ಸವದತ್ತಿ : ಭಾರತ ಸ್ವಾತಂತ್ರ್ಯದ “75ವರ್ಷಗಳ ಆಜಾದಿ ಕಾ ಅಮೃತ ಮಹೋತ್ಸವ”ವನ್ನು 2ನೇ ಅಕ್ಟೋಬರ್ 2021 ರಿಂದ 14, ಮತ್ತು 2021 ರ ನವೆಂಬರ್ 8 ರಿಂದ 14 ರವರೆಗೆ ಕಾನೂನು ಸೇವೆಗಳ ಸಪ್ತಾಹದ ನೆನಪಿಗಾಗಿ “ಪ್ಯಾನ್ ಇಂಡಿಯಾ ಜಾಗೃತಿ ಮತ್ತು ಔಟ್ರೀಚ್” ಕಾರ್ಯಕ್ರಮಗಳು
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಳಗಾವಿ, ತಾಲೂಕಾ ಕಾನೂನು ಸೇವಾ ಸಮಿತಿ ಸವದತ್ತಿ, ಹಾಗೂ ವಕೀಲರ ಸಂಘ ಸವದತ್ತಿ, ಹಾಗೂ ಸವದತ್ತಿ ತಾಲೂಕಿನ ಎಲ್ಲ ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕಃ 10-10-2021 ರಂದು ಮುಂಜಾನೆ 09-30 ಗಂಟೆಗೆ ಭಾರತ ಸ್ವಾತಂತ್ರ್ಯದ “75ವರ್ಷಗಳ ಆಜಾದಿ ಕಾ ಅಮೃತ ಮಹೋತ್ಸವ”ವನ್ನು 2ನೇ ಅಕ್ಟೋಬರ್ 2021 ರಿಂದ 14, ಮತ್ತು 2021 ರ ನವೆಂಬರ್ 8 ರಿಂದ 14 ರವರೆಗೆ ಕಾನೂನು ಸೇವೆಗಳ ಸಪ್ತಾಹದ ನೆನಪಿಗಾಗಿ “ಪ್ಯಾನ್ ಇಂಡಿಯಾ ಜಾಗೃತಿ ಮತ್ತು ಔಟ್ರೀಚ್” ಕಾರ್ಯಕ್ರಮವನ್ನು ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಆವರಣ, ಯಲ್ಲಮ್ಮಗುಡ್ಡ ತಾ ಸವದತ್ತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಉದ್ಫಾಟನಾ ನೆರವೇರಿಸಿದ ಸಿ. ಎಮ್. ಜ್ಯೋಶಿ, ಗೌರವಾನ್ವಿತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೆಳಗಾವಿ ರವರು ಪ್ರತಿಯೊಂದು ಗ್ರಾಮಗಳಲ್ಲಿ ಇರುವ ಜನರಿಗೆ ಕಾನೂನಿನ ಅರಿವನ್ನು ಮೂಡಿಸಬೇಕು ಎನ್ನುವ ನಿಟ್ಟಿನಲ್ಲಿ ನವೆಂಬರ್ 14 ರವರೆಗೆ ಈ ಅಮೃತ ಮಹೋತ್ಸವದ ಕಾರ್ಯಕ್ರಮಗಳು ಹಾಗೂ ಅಭಿಯಾನಗಳನ್ನು ಹವ್ಮಿಕೊಳ್ಳಲಾಗಿದೆ, ಪ್ರತಿಯೊಂದು ತಾಲೂಕಿನ ನ್ಯಾಯಾಲಯದ ಆವರಣದಲ್ಲಿ ಕಾನೂನಿನ ಸಲಹಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜನಸಾಮಾನ್ಯರು, ಕಡು ಬಡವರು ಉಚಿತವಾಗಿ ಕಾನೂನಿನ ನೆರವನ್ನು ಪಡೆಯಬೇಕಾದರೆ ಕಾನೂನಿನ ಸಲಹಾ ಕೇಂದ್ರಗಳಿಗೆ ಭೇಟಿ ನೀಡಿ ಸಲಹೆ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
ನಂತರ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಅಭಿಯಾನದಲ್ಲಿ ತಾಲೂಕಾ ಕಾನೂನು ಸೇವಾ ಸಮಿತಿಯ ಪೆನಲ್ ನ್ಯಾಯವಾದಿಗಳು, ನ್ಯಾಯವಾದಿಗಳ ಸಂಘದ ಸದಸ್ಯರು, ಯಲ್ಲಮ್ಮ ಪುರಸಭೆಯ ಪೌರ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವಲಯ ಅರಣ್ಯ ಇಲಾಖೆಯವರು, ಸುಮಾರು 500 ಕ್ಕೂ ಹೆಚ್ಚು ಜನರಿಗೆ ಕಾನೂನು ಸೇವಾ ಪ್ರಾಧಿಕಾರದ ದ್ದೇಯೋದ್ದೇಶಗಳನ್ನು ಸಾರುತ್ತಾ ಅಭಿಯಾನವನ್ನು ನಡೆಸಿದರು, ಅದೇ ರೀತಿ ಪುರಸಭೆ ವಾಹನದಲ್ಲೂ ಕೂಡ ರಿಕಾಂರ್ಡಿಂಗ್ಸಗಳನ್ನು ಪ್ರಚಾರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಧಾನ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರಾದ, ಶಶಿಧರ ಎಮ್. ಗೌಡ, ಪ್ರಧಾನ ದಿವಾಣಿ ಮತ್ತು ಜಿ.ಎಂ.ಎಫ್.ಸಿ ನ್ಯಾಯಾಧೀಶರಾದ ಸಂದೀಪ ಪಾಟೀಲ, ತಹಶೀಲ್ದಾರಾದ, ಪ್ರಶಾಂತ ಪಾಟೀಲ, ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ, ಸಿ.ವಿ.ಸಾಂಭಯ್ಯನಮಠ, ಪದಾಧಿಕಾರಿಗಳಾದ, ಪಿ.ಎನ್.ಡೊಳ್ಳಿನ, ಎಸ್. ಎಸ್. ಮಾನೆ, ಸರ್ಕಾರಿ ಅಭಿಯೋಜಕರಾದ, ಎಸ್. ಎಮ್. ನದಾಫ, ಎಸ್. ಎಮ್. ಜಂಬೂನವರ, ಸಿ.ಪಿ.ಐ, ಎಮ್. ಐ. ನಡುವಿನಮನಿ, ಪಿ.ಎಸ್.ಐ, ಶಿವಾನಂದ ಗುಡಗನಟ್ಟಿ, ಆರೋಗ್ಯ ಅಧಿಕಾರಿಗಳಾದ ಡಾ. ಮಹೇಶ ಚಿತ್ತರಗಿ, ವಲಯ ಅರಣ್ಯಾಧಿಕಾರಿಗಳಾದ ಶ್ರೀಮತಿ ಸುನಿತಾ ನಿಂಬರಗಿ, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಾದ ಕಾಂಚನಾ ಅಮಠೆ, ಹಿರಿಯ ನ್ಯಾಯವಾದಿಗಳಾದ ಸಿ.ಜಿ.ತುರಮರಿ, ಬಿ. ಎಮ್. ಯಲಿಗಾರ, ಹಾಗೂ ಮಹಿಳಾ ಪ್ರತಿನಿಧಿ ಜಯಶ್ರೀ ಪೂಜೇರ, ಪುರಸಭೆಯ ಭಿಮರಾಯ ಆನಿ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಮಾನೆ, ನ್ಯಾಯವಾದಿಗಳು, ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.