ಉಚಿತ ಬಸ್ ಪ್ರಯಾಣದ ʻʻಶಕ್ತಿʼʼ ಯೋಜನೆಗೆ ಶಾಸಕ ಬಾಬಾಸಾಹೇಬ ಪಾಟೀಲ ಚಾಲನೆ

ಚನ್ನಮ್ಮನ ಕಿತ್ತೂರು : ಐತಿಹಾಸಿಕ ಚನ್ನಮ್ಮನ ಕಿತ್ತೂರಿನಲ್ಲಿ ಇರುವ ರಾಣಿ ಚನ್ನಮ್ಮ ಬಸ್‌ ನಿಲ್ದಾಣದಲ್ಲಿ ಮಹಿಳೆಯರಿಗೆ ಪ್ರಯೋಜನೆ ಆಗಲಿರುವ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಉಚಿತ ಬಸ್‌ ಪ್ರಯಾಣದ ʻʻಶಕ್ತಿʼʼ ಯೋಜನೆಗೆ ಶಾಸಕ ಬಾಬಾಸಾಹೇಬ ಪಾಟೀಲ ಅವರ ಸಾಂಕೇತಿಕವಾಗಿ ಚಾಲನೆ ನೀಡಿದರು.

ಈ ವೇಳೆ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ಕರ್ನಾಡಕ ರಾಜ್ಯದಾದ್ಯಂತ ಮಹಿಳೆಯರು ಶ್ರೀಮಂತ ಬಡವ ಎಂಬ ಯಾವುದೇ ಬೇಧ ಭಾವ ಇಲ್ಲದೆರಾಜ್ಯದ ನಗರ ಸಾರಿಗೆ, ಸಾಮಾನ್ಯ ಸಾರಿಗೆ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡವ ಮೂಲಕ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಲು 3 ತಿಂಗಳುಗಳ ಕಾಲ ಕಾಲಾವಕಾಶವಿದ್ದು ಸ್ಮಾರ್ಟ್ ಕಾರ್ಡ್ ಸಿಗುವತನಕ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಹಾಗೂ ಚಾಲನಾ ಲೈಸೆನ್ಸ್ ತೋರಿಸಿ ಮಹಿಳೆಯರು ಉಚಿತವಾಗಿ ಬಸ್ಸಿನಲ್ಲಿ  ಪ್ರಯಾಣಿಸಬಹುದಾಗಿದೆ‌. ಮುಂದಿನ 20 ದಿನಗಳಲ್ಲಿ ಮಹಿಳೆಯರಿಗೆ ಮತ್ತೊಂದು ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರಲಾಗುವುದು. ಇನ್ನುಳಿದ 3 ಗ್ಯಾರಂಟಿ ಯೋಜನೆಗಳನ್ನು ಅತಿ ಬೇಗ ಜಾರಿಗೆ ತರುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಜನಪರ ಸರ್ಕಾರವೆಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಲಿದೆ, ನುಡಿದಂತೆ ನಡೆಯುವ ಸರ್ಕಾರವೆಂಬ ಹೆಗ್ಗಳಿಕೆಗೂ ಸಹ ಪಾತ್ರವಾಗಲಿದೆ ಎಂದ ಅವರು ಬಸ್ಸಿನಲ್ಲಿ ಪ್ರಯಾಣ ಮಾಡುಹ ಮಹಿಳೆಯರು ಹಾಗೂ ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ ಅವರಗೆ ಉಚಿತ ಟಿಕೇಟು ನೀಡುವ ಮೂಲಕ ʻʻಶಕ್ತಿʼʼ ಯೋಜನೆಗೆ ಚಾಲನೆ ನೀಡಿದರು.

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌ ಟಿ ಬಳಿಗಾರ, ತಹಶಿಲ್ದಾರ ರವೀಂದ್ರ ಹಾದಿಮನಿ, ಸಿಪಿಐ ಮಹಾಂತೇಶ ಹೊಸಪೇಟೆ ಸಿಡಿಪಿಓ ಮಹಾದೇವಿ ಬುಜನ್ನವರ ಮಾತನಾಡಿದರು.

ಶಕ್ತಿ ಯೋಜನೆಯ ಕುರಿತು ಮಾತನಾಡುತ್ತಿರುವ ಶಾಸಕ ಬಾಬಾಸಾಹೇಬ ಪಾಟೀಲ

ಈ ವೇಳೆ ಕೆಪಿಸಿಸಿ ಸದಸ್ಯ ಶಂಕರ ಹೊಳಿ, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ,‌ವಾ ಕ ರ ಸಾ ಸಂಸ್ಥೆಯ ಡಿವಿಜನಲ್‌ಮೇಕ್ಯಾನಿಕಲ್‌ಇಂಜೀನಿಯರ್ ಡಿ ರಾಧಾಕೃಷ್ಣನ್, ಉಗ್ರಾಣ ಅಧಿಕಾರಿ ಎಸ್‌ ಎಚ್‌ ಹೊನ್ಯಾಳ, ರೇಣುಕಾ ಸಂಕಲಿಪುರ, ಮುದಕಪ್ಪ ಮರಡಿ, ಕೃಷ್ಣಾ ಬಾಳೇಕುಂದರಗಿ, ಕಿರಣ ವಾಳದ, ವಿನಾಯಕ ಮರಡಿ, ಶಿವರಾಜ ಪಾಟೀಲ, ಉಮೇಶ ಶಟ್ಟರ, ಉಮೇಶ ಹೊಂಗಲ, ಶಿವನಸಿಂಗ ಮೋಖಾಶಿ, ರಮೇಶ ಮೋಖಾಶಿ ‌ವಾ ಕ ರ ಸಾ ಸಂಸ್ಥೆಯ ಸಿಬ್ಬಂದಿ ಹಾಗೂ ತಾಲೂಕಾ ಮಟ್ಟದ ವಿವಿದ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು

 

 

 

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";