ಬೆಳಗಾವಿ:ಪ್ರಾಥಮಿಕ ಶಾಲಾ ಶಿಕ್ಷಕರ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಮೊದಲ ಹಂತವಾಗಿ ತರಬೇತಿ ಬಹಿಷ್ಕಾರವನ್ನು ಯಶಸ್ವಿಯಾಗಿಸಿ ಬಹಿಷ್ಕಾರ ಚಳುವಳಿಯನ್ನು ಮುಂದುವರಿಸುತ್ತಿರುವ ಶಿಕ್ಷಕರು ಮುಂದೆ ತಮ್ಮ ಹೋರಾಟದ ರೂಪರೇಷಗಳನ್ನು ಕೆಳಗಿನಂತೆ ಮಾಡಿಕೊಂಡಿದ್ದಾರೆ.
ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಇನ್ನೂ ಸ್ಪಂದಿಸಿರುವುದಿಲ್ಲ ಎಂಬ ನೋವು ನಮ್ಮ ಸಂಘಕ್ಕೆ ಇರುವದರಿಂದ ದಿನಾಂಕ 21ಅಕ್ಟೋಬರ್ 2021 ರಿಂದ 29 ಅಕ್ಟೋಬರ್ 2021ರ ವರೆಗೆ,ತರಬೇತಿ ಬಹಿಷ್ಕಾರ ದೊಂದಿಗೆ ಕಪ್ಪುಪಟ್ಟಿ ಧರಿಸಿ ಶೈಕ್ಷಣಿಕ ಚಟುವಟಿಕೆ ನಿರ್ವಹಣಾ ಚಳುವಳಿ ಮಾಡಲು KSPSTA ರಾಜ್ಯ ಸಂಘ ತೀರ್ಮಾನಿಸಿ ಚಳುವಳಿಗೆ ಕರೆ ಕೊಟ್ಟಿದೆ.
ಇನ್ನೂ ಎರಡನೇ ಹಂತದ ಈ ಹೋರಾಟಕ್ಕೆ ಸ್ಪಂದಿಸಿ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ಹೋರಾಟದ ರೂಪರೇಷೆಗಳನ್ನು ಈ ಕೆಳಗಿನಂತೆ ತೀರ್ಮಾನಿಸಿದ್ದಾರೆ
1) ದಿನಾಂಕ 30/10/2021 ರಿಂದ 10/11/2021ರವರೆಗೆ ಮಧ್ಯಾಹ್ನದ ಬಿಸಿ ಊಟದ ಮಾಹಿತಿಯನ್ನು ಅಪ್ಡೇಟ್ ಮಾಡದೆ ನಮ್ಮ ಬೇಡಿಕೆಗಳ ಬಗ್ಗೆ ಅಸಹಕಾರ ವ್ಯಕ್ತಪಡಿಸುವುದು*
2) *ದಿನಾಂಕ 11/11/2021 ರಿಂದ18/11/2021 ರ ವರೆಗೆ SATS ಮಾಹಿತಿಗಳನ್ನು ಅಪ್ಡೇಟ್ ಮಾಡದೆ ರಾಜ್ಯದ ಶಿಕ್ಷಕರ ಸಮಸ್ಯೆಗಳ ಕುರಿತು ಸರಕಾರದ ಗಮನ ಸೆಳೆಯುವುದು.
3) ರಾಜ್ಯ ಹಂತದಲ್ಲಿ- 50 ಕ್ಕೆ ಒಬ್ಬರಂತೆ ಆಯ್ಕೆಯಾದ ರಾಜ್ಯದ ಎಲ್ಲಾ ಸಂಘದ ಪ್ರತಿನಿಧಿಗಳು,ಪದಾಧಿಕಾರಿಗಳು,ನಿರ್ದೇಶಕರು ಒಂದು ದಿನದ ರಾಜ್ಯಮಟ್ಟದ ರ್ಯಾಲಿ ಹಾಗೂ ಧರಣಿ ಸತ್ಯಾಗ್ರಹ. ಇಷ್ಟಾಗ್ಯೂ ಸರಕಾರ ,ಇಲಾಖೆ ಇದಕ್ಕೂ ಸ್ಪಂದಿಸದಿದ್ದಲ್ಲಿ ಅಂತಿಮ ಹೋರಾಟವಾಗಿ ತರಗತಿ ಬಹಿಷ್ಕಾರ ಹಾಗೂ ಕೊನೆಯ ಹಂತದ ಶಾಲಾ ಬಹಿಷ್ಕಾರ ಚಳುವಳಿಯನ್ನು ಹಮ್ಮಿಕೊಳ್ಳುವ ಹೋರಾಟದ ರೂಪುರೇಷೆಗಳನ್ನು ರಚಿಸಲಾಗಿದೆ.ಎಂದು ನಗರ ಘಟಕದ ಅಧ್ಯಕ್ಷರಾದ
ಬಾಬು ಸೊಗಲನ್ನವರ ತಿಳಿಸಿದರು.