ಗೋಮಾಳಗಳನ್ನು ರಕ್ಷಿಸಿಕೊಳ್ಳಲು ರೈತ ಸಂಘಟನೆಗಳು ಪ್ರತಿಭಟಸಬೇಕೆಂದು ಬಿ.ಎಂ.ಚಿಕ್ಕನಗೌಡರ ಆಗ್ರಹ.

ಬಿ.ಎಂ.ಚಿಕ್ಕನಗೌಡರ
ಉಮೇಶ ಗೌರಿ (ಯರಡಾಲ)

ಬೈಲಹೊಂಗಲ:ಸಂಘ ಪರಿವಾರದ ಅನತಿಯಂತೆ ರಾಜ್ಯದ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತಂದು ಗೋವುಗಳನ್ನು ಮಾರದಂತೆ ರಕ್ಷಿಸಿದ್ದು. ರಕ್ಷಿತ ಗೋವುಗಳಿಗೆ ಮೇವು ಉತ್ಪಾದಿಸುವ ರಾಜ್ಯದ 19.39ಲಕ್ಷ ಎಕರೆ ಗೋಮಾಳವನ್ನೇ ಸಂಘ ಪರಿವಾರ ನುಂಗಲು ಸಂಚು ರೂಪಿಸಿದೆ. ಗೋವುಗಳ ಮೇವಿಗಾಗಿ ಇದ್ದ ಗೋಮಾಳಗಳನ್ನು ಉಳಿಸಲು ರಾಜ್ಯದ ರೈತ ಸಂಘಟನೆಗಳು ಮುಂದಾಗಬೇಕು ಎಂದು ಬಿ.ಎಂ.ಚಿಕ್ಕನಗೌಡರ ಮಾಧ್ಯಮಯೊಂದಕ್ಕೆ ತಿಳಿಸಿದ್ದಾರೆ.

ಲಾಲ್ಲೂಪ್ರಸಾದ್ ಯಾದವ್ ಗೋವುಗಳ ಮೇವು ನುಂಗಿದ ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರೆ, ರಾಜ್ಯದಲ್ಲಿ ಗೋವುಗಳಿಗೆ ಮೇವು ಉತ್ಪಾದಿಸುವ  19 ಲಕ್ಷ ಎಕರೆ ಗೋಮಾಳವನ್ನೆ ನುಂಗವ ಕಾನುನ್ಮಾತಕ ಯೋಜನೆಗಳನ್ನು ಸರಕಾರ ರೂಪಿಸುತ್ತಿದೆ. ಇದೆ ಸಂಘ ಪರಿವಾರ ಕಂದಾಯ ಸಚಿವ ಆರ್.ಅಶೋಕ ಅವರಿಂದ ಪ್ರತ್ಯೇಕ ನೀತಿ ರೂಪಿಸಲು ಹೊರಟಿದೆ.

ನೂರಾರು ವರ್ಷಗಳಿಂದ ಗೋವುಗಳಿಗೆ ಮೇವಿಗಾಗಿ ಕಾಯ್ದಿರಿಸಿದ ಗೋಮಾಳವನ್ನು ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದ ಬಿಜೆಪಿ ಸರ್ಕಾರವೇ ಗೋಮಾಳ ನುಂಗಲು ಯೋಜನೆ ರೂಪಿಸಿದ್ದು ಇಂಥ ಭೂಗಳ್ಳರನ್ನು ಪ್ರತಿಭಟಿಸಿ ಗೋವುಗಳಿಗೆ ಮೇವು ಉತ್ಪಾದಿಸುವ ಗೋಮಾಳಗಳನ್ನು ರಕ್ಷಿಸಿಕೊಳ್ಳಲು ರಾಜ್ಯದ ರೈತ ಸಂಘಟನೆಗಳು ಮತ್ತು ಕುರಿಗಾಯಿಗಳ ಸಂಘಟನೆಗಳು ಜಂಟಿಯಾಗಿ ಪ್ರತಿಭಟಸಬೇಕೆಂದು ಸಮಸ್ತ ಲಿಂಗಾಯತ ಹೋರಾಟ ವೇದಿಕೆಯ ಮುಖ್ಯ ಸಂಘಟಕರಾದ  ಬಿ.ಎಂ.ಚಿಕ್ಕನಗೌಡರ ವಿನಂತಿಯೊಂದಿಗೆ ಆಗ್ರಹಿಸಿದ್ದಾರೆ.

Share This Article
";