Saturday, July 27, 2024

ಕಾಂಗ್ರೆಸ್‌ ನಾಯಕರ ಖಾಸಗಿ ಸಂಭಾಷಣೆ ವೈರಲ್‌: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ತೀವ್ರ ಮುಜುಗರ! 

ಬೆಂಗಳೂರು (ಅ.14):  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಕಾಂಗ್ರೆಸ್‌ ನಾಯಕರ ಖಾಸಗಿ ಸಂಭಾಷಣೆ ವೈರಲ್‌ ಆಗಿ ತೀವ್ರ ಮುಜಗರ ತಂದ ಪ್ರಕರಣದ ಮೂಲಕ ಕಾಂಗ್ರೆಸ್‌ನ ಬಣ ರಾಜಕಾರಣ ಮತ್ತೆ ಬಹಿರಂಗಕ್ಕೆ ಬಂದಂತಾಗಿದೆ.

ಈ ಖಾಸಗಿ ಸಂಭಾಷಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಹೊಗಳಲಾಗಿದೆ ಮತ್ತು ಸ್ಪಷ್ಟವಾಗಿ ಡಿ.ಕೆ. ಶಿವಕುಮಾರ್‌ ಅವರನ್ನು ಹೀಗೆಳೆದಿದ್ದರೆ, ಹೀಗಾಗಿ ಇದು ಬಣ ರಾಜಕಾರಣದ ಪರಿಣಾಮವಾಗಿ ನಡೆದಿರುವ ಸಂಭಾಷಣೆ ಎಂದೇ ಹೇಳಲಾಗುತ್ತದೆ.

ಪ್ರಸ್ತುತ ಶಿವಕುಮಾರ್‌ ಅವರೊಂದಿಗೆ ಹೆಚ್ಚು ಗುರುತಿಸಿಕೊಂಡಿರುವ ಸಲೀಂ ಅವರು ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾದ ನಂತರವೇ ಮಾಧ್ಯಮ ಸಂಯೋಜಕರಾಗಿ ನೇಮಕಗೊಂಡವರು.
ವಾಸ್ತವವಾಗಿ ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಎಂ.ಎ. ಅವರು ಮಾಜಿ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಅವರ ಆಪ್ತರಾಗಿದ್ದವರು.

ಇನ್ನು ಉಗ್ರಪ್ಪ ಅವರು ಡಿ.ಕೆ. ಶಿವಕುಮಾರ್‌ ಅವರೊಂದಿಗೂ ಕೆಪಿಸಿಸಿ ಅಧ್ಯಕ್ಷರಾದ ನಂತರ ಉತ್ತಮ ಸಂಬಂಧವನ್ನು ಕಾಯ್ದುಕೊಂಡಿದ್ದ ಅವರು
ಮೂಲತಃ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕ್ಯಾಂಪ್‌ನಲ್ಲಿ ಗುರುತಿಸಿಕೊಂಡವರು.

ಇಂತಹ ನಾಯಕರಿಬ್ಬರು ವೇದಿಕೆಯಲ್ಲಿ ಕುಳಿತು ಶಿವಕುಮಾರ್‌ ವಿರುದ್ಧ ಚರ್ಚೆ ನಡೆಸಿದ ಸಂಭಾಷಣೆಯಲ್ಲಿ ಸಲೀಂ ಶಿವಕುಮಾರ್‌ ವಿರುದ್ಧ ಮಾಡುವ ಆರೋಪಗಳಿಗೆ ಉಗ್ರಪ್ಪ ನಗುವಿನ ಪ್ರತ್ಯುತ್ತರ ನೀಡಿದ್ದಾರೆ.

ಸಂಭಾಷಣೆಯಲ್ಲಿ ಸಲೀಂ ಅವರು ಸಿದ್ದರಾಮಯ್ಯ ಅವರ ಬಾಡಿ ಲ್ಯಾಂಗ್ವೇಜ್‌ ಖಡಕ್‌ ಆಗಿದೆ. ಆದರೆ ಡಿ.ಕೆ. ಶಿವಕುಮಾರ್‌ ಕುಡುಕರಂತೆ ತೊದಲುತಾರೆ ಎಂದೆಲ್ಲ ಹೀಗಳೆಯುತ್ತಾರೆ. ತನ್ಮೂಲಕ ಸಿದ್ದರಾಮಯ್ಯ ಅವರನ್ನು ಶಿವಕುಮಾರ್‌ ಅವರಿಗಿಂತ ಉತ್ತಮ ನಾಯಕ ಎಂದು ಬಿಂಬಿಸುವ ಪ್ರಯತ್ನ ಈ ಸಂಭಾಷಣೆಯಲ್ಲಿದೆ.

ಈ ಸಂಭಾಷಣೆ ತುಣುಕು ಬಹಿರಂಗವಾದ ನಂತರ ಡಿ.ಕೆ. ಶಿವಕುಮಾರ್‌ ಬಣ ತೀವ್ರವಾಗಿ ಕೊಪಗೊಂಡಿದ್ದು, ಉಗ್ರಪ್ಪ ಹಾಗೂ ಸಲೀಂ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡಿದ್ದಾರೆ.

ಡಿ.ಕೆ ಶಿವಕುಮಾರ ಕರಪ್ಟ್ ಎಂದದಿದ್ದ ಮುಖಂಡ ಸಲೀಂ ತಲೆದಂಡವಾಗಿದೆ.

ಕೆಪಿಸಿಸಿ ಕಚೇರಿಯಲ್ಲೇ ಕುಳಿತು ಮುಖಂಡ ಸಲೀಂ ಹಾಗು ವಿ.ಎಸ್ ಉಗ್ರಪ್ಪ  ಡಿಕೆ ಶಿವಕುಮಾರ್ ವಿರುದ್ಧ  ಮಾತನಾಡಿದ್ದು, ಅವರೊಬ್ಬ ಭ್ರಷ್ಟ ಎಂದಿದ್ದರು. ಇದರಿಂದ ಸದ್ಯ ಸಲೀಂ ಅವರನ್ನು ಸಸ್ಪೆಂಡ್  ಮಾಡಿ ಆದೇಶಿಸಲಾಗಿದೆ ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!