ಹುಕ್ಕೇರಿ(ಅ.10):ಜಾತಿಯತೆ ಮಾಡುವ ಶಿಕ್ಷಕಿಯನ್ನು ಬೇರೆಡೆಗೆ ವರ್ಗಾವಣೆ ಮಾಡಿ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಕರನ್ನು ಕೊಡಿ ಎಂದು ಹುಕ್ಕೇರಿ ಕ್ಷೇತ್ರ ಶಿಕ್ಷಣಾದಿಕಾರಿಗಳಿಗೆ ಕಾಲಿಗೆ ಬಿಳುವ ಮೂಲಕ ಪ್ರತಿಭಟಿಸಿದ ದಲಿತ ಮುಖಂಡರು.
ಕಳೆದ ಅಗಷ್ಟ 15ರ ಸ್ವಾತಂತ್ರ್ಯ ಉತ್ಸವ ದಿನದಂದು ಸಂವಿಧಾನ ಶಿಲ್ಪಿ ಡಾ,ಬಾಬಾಸಾಹೇಬ ಅಂಬೇಡ್ಕರರ ಭಾವಚಿತ್ರ ಪೂಜೆ ಮಾಡಿ ಎಂದು ಇಲ್ಲಿಯ ಶಾಲಾ ಮುಖ್ಯಾದ್ಯಾಪಕಿ ಅನುಪಮಾ ಎಂ ಟಿ ಇವರಿಗೆ ನಮ್ಮ ದಲಿತ ಸಂಘಟನೆಯಿಂದ ಪ್ರತಿಭಟಿಸಿ ತಾಕೀತು ಮಾಡಲಾಗಿತ್ತು. ನಮ್ಮ ಪ್ರತಿಭಟನೆಗೆ ಸ್ಪಂದಿಸಿ ಮುಖ್ಯ ಶಿಕ್ಷಕಿ ಮಾಡಿದ ತಪ್ಪಿಗಾಗಿ ಕ್ಷೇತ್ರಶಿಕ್ಷಣಾದಿಕಾರಿಗಳು ಬೇರೆ ಶಾಲೆಗೆ ಇವರನ್ನು ವರ್ಗಾವಣೆ ಮಾಡಿದ್ದರು.
ಆದರೆ ಕೆಲ ಕೆಲಸಕ್ಕೆ ಬಾರದ ವ್ಯಕ್ತಿಗಳ ಜೊತೆಗೂಡಿ ರಾಜಕೀಯ ಬಳಸಿ ಮತ್ತೆ ಇದೆ ಶಾಲೆಗೆ ಈ ಶಿಕ್ಷಕಿ ಹಾಜರಾಗುತ್ತಿದ್ದಾರೆ.
ಅನುಪಮಾ ಶಿಕ್ಷಕಿ ನಮ್ಮ ಗ್ರಾಮದ ಶಾಲೆಗೆ ಬಂದಾಗಿಲಿಂದ ದಲಿತ ಮಕ್ಕಳಿಗೆ ಜಾತಿಯತೆಯ ಬೀಜ ಬಿತ್ತುವುದಲ್ಲದೆ ಅವಾಚ್ಯಶಬ್ದಗಳನ್ನು ಬಳಸುತ್ತಾರೆ. ಪಾಲಕರು ಪ್ರಶ್ನಿಸಿದರೆ ಉಡಾಪೆ ಮಾತುಗಳನ್ನಾಡುತ್ತಾರೆ ಎಂದು ಮದಿಹಳ್ಳಿ ಗ್ರಾಮದ ಗ್ರಾಮಸ್ಥರು ದಿಡಿರಣೆ ಪ್ರತಿಭಟನೆ ಮೂಲಕ ನಮಗೆ ಈ ಶಿಕ್ಷಕಿ ಬೇಡ ಎಂದು ಪಟ್ಟು ಹಿಡಿದರು.ಶಿಕ್ಷಕಿ ವಿರುದ್ದ ಸಿಡಿದ್ದೆದ್ದ ಪಾಲಕ ಮತ್ತು ದಲಿತಪರ ಸಂಘಟನೆಗಳು ಕೂಡಲೆ ಅನುಪಮಾ ಶಿಕ್ಷಕಿಯನ್ನು ಅಮಾನತು ಮಾಡಬೇಕು ಎಂದು ಘೋಷಣೆ ಮೂಲಕ ಪ್ರತಿಭಟಿಸಿದರು.
ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೆಟ್ಟಿನೀಡಿ ಶಿಕ್ಷಕಿಯನ್ನು ಬೇರೆ ಶಾಲೆಗೆ ವರ್ಗಾವಣೆ ಆದೇಶ ಹೊರಡಿಸಿ ಪ್ರತಿಭಟನೆ ತಿಳಿಗೊಳಿಸಿದರು.ಸ್ಥಳಕ್ಕೆ ಪೋಲಿಸ್ ಇಲಾಖೆಯ ಪಿ ಎಸ ಐ ಸಿದ್ರಾಮಪ್ಪ ಉನ್ನದ ನೇತೃತ್ವದಲ್ಲಿ ಯಾವುದೇ ಅಹಿತಕರ ಘಟನೆ ಆಗದಂತೆ ಕ್ರಮವಹಿಸಿದರು.
ಈ ವೇಳೆ ಅಕ್ಷರ ದಾಸೋಹ ಅಧಿಕಾರಿ ಶ್ರೀಶೈಲ ಹಿರೇಮಠ,ದಲಿತ ಮುಖಂಡರು ಗಳಾದ ಬಾಹುಸಾಹೇಬ ಪಾಂಡ್ರೆ,ರೋಹಿತ ತಳವಾರ,ಶಂಕರ ಖಾತೆದಾರ,ಶಂಕರ ತಿಪ್ಪನಾಯ್ಕ,ಬಾಳು ಕೋಳಿ,ರಮೇಶ ಹುಂಜಿ,ಸಂಜು ಶಿಂಗೆ,ಸದಾಶಿವ ಕಾಂಬಳೆ,ಸುಜಿತ ಮಾಳಗೆ,ಮಾರುತಿ ದಿಕ್ಷಿತ,ಲಕ್ಷ್ಮೀ ನೂಲಿ,ಶೋಭಾ ತಳವಾರ,ಗೀತಾ ಖಾತೆದಾರ ಸೇರಿದಂತೆ ದಲಿತಪರ ಸಂಘಟನೆ ಗ್ರಾಮದ ಹಿರಿಯರು,ಮಕ್ಕಳ ಪಾಲಕರು ಉಪಸ್ಥಿತರಿದ್ದರು.