ಬೆಳಗಾವಿ: ಇದೇ ಅಕ್ಟೋಬರ್ 23 ಮತ್ತು 24 ರಂದು ನಡೆಯುವ ಕಿತ್ತೂರ ಉತ್ಸವದಲ್ಲಿ ಮೂರು ಬೇಡಿಕೆಗಳನ್ನು ಜಾರಿಗೆ ತರಬೇಕು ಎಂದು ರಾಜಕೀಯ ಮುಖಂಡ ಅಶೋಕ ಪೂಜಾರಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ ಪೂಜಾರಿ ಅವರು ಹೈದರಾಬಾದ ಪ್ರಾಂಥವು ಹೈದರಾಬಾದ್ ಸುಲ್ತಾನರ ಆಡಳಿತಕ್ಕೆ ಒಳಪಟ್ಟಿದ್ದರಿಂದ ಈ ಹೆಸರು ಪ್ರಾಪ್ತವಾಗಿತ್ತು, ಆದರೆ ಅದು ದಾಸ್ಯದ ಹೆಸರಾಗಿತ್ತು. ಹಾಗಾಗಿ ಬಸವಣ್ಣನವರ ಕಲ್ಯಾಣ ಕಲ್ಯಾಣ ಕ್ರಾಂತಿಯ ಕಾರಣದಿಂದಾಗಿ ಅದು ಕಲ್ಯಾಣ ಕರ್ನಾಟಕವೆಂದು ಹೆಸರಾಗಿದೆ. ಅದರಂತೆ ಹಳೆಯ ಮುಂಬೈ ಪ್ರಾಂತವನ್ನು ಕಿತ್ತೂರು ಕರ್ನಾಟಕವೆಂದು ನಾಮಕರಣ ಮಾಡಬೇಕು ಎಂದು ಸಿಎಂಗೆ ಒತ್ತಾಯಿಸಿದರು.
ಇನ್ನು ಇದೇ ಅಕ್ಟೋಬರ್ 23 ಮತ್ತು 24 ರಂದು ನಡೆಯುವ ಕಿತ್ತೂರ ಉತ್ಸವದಲ್ಲಿ ಹಳೆಯ ಮುಂಬೈ ಪ್ರಾಂತದ ಭಾಗಕ್ಕೆ ಕಿತ್ತೂರು ಕರ್ನಾಟಕವೆಂದು ನಾಮಕರಣ ಮಾಡಬೇಕು, ಕಿತ್ತೂರು ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಅಭಿವೃದ್ಧಿ ನಿಗಮ ರಚನೆಯಾಗಬೇಕು, ಜೊತೆಗೆ ಸುವರ್ಣ ವಿಧಾನಸೌಧಕ್ಕೆ ಆಡಳಿತಾತ್ಮಕ ಶಕ್ತಿ ತುಂಬುವ ಕೆಲಸ ಆಗಬೇಕು ಹಾಗಾಗಿ ಈ ಕೂಡಲೇ ಮುಖ್ಯಮಂತ್ರಿಗಳು ಈ ಮೂರು ಬೇಡಿಕೆಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಮೇಶ ಡವಳಿ, ಪ್ರವೀಣ್ ಪಾಟೀಲ್, ನಿಂಗಪ್ಪ ಪಾಟೀಲ್, ಅಜಯ ಮಾದಾಳಿ ಉಪಸ್ಥಿತರಿದ್ದರು.