Monday, April 15, 2024

ದಲಿತರ ಮೇಲಿನ ದೌರ್ಜನ್ಯ ವಿರೋಧಿಸಿ ರಸ್ತೆ ಬಂದ್ ಮಾಡಿ ಪ್ರತಿಭಟನೆ

ಯರಗಟ್ಟಿ : ತಾಲೂಕಿನ ನುಗ್ಗಾನಟ್ಟಿ ಗ್ರಾಮದ ಬಾಳೇಶ ಹೊಂಡಪ್ಪನವರ ಇತನ ಹಾಗೂ ಇವರ ಕುಟುಂಬದ ಮೇಲೆ ಅನ್ಯ ಸಮಾಜದ ಬಾಳಪ್ಪ ಬಸವಂತಪ್ಪ ಸಿದ್ದಬಸನವರ ಇವರ ಕುಟುಂಬ ವರ್ಗದವರು ಹೋಡಿ ಬಡಿ ಮಾಡಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು.ದಲಿತರ ಮೇಲಿನ ದೌರ್ಜನ್ಯದ ವಿರೋಧಿ ವಿವಿಧ ದಲಿತಪರ ಸಂಘಟನೆಗಳು ಇಂದು ಯರಗಟ್ಟಿ ಸಂಗೋಳ್ಳಿ ರಾಯಣ್ಣ ವೃತ್ತಿದಲ್ಲಿ ರಸ್ತೆ ಬಂದ್ ಮಾಡಿ ಒಂದು ಗಂಟೆಗೂ ಹೆಚ್ಚು ಕಾಲ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಪಂಚನಗೌಡ ದ್ಯಾಮನಗೌಡ್ರ 24 ಗಂಟೆಯೋಳಗೆ ಆರೋಪಿಗಳನ್ನು ಬಂಧಿಸಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ.ನಂತರ ಯರಗಟ್ಟಿ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗೆ, ಗೃಹ ಸಚಿವರಿಗೆ, ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸುರೇಶ್ ಭಜಂತ್ರಿ, ಚಂದ್ರು ತಲ್ಲೂರ, ಪ್ರಕಾಶ ಚನ್ನಮೇತ್ರಿ, ಹನಮಂತ ಹಾರೊಗೊಪ್ಪ ಅಂಬರೀಶ ಕಡಬಿ, ಮಹಾದೇವ ಯಾಡ್ರಾಂವಿ, ಫೀರಸಾಬ ತಹಶೀಲ್ದಾರ, ಲಕಪ್ಪ ಸತ್ತಿಗೇರಿ ಹಾಗೂ. ಇನ್ನೂಳಿದ ದಲಿತ ಮುಖಂಡರು, ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಿಲ್ಲೆ

ರಾಜ್ಯ

error: Content is protected !!