ಬೆಳಗಾವಿ (ಅ11) :ಬಿಜೆಪಿ ಪಕ್ಷದಿಂದ ವಿಧಾನಪರಿಷತ್ ಸದಸ್ಯರ ಚುನಾವಣೆಯ ಪೂರ್ವಭಾವಿ ಸಭೆಯು ನಗರದ ಖಾಸಗಿ ಹೋಟೆಲ್ ಒಂದರಲ್ಲಿ ರವಿವಾರ ನಡೆಯಿತು. ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದು ಅವರ ಬೆಂಬಲ ಹಾಗೂ ಕಾರ್ಯಕರ್ತರ ಪರಿಶ್ರಮದಿಂದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಭಾರಿ ಅಂತರದಿಂದ ಗೆಲುವು ಸಾಧಿಸಲಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಹೇಳಿದರು.
ಎರಡು ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ನಿಲ್ಲಿಸುವ ನಿರ್ಧಾರ ಪಕ್ಷ ಕೈಗೊಂಡರೆ ಎರಡು ಸ್ಥಾನಗಳನ್ನು ಗೆಲ್ಲುವ ಸಂಪೂರ್ಣ ವಿಶ್ವಾಸ ಪಕ್ಷಕ್ಕಿದೆ. ಚುನಾವಣೆಗೆ ವ್ಯವಸ್ಥಿತ ಪೂರ್ವ ತಯಾರಿಯಲ್ಲಿ ಪಕ್ಷದ ನಾಯಕರು ಜನಪ್ರತಿನಿಧಿಗಳು ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಸಿದ್ಧತೆಯಲ್ಲಿ ಇರಬೇಕೆಂದರು.
ಅರಣ್ಯ ಸಚಿವ ಉಮೇಶ್ ಕತ್ತಿ ಮಾತನಾಡಿ ಪಕ್ಷ ನೀಡುವ ಸೂಚನೆಯಂತೆ ಅಭ್ಯರ್ಥಿಗಳು ಯಾರೇ ಆಗಲಿ ಅವರ ಪರವಾಗಿ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಶ್ರಮಿಸಿ ಅಭ್ಯರ್ಥಿಗಳನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುವಂತೆ ಕೆಲಸ ಮಾಡುತ್ತೇವೆ ಎಂದರು.
ಚಂದ್ರಶೇಖರ್ ಕವಟಗಿ ಪ್ರಸ್ತಾವಿಕವಾಗಿ ಮಾತನಾಡಿ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುವ ವಿಧಾನ ಪರಿಷತ್ ಸದಸ್ಯರ ಚುನಾವಣೆಯಲ್ಲಿ ಪಕ್ಷದ ಮುಖಂಡರು ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು, ಪದಾಧಿಕಾರಿಗಳು ಕೈಗೊಳ್ಳಬೇಕಾದ ಚುನಾವಣಾ ಕಾರ್ಯತಂತ್ರಗಳ ಬಗ್ಗೆ ತಿಳಿಸಿದರು.
ಬೆಳಗಾವಿ ಸಂಸದೆ ಮಂಗಳಾ ಅಂಗಡಿ,ವಿಧಾನ ಸಭೆಯ ಉಪ ಸಭಾಪತಿ ಆನಂದ ಮಾಮನಿ,
ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ,ವಿಧಾನ ಪರಿಷತ್ ಸದಸ್ಯರಾದ ಪ್ರದೀಪ ಶೆಟ್ಟರ, ಶಾಸಕರಾದ ಅಭಯ್ ಪಾಟೀಲ್ ಮಹಾಂತೇಶ್ ದೊಡ್ಡಗೌಡರ, ಮಹದೇವಪ್ಪ ಯಾದವಾಡ, ಅನಿಲ್ ಬೆನಕೆ ,ದುರ್ಯೋಧನ ಐಹೊಳೆ, ಜಿಲ್ಲಾಧ್ಯಕ್ಷರಾದ ಸಂಜಯ ಪಾಟೀಲ, ಡಾ. ರಾಜೇಶ್ ನೇರ್ಲಿ, ಶಶಿಕಾಂತ ಪಾಟೀಲ, ರಾಜ್ಯ ವಕ್ತಾರ ನ್ಯಾಯವಾದಿ ಎಂ ಬಿ ಝೀರಲಿ ಮಾತನಾಡಿದರು.
ಈ ವೇಳೆ ಮಾಜಿ ಶಾಸಕ ಶಶಿಕಾಂತ ನಾಯಕ, ಕಾಡಾ ಅಧ್ಯಕ್ಷ ಡಾ ವಿ ಆಯ್ ಪಾಟೀಲ್, ರಮೇಶ್ ದೆಶಪಾಂಡೆ, ರಾಜೇಂದ್ರ ಹರಕುಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ್ ಪಾಟೀಲ್, ಮಲ್ಲಿಕಾರ್ಜುನ್ ಮಾದಮ್ಮನವರ, ಸೇರಿದಂತೆ ಬಿಜೆಪಿ ಮುಂಖಡರು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಶಿಕಾಂತ್ ಪಾಟೀಲ್ ಸ್ವಾಗತಿಸಿದರು ಮಹೇಶ್ ಮೋಹಿತೆ ನಿರೂಪಿಸಿದರು ಸತೀಶ್ ಅಪ್ಪಾಜಿಗೊಳ ವಂದಿಸಿದರು