ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಲೈನ್‌ ಮ್ಯಾನ್‌ ಸಾವು ಮೂವರು ಅಧಿಕಾರಿಗಳ ಮೇಲೆ ದೂರು ದಾಖಲು

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರು:

  • ಹೆಸ್ಕಾಂ ನಿರ್ಲಕ್ಷ್ಯಕ್ಕೆ ಲೈನ್‌ ಮ್ಯಾನ್‌ ಸಾವು ಮೂವರು ಅಧಿಕಾರಿಗಳ ಮೇಲೆ ದೂರು ದಾಖಲು ಜಿ ಓ ಎಸ್ ಫೋಲ್ ಸ್ಟ್ರಕ್ಚರ್ ‌‌ದಲ್ಲಿ
    ವಿದ್ಯುತ ನಿಲುಗಡೆ ಮಾಡುವ ಕೆಲಸದ ಕುರಿತು ನೌಕರಿಗೆ ಕಳುಹಿಸಿ ಅವನಿಗೆ ತೆಲೆಗೆ ಸುರಕ್ಷಾ ಸಾಮಗ್ರಿಗಳಾದ ಹೆಲ್ಮೇಟ್ ಹಾಗೂ ಕೈಗಳಗೆ ಹ್ಯಾಂಡ್ ಗ್ಲೌಜ್ ಆಗಲಿ ಕೊಡದೇ ಅವನ ಸುರಕ್ಷತೆಯ ಬಗ್ಗೆ ಗಮನ ಕೊಡದೇ ಸದರಿ ಲೈನ್‌ಗಳಲ್ಲಿ ಮೂಂಚಿತವಾಗಿ ವಿದ್ಯುತ್ ನಿಲುಗಡೆ ಆದ ಬಗ್ಗೆ ಖಚಿತ ಪಡಿಸಿಕೊಳ್ಳದೇ ನಿರ್ಲಕ್ಷ ಮಾಡಿ ಅವನಿಗೆ ಕರ್ತವ್ಯಕ್ಕೆ ಕಳುಹಿಸಿ, ಕೆಲಸ ಮಾಡುವಾಗ ಆತನಿಗೆ ಎಚ್‌ಐ ಲೈನ್‌ದಿಂದ ವಿದ್ಯುತ್ ಸ್ಪರ್ಶವಾಗಿ ತೀರಿಕೊಂಡಿದ್ದು ಅವನ ಮರಣಕ್ಕೆ ಸದರಿ ಆರೋಪಿತರ ನಿಷ್ಕಾಳಜಿತನವೇ ಕಾರಣವಾಯಿತು ಎಂದು ಆರೋಪಿಸಿದ್ದಾರೆ

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹೂಲಿಕಟ್ಟಿ ಗ್ರಾಮದ ಪ್ರೇಮಾನಂದ ಎಮ್ಮಿ ಮೃತ ದುರ್ದೈವಿ. ಕಳೆದ ಒಂದು ವರ್ಷದಿಂದ ಪ್ರೇಮಾನಂದ ಹೆಸ್ಕಾಂನಲ್ಲಿ ಲೈನ್‌ಮ್ಯಾನ್‌ ಆಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಶುಕ್ರವಾರ ಡ್ಯೂಟ್‌ಗೆ ಎಂದು ಹೋಗಿದ್ದು ಬೆಳಗ್ಗೆ ಪಟ್ಟಣದಲ್ಲಿರುವ ಮಿನಿ ವಿಧಾನಸೌಧ ರಿಪೇರಿಗೆಂದು ಲೈಟ್‌ ಕಂಬ ಹತ್ತಿದ್ದಾಗ ವಿದ್ಯುತ್‌ ಪ್ರವಹಿಸಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

ಘಟನೆಯ ವೇಳೆ ಹೆಸ್ಕಾಂ ಇಲಾಖೆಯು ಯಾವುದೇ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದೇ ಪ್ರೇಮಾನಂದನನ್ನು ಲೈಟ್‌ ಕಂಬದ ಮೇಲೆ ಹತ್ತಿಸಿದ್ದಾರೆ. ಅಷ್ಟೇ ಅಲ್ಲದೇ ಈ ವೇಳೆ ಎರಡರಲ್ಲಿ ಒಂದು ಲೈನ್‌ನ ಕರೆಂಟ್‌ ಅನ್ನು ಮಾತ್ರ ಆಫ್‌ ಮಾಡಿದ್ದಾರೆ. ಇದರಿಂದಾಗಿ ಪ್ರೇಮಾನಂನ ಆಗಿದೆ. ಇದು ಸಾವು ಅಲ್ಲಾ ಹೆಸ್ಕಾಂನಿಂದ ನಡೆದಿರುವ ಕೊಲೆಯಾಗಿದೆ. ಇದಕ್ಕೆ ಎಇಇ ಅವರೇ ನೇರ ಕಾರಣ ಎಂದು ಮೃತ ಪ್ರೇಮಾನಂದ ಸಂಬಂಧಿಕರು ಆರೋಪಿಸಿದ್ದಾರೆ.

ನಿರ್ಲಕ್ಷ ವಹಿಸಿದ ಹೆಸ್ಕಾಂ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಹೆಸ್ಕಾಂ ನಿಂದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಕುರಿತು ಹೆಸ್ಕಾಂ ಅಧಿಕಾರಿಗಳಾದ ಜಗದೀಶ ನಿಂಗಪ್ಪ ಸಂಶಿ, ಮಹೇಶ್ವರ ಕೋಟ್ಟರೇಶ್ವರಯ್ಯ ಹಿರೇಮಠ ಹಾಗೂ ಶ್ರೀಧರ ರುದ್ರಪ್ಪ ಹೊಂಗಲ,
ಇವರುಗಳ ಮೇಲೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲೆ ಆಗಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";