳೆದ ನಾಲ್ಕು ವರ್ಷಗಳಿಂದ ಈ ರೈಲ್ವೇ ಬ್ರಿಡ್ಜ್ ಕಾಮಗಾರಿಯನ್ನು ನಡೆಸಲಾಗಿದೆ. ಇನ್ನು ಇತ್ತೀಚೆಗೆ ಈ ಬ್ರಿಡ್ಜ್ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು ಕಳೆದ ಎರಡು ದಿನಗಳ ಹಿಂದೆಯಷ್ಟೇ ಅದನ್ನು ಉದ್ಘಾಟಿಸಲಾಗಿತ್ತು. ಇನ್ನು ಎರಡು ದಿನಗಳಲ್ಲಿಯೇ ಈ ರಸ್ತೆ ಹದಗೆಟ್ಟಿದೆ. ರೈಲ್ವೇ ಇಲಾಖೆಯ ಈ ಕಾಮಗಾರಿಗೆ ಸಾರ್ವಜನಿಕರು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಎರಡೇ ದಿನಗಳಲ್ಲಿ ಈ ರಸ್ತೆ ಕಿತ್ತುಹೋಗಿದೆ ಎಂದರೆ ಅದು ಹೇಗೆ ಕಾಮಗಾರಿಯನ್ನು ಮಾಡಿದ್ದಾರೆ ಎಂಬ ಸಂಶಯ ಉಂಟಾಗುತ್ತಿದೆ. ಅಲ್ಲದೆ ಇದು 40 ಪರ್ಸೆಂಟ್ ಸರ್ಕಾರ ಅಲ್ಲವೇ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನು ಕಳೆದ ಮೂರು ದಿನಗಳ ಹಿಂದೆಯಷ್ಟೇ ಈ ಬ್ರಿಡ್ಜ್ ಕಾಮಗಾರಿಯನ್ನು ಲೋಕಾರ್ಪಣೆ ಮಾಡಲಾಗಿದೆ. ಇನ್ನು ಮೂರೇ ದಿನಗಳಲ್ಲಿ ಈ ರಸ್ತೆ ಕುಸಿದಿದ್ದು ಈಗ ಸಾರ್ವಜನಿಕರ ಆಕ್ರೋಶಕ್ಕೆ ಕರಣವಾಗದೆ. ಇನ್ನು ಮುಂಬರುವ ದಿನಗಳಲ್ಲಿ ಆದಷ್ಟು ಬೇಗನೆ ಪಾಲಿಕೆ ಎಲ್ಲಾ ಸಂಕಷ್ಟಗಳನ್ನು ದೂರಮಾಡುವ ಮೂಲಕ ಸಾರ್ವಜನಿಕರ ನೆಮ್ಮದಿಯ ಬದುಕಿಗೆ ನಾಂದಿ ಹಾಡಬೇಕಿದೆ.