ಮುಸ್ಲಿಂ ಧರ್ಮಗುರುಗಳ ಸಾನ್ನಿಧ್ಯದಲ್ಲಿ ನೂರಾರು ಉಚಿತ ಸಾಮೂಹಿಕ ವಿವಾಹ

ಬೈಲಹೊಂಗಲ: ಸಾಮೂಹಿಕ ವಿವಾಹ ಕಾಯ೯ಕ್ರಮಗಳಲ್ಲಿ ಮದುವೆ ದಾಂಪತ್ಯ ಜೀವನಕ್ಕೆ ಕಾಲಿಡುವದರಿಂದ ಗುರು, ಹಿರಿಯರು, ಸಹಸ್ರಾರು ಜನರ ಆಶಿ೯ವಾದೊಂದಿಗೆ ಜೀವನ ಸುಖಕರವಾಗಿ ಸಾಗಲಿದೆ ಎಂದು ಹಜರತ ಮೌಲಾನಾ ಮುಫ್ತಿ ಕಾಸಿಮ ಸಾಹೇಬ ಹೇಳಿದರು.

ಅವರು ಪಟ್ಟಣದ ಅಲ್ಲಹಾಜ್ ಎ.ಎಸ್.ಗದಗ ಫಂಕ್ಷನ್ ಆವರಣದಲ್ಲಿ ಇಸ್ಸಾ ಫೌಂಡೇಶನ್ ಎಜ್ಯುಕೇಶನ್ ಇಂಡಿಯಾ ಪಬ್ಲಿಕ್ ಟ್ರಸ್ಟ್ ಹಾಗೂ ಅಂಜುಮನ್ ಎ ಇಸ್ಲಾಂ ವತಿಯಿಂದ ಬುಧವಾರ ನಡೆದ ಮುಸ್ಲಿಂ ಬಾಂದವರ 100 ವಧು, ವರರ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಕಳೆದ ಎರಡು ವರ್ಷಗಳಿಂದ ದೇಶದ ಬಡ ಜನತೆ ಕೊರೊನಾ ಸಂಕಷ್ಟಕ್ಕೆ ಸಿಲುಕಿ ಆಥಿ೯ಕವಾಗಿ ಕಷ್ಟ ಅನುಭವಿಸಿದ್ದಾರೆ. ಇಂದಿನ ಕಷ್ಟದ ದಿನಮಾನಗಳಲ್ಲಿ ಕಡು, ಬಡ ಜನತೆಗೆ ಮದುವೆ ಮಾಡಿಕೊಳ್ಲುವುದು ತುಂಬಾ ಕಷ್ಟ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಬಡ ಮಕ್ಕಳ ಮದುವೆಗಳಿಗೆ ಅನೂಕೂಲವಾಗಲಿ ಎಂಬ ಮಹದಾಸೆಯಿಂದ ಇಸ್ಸಾ ಫೌಂಡೇಶನ್ ಎಜ್ಯುಕೇಶನ್ ಇಂಡಿಯಾ ಪಬ್ಲಿಕ್ ಟ್ರಸ್ಟ್ ಹಾಗೂ ಅಂಜುಮನ್ ಎ ಇಸ್ಲಾಂ ವತಿಯಿಂದ ಪ್ರತಿವರ್ಷ ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬರುತ್ತಿರುವ ಕಾಯ೯ ಅನನ್ಯವಾಗಿದೆ ಎಂದರು.

ಇಂತಹ ಕಾಯ೯ಕ್ರಮಗಳನ್ನು ಆಯೋಜಿಸುವದರಿಂದ ಆಥಿ೯ಕವಾಗಿ ಸಬಲರಾಗಲು ಸಹಕಾರಿವಾಗಲಿದೆ ಎಂದರು.
ಮೌಲಾನಾ ಶೌಕತ ದೀವಾನಗೇರಿ ಮಾತನಾಡಿ, ಸಪ್ತಪದಿ ತುಳಿದ ಪ್ರತಿಯೊಬ್ಬ ದಂಪತಿಗಳು ದೇವರ ಸಾಕ್ಷಿಯಾಗಿ ಬದುಕಿ, ಬಾಳಬೇಕು. ಸಂಸಾರದಲ್ಲಿ ಏನೇ ತೊಂದರೆ, ತಾಪತ್ರೆಯ ಬಂದರೆ ಪ್ರೀತಿ, ವಿಶ್ವಾಸ, ಕಾಳಜಿ ಹೊಂದಿ ಕುಟುಂಬ ಸಾಗಿಸಿ ಸಾರ್ಥಕ ಬದುಕನ್ನು ತಮ್ಮದಾಗಿಸಿಕೊಳ್ಳಬೇಕು’ ಎಂದರು.

ವೇದಿಕೆ ಮೇಲೆ ಅಹ್ಮದಾಬಾದ ಮೌಲಾನಾ ಹಬೀಬಸಾಹೇಬ ದಾಮತ ಬರಕಾತಹುಂ, ಇಂಡಿಯಾ ಪಬ್ಲಿಕ್ ಟ್ರಸ್ಟ್ ಅಧ್ಯಕ್ಷ ಮೌಲಾನಾ ಮುಫ್ತಿ ಮುಹ್ಮದ ಸಾರೊಡಿ, ಮೌಲಾನಾ ಮುಫ್ತಿ ಸಾದಿಕ, ಮೌಲಾನಾ ಮುಫ್ತಿ ಅಬ್ದುಲ್ ಅಜೀಬ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಡಾ.ಎ.ಎಂ. ಬಾಗೇವಾಡಿ, ಮಹ್ಮದರಫೀಕ ನಾಯ್ಕ, ಇಮ್ತಿಯಾಜ ನೇಸರಗಿ, ಅಕ್ಬರ ತಾಳಿಕೊಟಿ, ಪುರಖಾನ ಗದಗ, ಮೆಹಬೂಬಸುಭಾನಿ ಅತ್ತಾರ, ಅಲಹಾಜ ಕಿತ್ತೂರು, ಎ.ಎಸ್.ನಂದಗಡ ಸೇರಿದಂತೆ ರಾಹತ ಪೌಂಢೆಶನ, ಅಂಜುಮನ ಇಸ್ಲಾಂ ಕಮೀಟಿ ಸದಸ್ಯರು, ಸಮಸ್ತ ಮುಸ್ಲಿಂ ಭಾಂದವರು ಇದ್ದರು.

ಮೌಲಾನಾ ಅರೀಫ ನಿರೂಪಿಸಿದರು. ಮೌಲಾನಾ ಶೌಕತ ದೀವಾನಗೇರಿ ವಂದಿಸಿದರು. ನೂತನ ದಂಪತಿಗಳಿಗೆ ಸಂಸಾರಕ್ಕೆ ಅಗತ್ಯವಿರುವ ವಸ್ತುಗಳನ್ನು ವಿತರಿಸಲಾಯಿತು.

ಸುಸಜ್ಜಿತ ವ್ಯವಸ್ಥೆ – ವಿವಾಹ ಸಮಾರಂಭಕ್ಕೆ ಆಗಮಿಸಿದ ಸಹಸ್ರಾರು ಜನತೆಗೆ ಕುಡಿಯುವ ನೀರು, ಸಸ್ಯಾಹಾರಿ ಊಟ, ವಾಹನ ಪಾಕಿ೯ಂಗ ವ್ಯವಸ್ಥೆಯನ್ನು ಅಚ್ಚು ಕಟ್ಟಾಗಿ ಮಾಡಲಾಗಿತ್ತು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";