ಕಿತ್ತೂರು(ಅ.10): ಬೆಳಗಾವಿ ಜಿಲ್ಲೆಯ ಕಿತ್ತೂರು ನಾಡಿನಲ್ಲಿ ಇದೇ ತಿಂಗಳು 23 ಹಾಗೂ 24 ರಂದು ನಡೆಯಲಿರುವ ಕಿತ್ತೂರು ಉತ್ಸವದ ನಿಮಿತ್ಯ ಉಪ ಸಮಿತಿಗಳ ಪೂರ್ವ ಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಿತ್ತೂರು ಶಾಸಕ ಮಹಾಂತೇಶ್ ದೊಡ್ಡಗೌಡರು ಈ ಬಾರಿ 25 ನೇ ವರ್ಷದ ಬೆಳ್ಳಿ ಮಹೋತ್ಸವದ ನಿಮಿತ್ಯ ತುಂಬಾ ವಿಶೇಷವಾಗಿದ್ದು. ಪ್ರತಿ ಇಲಾಖೆಯ ಅಧಿಕಾರಿಗಳು ಹಾಗೂ ಯುವ ಸಮೂಹಕ್ಕೆ ಜವಾಬ್ದಾರಿ ನೀಡಿದ್ದು, ಈ ಉತ್ಸವಕ್ಕೆ ಅತಿಥಿಗಳಾಗಿ ಕೇಂದ್ರ ಸಚಿವರು ಬರಲಿದ್ದು, ಹಲವಾರು ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯಲಿದ್ದು, ಎಲ್ಲರೂ ಈ ಉತ್ಸವದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಶಶಿಕಾಂತ ಬಗಲಿ, ಆಡಳಿತ ಅಧಿಕಾರಿಗಳು ನೀರಾವರಿ ನಿಗಮ, ಧಾರವಾಡ, ಇತಿಹಾಸ ಸಂಶೋಧಕ ಡಾ. ಎಂ ಷಡಕ್ಷರಯ್ಯ, ಸಂಸ್ಕೃತಿ ಇಲಾಖೆ ಶ್ರೀಮತಿ ವಿದ್ಯಾವತಿ ಭಜಂತ್ರಿ, ತಹಶೀಲ್ದಾರ್ ಸೋಮಶೇಖರ್ ಹಾಲಗಿ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಆದ ಸುಭಾಷ್ ಸಂಪಗಾವಿ, ಕಿತ್ತೂರು ಕಸಾಪ ಅದ್ಯಕ್ಶ ಸೋಮಶೇಖರ್ ಹಲಸಗಿ ಸೇರಿದಂತೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು, ಕಿತ್ತೂರು, ಎಂಕೆ ಹುಬ್ಬಳ್ಳಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು, ಕಂದಾಯ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಪೌರ ಕಾರ್ಮಿಕರು ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು ಭಾಗವಹಿಸಿದ್ದರು.