ಸುದ್ದಿ ಸದ್ದು ನ್ಯೂಸ್
ಚನ್ನಮ್ಮನ ಕಿತ್ತೂರು: ಪಟ್ಟಣದ ರಾಣಿ ಚನ್ನಮ್ಮನ ವರ್ತುಳದಲ್ಲಿ ಸೋಮವಾರ ಸರಲವಾಗಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು
ಈ ವೇಳೆ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ ಕನ್ನಡಾಂಭೆ ತಾಯಿಯು ನಾಡಿನ ಎಲ್ಲ ಜನಾಂಗದ ಮಕ್ಕಳನ್ನು ತನ್ನ ಮಕ್ಕಳೇಂದು ಭಾವಿಸಿರುತ್ತಾಳೆ ಆದ್ದರಿಂದ ಕನ್ನಡ ನಾಡಿನ ಪ್ರತಿಯೊಬ್ಬರು ಕನ್ನಡ ಮಾತೆಯ ಭಾವಚಿತ್ರವನ್ನು ಇಟ್ಟು ಪೂಜಿಸಬೇಕು. ಆಂಗ್ಲಭಾಷೆಯ ಶಾಲೆಗಳನ್ನು ಬಿಟ್ಟು ಕನ್ನಡ ಶಾಲೆಯ ಬೆಳವಣೆಗಾಗಿ ಹೆಚ್ಚಿನ ಆದ್ಯತೆ ನೀಡಬೇಕು. ಕನ್ನಡ ನಾಡಿನ ಹೆಮ್ಮೆಯ ಯುವರತ್ನ ಪುನಿತ್ ರಾಜಕುಮಾರ್ ಅವರ ಅಕಾಲಿಕ ನಿಧನದ ಪ್ರಯುಕ್ತ ಕನ್ನಡ ರಾಜ್ಯೋತ್ಸವವನ್ನು ಸಾಂಕೇತಿಕವಾಗಿ ಸರಳವಾಗಿ ಅಚರಿಸಬೇಕು ಎಂದು ಮನವಿ ಮಾಡಿ ಅಗಲಿದ ಅಪ್ಪು ಆತ್ಮಕ್ಕೆ ಸಂತಾಪ ಸೂಚಿಸಿದರು.
ಇದೆ ಸಂದರ್ಭದಲ್ಲಿ ಶ್ರೀಮತಿ ಸರೋಜಾದೇವಿ ಮಾರಿಹಾಳ ಸರಕಾರಿ ಹೆಣ್ಣು ಮಕ್ಕಳ ಶಾಲೆಯ ವಿಧ್ಯಾರ್ಥಿಗಳು ನಾಡಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಕೇಳುಗರ ಮನ ತನಿಸಿದರು.
ಈ ವೇಳೆ ತಾಲೂಕಾ ದಂಡಾಧಿಕಾರಿ ಸೋಮಲಿಂಗ ಹಾಲಗಿ, ಪ.ಪಂ ಅಭಿವೃದ್ಧಿ ಅಧಿಕಾರಿ ಪ್ರಕಾಶ ಮಠದ, ಕ್ಷೇತ್ರ ಶಿಕ್ಷಣಾಧಿಕಾರಿ ರವೀಂದ್ರ ಬಳಿಗಾರ, ಡಿ. ಆರ್. ಪಾಟೀಲ, ಶ್ರೀಕಾಂತ ದಳವಾಯಿ, ಸರಕಾರಿ ಹಾಗೂ ಖಾಸಗಿ ಶಾಲೆಯ ಮಕ್ಕಳು, ಗುರುಮಾತೆಯರು, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಕನ್ನಡಾಭಿಮಾನಿಗಳು ಇದ್ದರು