ಬುಡಾ ಅಧ್ಯಕ್ಷ ಘೂಳಪ್ಪ‌ ಹೊಸಮನಿ ಅವಧಿ ಮುಕ್ತಾಯವಾಗುವ ಮುನ್ನವೇ ಎತ್ತಂಗಡಿ

ಉಮೇಶ ಗೌರಿ (ಯರಡಾಲ)

ಬೆಳಗಾವಿ (ಅ.21):ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಘೂಳಪ್ಪ‌ ಹೊಸಮನಿ ಅವಧಿ ಮುಕ್ತಾಯವಾಗುವ ಮುನ್ನವೆ ನೂತನ ಬುಡಾ ಅಧ್ಯಕ್ಷ ಸಂಜಯ ಬೆಳಗಾಂವಕರ ಅವರನ್ನು ಸರಕಾರ ಆಯ್ಕೆ ಮಾಡಿ ಗುರುವಾರ ಆದೇಶ ಹೊರಡಿಸಿದೆ.

ಕಳೆದೊಂದು‌ ವರ್ಷದಿಂದ ಬುಡಾ ಅಭಿವೃದ್ಧಿಗೆ ನಿಕಟಪೂರ್ವ ಅಧ್ಯಕ್ಷ ಘೂಳಪ್ಪ‌ ಹೊಸಮನಿಗೆ ಸ್ಥಳೀಯ ಶಾಸಕರು ಅಭಿವೃದ್ಧಿ ಮಾಡಲು ಸಾಥ್ ನೀಡುತ್ತಿರಲಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿದ್ದವು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತರಾಗಿದ್ದ ಘೂಳಪ್ಪ ಹೊಸಮನಿ ಅವರನ್ನು ಏಕಾಏಕಿ ಬುಡಾದಿಂದ ವಜಾ ಮಾಡಿರುವುದು ಕಾಂಗ್ರೆಸ್ ಗೆ ದಾಳವಾಗುವುದರದಲ್ಲಿ ಯಾವುದೇ ಸಂದೇಹ ಇಲ್ಲ.

ಘೂಳಪ್ಪ ಹೊಸಮನಿ ಕಾಲದಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದನ್ನು ಅನುಷ್ಠಾನಗೊಳಿಸಲು ಸಾಕಷ್ಟು ಬಾರಿ ಸಭೆ ಕರೆದರೂ ಬಿಜೆಪಿ ಶಾಸಕರು ಗೈರಾಗಿ ಉಳಿದಿದ್ದರು. ಇದು ಕಾಂಗ್ರೆಸ್ ಆಹಾರವಾಗಿತ್ತು. ಏಕಾಏಕಿ ದಿಢೀರ್ ಘೂಳಪ್ಪ ಬದಲಾವಣೆ ಮಾಡಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

Share This Article
";