ಬೈಲಹೊಂಗಲ (ಅ.28):ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಸಿ.ಎಸ್. ದ್ವಾರಕನಾಥ್ ರವರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಅಂತ್ಯಂತ ಪ್ರಬಲವಾಗಿರುವ ಲಿಂಗಾಯತ ಪಂಚಮಸಾಲಿ ಸಮಾಜದಲ್ಲಿ ಭೂಮಾಲಿಕರು ದೊಡ್ಡ ಕೃಷಿಕರು ಮುಂಚೋಣಿಯ ಕೈಗಾರಿಕೋದ್ಯೆಮಿಗಳು ಪ್ರಭಾವಿ ರಾಜಕಾರಣಿಗಳಿದ್ದಾರೆಂದು ಪಂಚಮಸಾಲಿ ಸಮುದಾಯದ ಒತ್ತಡಕ್ಕೆ ಸರ್ಕಾರ ಮಣಿದು ಈ ಸಮಾಜವನ್ನು ಹಿಂದುಳಿದ ವರ್ಗಕ್ಕೆ ಸೇರಿಸಬಾರದು ಎಂದು ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ಶನಿವಾರ ಹಿಂದುಳಿದ ಸಮುದಾಯದ ಮಠಾಧೀಶರನ್ನು ಒಳಗೊಂಡ ಸಭೆಯಲ್ಲಿ ಒತ್ತಾಯಿಸಿದ್ದರು.
ಇದನ್ನು ಸಮಸ್ತ ಲಿಂಗಾಯತ ಹೋರಾಟ ವೇದಿಕೆಯ ಮುಖ್ಯ ಸಂಘಟಿಕ ಬಿ.ಎಂ. ಚಿಕ್ಕನಗೌಡರ ಖಂಡಿಸಿದ್ದಾರೆ.
ತಾವು ತಿಳಿಸಿದಂತೆ ಪಂಚಮಸಾಲಿ ಸಮಾಜದಲ್ಲಿರುವ ಅರ್ಹತೆ ಈಗಾಗಲೆ ಮೀಸಲಾತಿ ಪಡೆಯುತ್ತಿರುವ ಹಿಂದುಳಿದ ವರ್ಗಗಳೆಂದು ಹೇಳಿಕೊಳ್ಳುತ್ತಿರುವ ಸಮಾಜಗಳಲ್ಲಿ ಇಲ್ಲವೆ?
ಕುರುಬ ಸಮಾಜದಲ್ಲಿ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ಭೂಮಾಲಿಕರಾಗಿ ಮುಂಚೋಣೆಯ ಕೈಗಾರಿಕೊದ್ಯಮಿಗಳು ಕೊರತೆ ಇದೆಯೇ?
ಅವರು ಅಖಂಡ ಕುರುಬ ಸಮಾಜವನ್ನು ಎಸ್.ಟಿ. ಮೀಸಲಾತಿಗೆ ಸೇರಿಸುವಂತೆ ಸರ್ಕಾರದ ಮೇಲೆ ಒತ್ತಾಯಿಸುತ್ತಿರುವದು ನಿಮ್ಮ ಗಮನಕ್ಕೆ ಬಂದಿಲ್ಲವೆ ಮತ್ತು ಹಿಂದುಳಿದ ವರ್ಗಗಳ ಹಾಗೂ ಎಸ್.ಸಿ. ಎಸ್.ಟಿ. ನಾಯಕರಲ್ಲಿ ಕೈಗಾರಿಕೋದ್ಯಮಿಗಳು ಸ್ವಂತಕ್ಕೆ ಹೆಲಿಕ್ಯಾಪ್ಟರ್ ಹೊಂದಿರುವುದು ತಾವು ಗಮನಿಸಿಲ್ಲವೆ.
ಆದರೂ ಇವರು ಮೀಸಲಾತಿ ಸೌಲಭ್ಯ ಪಡೆಯುತ್ತಿರುವುದು ನಿಮ್ಮ ಕಣ್ಣಿಗೆ ಕಾಣುವುದಿಲ್ಲವೆ ಮಾಜಿ ಅಧ್ಯಕ್ಷರೇ ಎಂದು ಬಿ ಎಂ ಚಿಕ್ಕನಗೌಡರ ಪ್ರಶ್ನಿಸಿದ್ದಾರೆ.