ಬೈಲಹೊಂಗಲ- ಪಟ್ಟಣದ ಮೂರುಸಾವಿರಮಠ (ತಿಪ್ಪಿಮಠ) ಲಿಂ. ನೀಲಕಂಠ ಮಹಾಶಿವಯೋಗೀಶ್ವರರ ಜಾತ್ರಾ ಮಹೋತ್ಸವ ಹಾಗೂ ರಾಷ್ಟ್ರೀಯ ರತ್ನ ಪ್ರಶಸ್ತಿ ವಿಭೂಷಿತ, ಶಿಕ್ಷಣ ಕ್ಷೇತ್ರದ ಹರಿಕಾರ ಲಿಂ. ಗಂಗಾಧರ ಮಹಾಸ್ವಾಮಿಗಳವರ 13 ನೇ ಪುಣ್ಯ ಸ್ಮರಣೋತ್ಸವ ಫೆ. 25 ರಿಂದ 5 ದಿನಗಳ ಕಾಲ ಜರುಗಲಿದೆ ಎಂದು ಶ್ರೀಮಠದ ಪ್ರಭುನೀಲಕಂಠ ಸ್ವಾಮಿಜಿ ಹೇಳಿದರು.
ಇಂದು ಶಾಖಾ ಮೂರು ಸಾವಿರಮಠದಲ್ಲಿ ನಡೆದ ಜಾತ್ರಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು ಫೆ.25 ರಂದು ಮುಂಜಾನೆ 9 ಗಂಟೆಗೆ ಷಟಸ್ಥಲ ಧ್ಜಜಾರೋಹಣವನ್ನು ಕಟಕೋಳ ಸಚ್ಚಿದಾನಂದ ಸ್ವಾಮಿಜಿ ಸಾನಿಧ್ಯದಲ್ಲಿ ನೆರವೇರುವುದು, ಸಂಸ್ಥೆಯ ಕಾರ್ಯಾಧ್ಯಕ್ಷ ಸಿ.ಎಸ್.ಸಾಧುನವರ ಅಧ್ಯಕ್ಷತೆ ವಹಿಸುವರು. ಸಂಜೆ 7 ಘಂಟೆಗೆ ವಚನಗಳಲ್ಲಿ ಬದುಕು ಪ್ರವಚನ ಉದ್ಘಾಟನೆ ಜರುಗಲಿದ್ದು, ಪೂಜ್ಯರು, ಗಣ್ಯರು ಆಗಮಿಸುವರು. ಗಂದಿಗವಾಡದ ತೇಜಸ್ವಿನಿ ಹಿರೇಮಠ ಅವರಿಂದ ಐದು ದಿನಗಳ ಕಾಲ ಸಂಜೆ 7 ರಿಂದ 8 ಗಂಟೆವರೆಗೆ ಪ್ರವಚನ ನಡೆಯಲಿದೆ. 26 ರಂದು ಹಾನಗಲ ಕುಮಾರ ಮಾಹಶಿವಯೋಗಿಗಳ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗುವುದು. 27 ರಂದು ಸಂಜೆ 7ಕ್ಕೆ ಮಹಿಳಾ ಗೋಷ್ಠಿ, 28 ರಂದು ಸಂಜೆ 7 ಕ್ಕೆ ಲಿಂ. ಗಂಗಾಧರ ಶ್ರೀಗಳ 13 ನೇ ಪುಣ್ಯ ಸ್ಮರಣೋತ್ಸವ ಗುರುವಂದನಾ ಕಾರ್ಯಕ್ರಮ ಹಾಗೂ ಪ್ರವಚಣ ಮಂಗಲೋತ್ಸವ ಜರುಗುವುದು. ಮಾ.1 ರಂದು ಸಂಜೆ 4 ಗಂಟೆಗೆ ನೀಲಕಂಠ ಮಹಾಶಿವಯೋಗಿಶ್ವರರ ಮಹಾರಥೋತ್ಸವವು ಹರಗುರು ಚರ ಮೂರ್ತಿಗಳ ಸಾನಿಧ್ಯದಲ್ಲಿ ಜರುಗುವುದು ಎಂದರು.
ಚಿತ್ರನಟ ಶಿವರಂಜನ ಬೋಳನ್ನವರ, ಸಂಸ್ಥೆಯ ನಿರ್ದೇಶಕ ಎಸ್.ಎಸ.ಸಿದ್ನಾಳ, ಪ್ರೋ.ಸಿ ವಿ.ಜ್ಯೋತಿ, ರವಿ ಹುಲಕುಂದ ಮಾತನಾಡಿದರು.
ಈ ವೇಳೆ ಶಂಕರೆಪ್ಪ ತುರಮರಿ, ಪ್ರಮೋದಕುಮಾರ ವಕ್ಕುಂದಮಠ, ಪುರಸಭೆ ಸದಸ್ಯ ಬಸವರಾಜ ಜನ್ಮಟ್ಟಿ, ಬಸವರಾಜ ಮೂಗಿ, ತಿಪ್ಪಣ್ಣ ಬಿಳ್ಳೂರ, ಕುಮಾರ ದೇಶನೂರ, ಡಾ.ಚಿದಂಬರ ಕುಲಕರ್ಣಿ, ಅಮಿತ ಪಾಟೀಲ, ಮಹಾಂತೇಶ ಅಕ್ಕಿ, ಪ್ರೊ.ಸಿ.ವಿ. ಜ್ಯೋತಿ, ಮಡಿವಾಳಪ್ಪ ಹೋಟಿ, ಶೋಭಾ ಛಬ್ಬಿ, ಲಕ್ಷ್ಮಿ ಮುಗಡ್ಲಿಮಠ, ದುಂಡಪ್ಪ ಅಕ್ಕಿ, ಈಶ್ವರ ಚಿನಗುಡಿ, ಸೋಮನಾಥ ಸೋಪ್ಪಿಮಠ ಶ್ರೀಮಠದ ಸದ್ಬಕ್ತರು ಇದ್ದರು.