ಚನ್ನಮ್ಮನ ಕಿತ್ತೂರು : ಸಮೀಪದ ಗಿರಿಯಾಲ ಗ್ರಾಮದ ಸೂರ್ಯ ದೇವರ ಜಾತ್ರೆಯಲ್ಲಿ ಸೋಮವಾರ ವಿಜ್ರಂಭಣೆಯಿಂದ ರಥೋತ್ಸವ ನಡೆಯಿತು.
ನೂತನವಾಗಿ ನಿರ್ಮಿಸಿರುವ ಈ ದೇವಸ್ಥಾನವೂ ಹಲವಾರು ವಿಶೇಷತೆಗಳಿಂದ ಕೂಡಿದ್ದು ಸೂರ್ಯನಾರಾಯಣ ಸ್ವಾಮೀಯ ದೇವಸ್ಥಾನ ಇದಾಗಿದೆ, ಅಲ್ಲದೆ ಸೂರ್ಯ ದೇವರ ಸ್ವಾಮೀಯ ಸುತ್ತಲೂ ನವಗ್ರಹ ಮೂರ್ತಿಗಳಿವೆ. ಸೋಮವಾರ ರಥಸಪ್ತಮಿಯ ದಿನವಾದ ಕಾರಣದಿಂದ ನೂತನವಾಗಿ ನಿರ್ಮಿಸಿದ್ದ ರಥದ ಉತ್ಸವವೂ ನಡೆಯಿತು. ಈ ರಥೋತ್ಸವಕ್ಕೆ ಧರ್ಮದರ್ಶಿ ಸುರೇಶ ಜೋರಾಪೂರ ಚಾಲನೆ ನೀಡಿದರು. ರಥೋತ್ಸವದಲ್ಲಿ ಕರ್ನಾಟಕದ ಎಲ್ಲ ಕ್ಷತ್ರಿಯ ಕಲಾಲ ಸಮಾಜದ ಭಾಂಧವರು ಹಾಗೂ ಸರ್ವ ಧರ್ಮದ ಭಕ್ತರು ಆಗಮಿಸಿದ್ದರು. ಶಾಸಕ ಮಹಾಂತೇಶ ದೊಡ್ಡಗೌಡರ ಸೇರಿದಂತೆ ವಿವಿಧ ಗಣ್ಯರು ಸೂರ್ಯನಾರಾಯಣ ದರ್ಶನ ಪಡೆದರು. ಈ ಸಂದರ್ಭದಲ್ಲಿ ನಿರಂತರ ಅನ್ನಪ್ರಸಾದ ಕೈಗೊಳ್ಳಲಾಗಿತ್ತು.
ಮಹಾಳೇಶ್ವರ ಜೋಶಿ, ಗಣೇಶ್ ಜೋಶಿ, ಸದಾನಂದ ಸ್ವಾಮಿಗಳು ಕೆ. ಕೆ ಹಳ್ಳಿ, ವಿಷ್ಣು ಕಲಾಲ, ಬಾಬು ಕಲಾಲ, ಸಂತೋಷ್ ಕಲಾಲ, ಮಲ್ಲೇಶ್ ಕಲಾಲ, ಗಿರಿಯಾಲ ಮುಖ್ಯಸ್ಥರಾದ ಬಸವರಾಜು ಸಂಗೊಳ್ಳಿ, ಸುರೇಶ್ ಕುಮಾರ, ಕಿರಣ ವಾಲಿಕರ ಸೇರಿದಂತೆ ಇತರರು ಹಾಗೂ ಭಕ್ತರು ಜಾತ್ರಾಮಹೋತ್ಸವದಲ್ಲಿ ಭಾಗವಹಿಸಿದ್ದರು