ಸುದ್ದಿ ಸದ್ದು ನ್ಯೂಸ್
ಚನ್ನಮ್ಮನ ಕಿತ್ತೂರು: ಕಿತ್ತೂರು ಮತಕ್ಷೇರ್ತದ ಪಟ್ಟಣ ಪಂಚಾಯತಿಗಳಿಗೆ ಡಿ 27 ರಂದು ನಡೆಯುವ ಚುನಾವಣೆಗೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಆಯ್ಕೆ ಮಾಡುವ ಹಿನ್ನಲೆಯಲ್ಲಿ ಇಂದು ಪಟ್ಟಣದ ಡೊಂಬರಕೊಪ್ಪ ಹತ್ತಿರ ಇರುವ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಚನ್ನಮ್ಮನ ಕಿತ್ತೂರಿನ 18 ಮತ್ತು ಎಂ.ಕೆ. ಹುಬ್ಬಳ್ಳಿಯ 14 ವಾರ್ಡಗಳಿಗೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಗಿದೆ ಎಂದು ಕಿತ್ತೂರು ಮತಕ್ಷೇತ್ರದ ಅಧ್ಯಕ್ಷ ಅನಂದ ಹಂಪಣ್ಣವರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷ ಸೇರಿದಂತೆ ಪ್ರಾದೇಸಿಕ ಪಕ್ಷಗಳು ಸಹ ಅಧಿಕಾರದ ಮತ್ತಿನಲ್ಲಿ ನಾಡಿನ ಜನತೆಗೆ ದ್ರೋಹ ಮಾಡುತ್ತಿವೆ. ಜನತೆಯ ಏಳೆಗೆಗಾಗಿ ಶ್ರಮಿಸುವ ಬದಲು ಹಣ ಸಂಪಾದನೆ, ಜಾತಿ ರಾಜಕಾರಣ ಹಾಗೂ ಒಣ ಪ್ರತಿಷ್ಠೆಗೆ ಮುಂದಾಗಿವೆ. ಇಂತಹ ಪಕ್ಷಗಳಿಂದ ದೇಶ ಅಭಿವೃದ್ಧಿ ಹೊಂದಲು ಅಸಾಧ್ಯ. ಹಾಗೂ ದೇಸದ ಬೆನ್ನೆಲುಬು ಎಂದು ಕರೆಸಿಕೊಳ್ಳುತ್ತಿರುವ ರೈತರು ಕಣ್ಣಿರಿನಲ್ಲಿ ಕೈತೊಳೆಯುತ್ತಿದ್ದಾರೆ. ಆದರೆ ರಾಷ್ಟ್ರ ರಾಜದಾನಿ ದೆಹಲಿಯಲ್ಲಿ ಅಧಿಕಾರದಲ್ಲಿ ಇರುವ ಆಮ್ ಆದ್ಮಿ ಪಕ್ಷ ಅತಿ ಕಡೆಮೆ ಸಮಯದಲ್ಲಿ ಜನತೆಗೆ ಶುದ್ಧ ಕುಡಿಯು ನೀರು, ಮೋಹಲ್ಲಾ ಕ್ಲಿನಿಕ್ (ಆಸ್ಪತ್ರೆ) ಗಳ ಮುಖಾಂತರ ಉಚಿತವಾಗಿ ಚಿಕಿತ್ಸೆ ನೀಡುತ್ತಿದೆ, ಉಚಿತ ಹಾಗೂ ಅತಿ ಕಡಿಮೆ ಬೆಲೆಯಲ್ಲಿ ವಿದ್ಯುತ್ ಒದಗಿಸಿದೆ, ಸರ್ವರಿಗೂ ಗುಣಮಟ್ಟದ ಶಿಕ್ಷಣ, ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಸಂಚಾರ, ರೈತರಿಗೆ ಬೆಳೆ ಪರಿಹಾರ, ಸೈನಿಕರು ವೀರ ಮರಣ ಹೊಂದಿದ ಕುಟುಂಬಗಳಿಗೆ 1 ಕೋಟಿ ಪರಿಹಾರ ಸೇರಿದಂತೆ ವಿವಿಧ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮುಖಾಂತರ ಜನಮನ್ನಣೆ ಗಳಿಸಿದೆ.
ಮುಂಬರುವ ಹಲವಾರು ರಾಜ್ಯಗಳಲ್ಲಿ ನಮ್ಮ ಪಕ್ಷ ಅಧಿಕಾರದ ಗದ್ದುಗೆಯನ್ನು ಹಿಡಿಯಲಿದೆ ಜೊತೆಗೆ ಸ್ಥಳಿಯ ಪಟ್ಟಣ ,ಜಿಲ್ಲಾ ಹಾಗೂ ತಾಲೂಕ ಪಂಚಾಯತ ಚುನಾವಣೆಯಲ್ಲಿ ಸ್ಪರ್ಧಿಸಲು ತೀರ್ಮಾನಿಸಿದೆ. ಈಗಾಗಲೇ ಬಹುತೇಕ ವಾರ್ಡ್ಗಳ ಅಭ್ಯರ್ಥಿಗಳ ಪಟ್ಟಿ ಸಿದ್ದಗೊಂಡಿದ್ದು ಇನ್ನೂಳಿದ ಅಭ್ಯರ್ಥಿಗಳ ಪಟ್ಟಿಯನ್ನು ಸದ್ಯದಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಕಿತ್ತೂರು ಹಾಗೂ ಎಂ.ಕೆ. ಹುಬ್ಬಳ್ಳಿ ಪಟ್ಟಣ ಪಂಚಾಯತಿಗಳಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ದೆಹಲಿ ಮಾದರಿಯ ಅರವಿಂದ ಕೇಜ್ರಿವಾಲ್ ಅವರ ಪಾರ‍್ದಶಕ ಮತ್ತು ಭ್ರಷ್ಟಾಚಾರ ಮುಕ್ತ ಸಮುಗ್ರ ಅಭಿವೃದ್ಧಿಗಾಗಿ ನಾಡಿನ ಜನರ ಸೇವೆಯನ್ನು ಮಾಡುತ್ತೇವೆ.
ಇ ವೇಳೆ ಕಿತ್ತೂರು ಹಾಗೂ ಎಂ.ಕೆ. ಹುಬ್ಬಳ್ಳಿಯ ಪಟ್ಟಣ ಪಂಚಾಯತಗೆ ಆಮ್ ಆದ್ಮಿ ಪಕ್ಷದಿಂದ ಜನರ ಸೇವೆ ಮಾಡಲು ಅನೇಕ ಆಕಾಂಕ್ಷಿ ಅಭ್ಯರ್ಥಿಗಳು ಆಗಮಿಸಿದ್ದರು
ವರದಿ: ಬಸವರಾಜ ಚಿನಗುಡಿ