ಕಿತ್ತೂರು: ಪಾರದರ್ಶಕ ಚುನಾವಣೆಗೆ ಜಿಲ್ಲಾಡಳಿತ ಒಂದು ಕಡೆ ಗಮನ ಹರಿಸಿ ಕಟ್ಟುನಿಟ್ಟಾದ ಆದೇಶಗಳನ್ನು ಹೊರಡಿಸಿದೆ. ಆದರೆ ಕಿತ್ತೂರು ಕ್ಷೇತ್ರದಲ್ಲಿ ಜಿಲ್ಲಾಡಳಿತದ ಆದೇಶಕ್ಕೆ ಚುನಾವಣಾ ನೀತಿ ಸಂಹಿತೆಗೆ ಡೋಂಟ್ ಕೇರ್ ಎನ್ನುವ ರೀತಿಯಲ್ಲಿ ಇಲ್ಲಿನ ಬಾರ್ & ರೆಸ್ಟೋರೆಂಟ್ ಹಾಗೂ ದಾಭಾ ಗಳು ಮಧ್ಯರಾತ್ರಿಯವರೆಗೂ ಸದ್ದಿಲ್ಲದೇ ತಮ್ಮ ಕಾರ್ಯನಿರ್ವಹಿಸುತ್ತಿವೆ.
ಸರ್ಕಾರದ ಆದೇಶ ಗಾಳಿಗೆ ತೂರಿ ಮಧ್ಯರಾತ್ರಿವರೆಗೂ ಸಾರಾಯಿ ಅಂಗಡಿಗಳನ್ನು ಓಪನ್ ಇಡುತ್ತಿರುವ ಇಲ್ಲಿನ ಅಂಗಡಿ ಮಾಲೀಕರ ಬೆನ್ನಿಗೆ ಸ್ಥಳೀಯ ಶಾಸಕರು ನಿಂತಿದ್ದಾರೆ ಹೀಗಾಗಿ ಯಾವುದೇ ಅಂಜಿಕೆ ಇಲ್ಲದೇ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಪಕ್ಷದ ಕಾರ್ಯಕರ್ತರ ಮೋಜು ಮಸ್ತಿಗೆ ಮಣೆ ಹಾಕಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಮತದಾರರನ್ನು ಓಲೈಸಲು ದಿನ ನಿತ್ಯ ಹಣ ಹೆಂಡ ಹಂಚುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಡದ ದಾಭಾ ಮಾಲೀಕರು ಬಾರ್ & ರೆಸ್ಟೋರೆಂಟ್ ಮಾಲೀಕರ ವಿರುದ್ದ ಚುನಾವಣೆಗೆ ಕ್ಷಣಗಣನೆ ಶುರುವಾಗುವ ಈ ಹೊತ್ತಲ್ಲಾದರೂ ನಿಯಮ ಪಾಲಿಸುವಂತೆ ಕಠಿಣ ಕ್ರಮ ಇನ್ನಾದರೂ ಕೈಗೊಳ್ಳಬೇಕಿದೆ.