ಹಬೀಬ ಶಿಲ್ಲೇದಾರ ಅವರ ಜನ್ಮದಿನದ ಪ್ರಯುಕ್ತ ಉಚಿತ ನೇತ್ರ ತಪಾಸಣಾ ಶಿಬಿರ ಜರುಗಿತು.

ಉಚಿತ ನೇತ್ರ ತಪಾಸಣೆಯಲ್ಲಿ ತೊಡಗಿದ ವೈದ್ಯರು

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು : ತಾಲೂಕಿನ ಎಂ ಕೆ ಹುಬ್ಬಳ್ಳಿಯಲ್ಲಿ ಇಂದು 75 ನೇಯ ಸ್ವತಂತ್ರೋತ್ಸವದ ಅಮೃತ ಮಹೋತ್ಸವ ಹಾಗೂ ಕಾಂಗ್ರೇಸ್ ಮುಖಂಡ ಹಬೀಬ ಶಿಲೆದಾರ ಅವರ 49‌ ನೇಯ ಹುಟ್ಟು ಹಬ್ಬದ ಪ್ರಯುಕ್ತ ಹಬೀಬ ಶಿಲ್ಲೇದಾರ ಅಭಿಮಾನಿ ಬಳಗ ಹಾಗೂ ಬೆಳಗಾವಿಯ ನಂದಾದೀಪ ಕಣ್ಣಿನ ಆಸ್ಪತ್ರೆ ವತಿಯಿಂದ ಉಚಿತ ನೇತ್ರ ತಪಾಸಣೆ ಶಿಬಿರ ಜರುಗಿತು.
ಪಟ್ಟಣದ ಹಿರಿಯರು ಸಮಾಜ ಸೇವಕರಾದ ನಾಗೇಂದ್ರ ಗಣಾಚಾರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬೆಳಗಾವಿಯ ನಂದಾದೀಪ ಕಣ್ಣಿನ ಆಸ್ಪತ್ರೆ ವೈದ್ಯರ ತಂಡ ಅಚ್ಚುಕಟ್ಟಾಗಿ ನೇತ್ರ ತಪಾಸಣಾ  ಮಾಡಿದರು. ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಪಟ್ಟಣದ ನಾಗರಿಕರು ವಿವಿಧ ಗ್ರಾಮಗಳ ಸಾವಿರಾರು ಗ್ರಾಮಸ್ಥರು ಕಣ್ಣು ಪರೀಕ್ಷೆ ಮಾಡಿಸಿಕೊಂಡರು.
ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ಮುಖಂಡರಾದ ವಿಶಾಲ ವಾಲಿ, ಅಬ್ದುಲ್ ಮುಲ್ಲಾ, ಸುನಿಲ ಸಂಬಣ್ಣವರ, ಚೇತನ ದೇಮಟ್ಟಿ, ಹಾರುಣ ಸಾಹೇಬಖಾನ, ರಾಜು ನಾವಲಗಟ್ಟಿ ಹಾಗೂ ಎಂ ಕೆ ಹುಬ್ಬಳ್ಳಿ ಪಟ್ಟಣ ಪಂಚಾಯತಿ ಸರ್ವ ಸದಸ್ಯರು ಪಟ್ಟಣದ ನಾಗರಿಕರು ಸೇರಿದಂತೆ ಇನ್ನೂ ಅನೇಕರು ಇದ್ದರು.

ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡ ಡಿ. ಬಿ. ಇನಾಮದಾರ, ಸತೀಶಾಣ್ಣಾ ಜಾರಕಿಹೊಳಿ ಮತ್ತು ಹಬೀಬ ಶಿಲ್ಲೇದಾರ ಅಭಿಮಾನಿಗಳು

ʼʼನಾಳೆ ಅಂಬಡಗಟ್ಟಿಯಲ್ಲಿ ಇರುವ ಸತೀಶ ಅಣ್ಣಾ ಜಾರಕಿಹೊಳಿ ಕಲ್ಯಾಣ ಮಂಟಪದಲ್ಲಿ ಹಬೀಬ ಶಿಲ್ಲೇದಾರ ಅವರ 49 ನೇಯ ಜನ್ಮದಿನದ ನಿಮಿತ್ತ ವಿವಿಧ ಕ್ಷೇತ್ರಗಳಲ್ಲಿ ಸಾದನೆ ಮಾಡಿದ ಸಾದಕರಿಗೆ ಗೌರವ ಸನ್ಮಾನ, ಆದರ್ಶ ದಂಪತಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಗುದು ಹಾಗೂ ಶ್ರೀ ಸತೀಶಣ್ಣಾ ಪ್ರತಿಭಾ ಪುರಸ್ಕಾರ ಸೇರಿದಂತೆ ಇನ್ನೂ ಅನೇಕ ಜನಪರ ಕಾತ್ಯಕ್ರಮಗಳು ಜರುಗಲಿವೆ ಎಂದು ಡಿ. ಬಿ. ಇನಾಮದಾರ ಅಭಿಮಾನಿ ಬಳಗ, ಸತೀಶಣ್ಣಾ ಜಾರಕಿಹೊಳಿ ಅಭಿಮಾನಿ ಬಳಗ ಹಾಗೂ ಹಬೀಬ ಶಿಲ್ಲೇದಾರ ಗೆಳೆಯರ ಬಳಗದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆʼʼ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";