ಸುದ್ದಿ ಸದ್ದು ನ್ಯೂಸ್
ಚನ್ನಮ್ಮನ ಕಿತ್ತೂರು: ಸೆ 10 ರಂದು ನಿಪ್ಪಾನಿಯಲ್ಲಿ ನಡೆಯುವ ಲಿಂಗಾಯತರಿಗೆ ರಾಜ್ಯ ಸರ್ಕಾರವು 2ಎ ಮಿಸಲಾತಿ ಅನುಷ್ಠನ ಹಾಗೂ ಲಿಂಗಾಯತ ಉಪ ಸಮಾಜಗಳಿಗೆ ಕೇಂದ್ರ ಸರ್ಕಾರದ ಓಬಿಸಿ ಮಿಸಲಾತಿಗೆ ಸೇರ್ಪಡೆಗೊಳಿಸಿ ಶಿಪಾರಸ್ಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯಿಸಿ ಸಮೂಹಿಕ ಇಷ್ಟಲಿಂಗ ಪೂಜೆ ಮಾಡುವುದರೊಂದಿಗೆ ಹೋರಾಟಕ್ಕೆ ಚಾಲನೆ ನೀಡುವ ಮಿಸಲಾತಿ ಹೋರಾಟ ಸಮಾವೇಶದಲ್ಲಿ ಚನ್ನಮ್ಮನ ಕಿತ್ತೂರು ತಾಲೂಕಿನ ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರು ಭಾಗವಹಿಸಬೇಕು ಈ ಹಿನ್ನಲೆಯಲ್ಲಿ ಸೆ 7 ರಂದು ಮದ್ಯಾಹ್ನ 1 ಗಂಟೆಗೆ ಸ್ಥಳೀಯ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಕಿತ್ತೂರು ತಾಲೂಕಾ ಮಟ್ಟದ ಸಭೆ ಕರೆಯಲಾಗಿದೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಚನ್ನಮ್ಮನ ಕಿತ್ತೂರು ತಾಲೂಕ ಅಧ್ಯಕ್ಷ ಡಿ ಆರ್ ಪಾಟೀಲ ತಿಳಿಸಿದ್ದಾರೆ.
ಈ ವೇಳೆ ಕಿತ್ತೂರು ತಾಲೂಕಾ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಯುವ ಘಟಕದ ಅಧ್ಯಕ್ಷ ಬಸವರಾಜ ಚಿನಗುಡಿ ಮಾತನಾಡಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮಿಸಲಾತಿ ನೀಡುವಂತೆ ಆಗ್ರಹಿಸಿ ಸುಮಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಹಿಂದಿನ ಮತ್ತು ಇಂದಿನ ಮುಖ್ಯಮಂತ್ರಿಗಳು ಬೇಡಿಕೆ ಈಡೇರಿಸುವ ಆಶ್ವಾಸನೆ ನೀಡುತ್ತಾ ಬಂದಿದ್ದಾರೆ ಹಾಗಾಗಿ ಕೂಡಲಸಂಗಮದ ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಸೆ 10 ರಂದು ನಿಪ್ಪಾನಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಹೋರಾಟಕ್ಕೆ ಚಾಲನೆ ನೀಡಲಾಗುತ್ತಿದೆ ಕಾರಣ ನಾಳೆ ಮದ್ಯಾಹ್ನ 1 ಗಂಟೆಗೆ ಕೂಡಲ ಸಂಗಮದ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದ ಅವರು ಸಮಾಜದ ಮುಖಂಡರು, ಶಾಸಕರು, ಜನಪ್ರತಿನಿದಿಗಳು ಆಗಮಿಸಲಿದ್ದು ಕಿತ್ತೂರು ತಾಲೂಕಿನ ಎಲ್ಲಾ ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡರು, ತಾಲೂಕು ಪದಾಧಿಕಾರಿಗಳು , ಮೀಸಲಾತಿ ಚಳುವಳಿಗಾರರು , ಮಹಿಳೆಯರು, ನೌಕರರು , ತೇಜಸ್ವಿ ಯುವಕರು , ಪಂಚಸೇನಾ ಪದಾಧಿಕಾರಿಗಳು, ವಿವಿಧ ಘಟಕಗಳ ಸದಸ್ಯರು ಸೇರಿದಂತೆ ಸರ್ವರೂ ಅಗಮಿಸಬೇಕು ಎಂದು ಮನವಿ ಮಾಡಿದರು.