Saturday, June 29, 2024

ಇಂದಿನಿಂದ “ಶರಣರ ಜೀವನ ದರ್ಶನ” ಪ್ರವಚನ ಪ್ರಾರಂಭ

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರು: ಸಕಲ ಜೀವಾತ್ಮರಿಗೆ ಲೇಸನೆ ಬಯಸಿದ ಶ್ರೀ ಬಸವಾದಿ ಪ್ರಮಥರ ಸಂಕಲ್ಪದಿಂದ ಐತಿಹಾಸಿಕ ಚನ್ನಮ್ಮನ ಕಿತ್ತೂರಿನ ಶ್ರೀ ಬಸವ ನಗರದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಬಸವ ಮಂಟಪ ಸಹಾಯಾರ್ಥ ನಿಮಿತ್ಯವಾಗಿ ಹುಕ್ಕೆರಿ ಬಸವ ಬೆಳವಿ ಚರಮೂರ್ತಿ ಚರಂತೇಶ್ವರ ವಿರಕ್ತಮಠದ ಶ್ರೀ ಶರಣ ಬಸವ ಮಹಾಸ್ವಾಮಿಗಳಿಂದ “ಶರಣರ ಜೀವನ ದರ್ಶನ” ಪ್ರವಚನ ಏರ್ಪಡಿಸಲಾಗಿದೆ ಎಂದು ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ 18 ರಿಂದ ಡಿ 31 ರ ವರೆಗೆ ಪ್ರತಿದಿನ ಸಂಜೆ 6-30 ಕ್ಕೆ ಪ್ರವಚನ, ಇಷ್ಟ ಲಿಂಗ ದೀಕ್ಷೆ, ಅನುಭಾವ ಹಾಗೂ ಖ್ಯಾತ ಕಲಾವಿದರಿಂದ ಸಂಗೀತ ಸೇರಿದಂತೆ ಇತರೆ ವಿಶೇಷ ಕಾರ್ಯಕ್ರಮಳು ಜರುಗುತ್ತವೆ.

ಕಾರ್ಯಕ್ರಮದಲ್ಲಿ ನಾಡಿನ ಮಠಾಧೀಶರು, ಸಂತಮಹಾಂತರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಸಮಸ್ತ ಬಸವಪರ ಸಂಘಟನೆಗಳ ಸರ್ವ ಸದಸ್ಯರು ಮಹಿಳಾ ಸಂಘದ ಪದಾಧಿಕಾರಿಗಳು, ಸರ್ವ ಸದಸ್ಯರು ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ ಅವರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬಸವ ಭಕ್ತರು ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ವಿನಂತಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9164343082, 7975094564, 9008869423, 6361432543 ಸಂಖ್ಯೆಗೆ ಕರೆ ಮಾಡಲು ಕೊರಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!