Sunday, September 8, 2024

ಕುಲವಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ 9 ಹಳ್ಳಿಗಳ ರೈತರು ಶಾಸಕರ ಎರಡು ಕಣ್ಣುಗಳಿದ್ದಂತೆ; ಸಂಗನಗೌಡ ಪಾಟೀಲ

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರು : ತಾಲೂಕಿನ ಕುಲವಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ 9 ಹಳ್ಳಿಗಳ ರೈತರು ಶಾಸಕರ ಎರಡು ಕಣ್ಣುಗಳು ಇದ್ದಂತೆ. ಸುಮಾರು ವರ್ಷಗಳ ರೈತರ ನೋವಿಗೆ ಶಾಸಕ ಬಾಬಾಸಾಹೇಬ ಪಾಟೀಲ ಅವರು ಸ್ಪಂದಿಸಿದ್ದಾರೆ, ಯಾರದೊ ಮಾತು ಕೇಳಿ ಪ್ರಚೋದನೆಯಿಂದ ಹಾಗೂ ತಪ್ಪು ತಿಳುವಳಿಕೆಯಿಂದ ಓರ್ವ ಪ್ರತಿಭಟನಾ ನಿರತ ಮಹಿಳೆ ಶಾಸಕರ ವಿರುದ್ಧ ಏಕ ವಚನದಲ್ಲಿ ಅವಾಚ್ಯವಾಗಿ ಮಾತನಾಡಿದ್ದು ಸರಿಯಲ್ಲ ಎಂದು ಕಿತ್ತೂರು ಬ್ಲಾಕ್ ಅಧ್ಯಕ್ಷ ಸಂಗನಗೌಡ ಪಾಟೀಲ ಕಿಡಿ ಕಾರಿದರು. 

ರವಿವಾರ ಪಟ್ಟಣದ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಸುದ್ಧಿ ಗೋಷ್ಠಿ‌  ನಡೆಸಿ ಮಾತನಾಡಿದ ಅವರು, ರೈತರು ತಮ್ಮ ಬೇಡಿಕೆಗಳ ಇಡೇರಿಕೆಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಅದಕ್ಕೆ ನಮ್ಮದೇನು ತಕರಾರು ಇಲ್ಲ, ಅವರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಕೆಲ ರಾಜಕೀಯ ದುಷ್ಟ ಹಿತಾಸಕ್ತಿಗಳು ಈ ರೈತರ ಮುಗ್ಧತೆ ಬಳಸಿಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿವೆ ಇದಕ್ಕೆ ನಾವು ಜಗ್ಗುವುದಿಲ್ಲ ಎಂದ ಅವರು, ಚನ್ನಮ್ಮಾಜಿಯ ಖಡ್ಗ, ರಾಯಣ್ಣನ ಶೌರ್ಯ ಎಲ್ಲವೂ ನಮ್ಮಲ್ಲಿದ್ದು ನಮ್ಮದು ಸುಮ್ಮನಿರುವ ಜಾಯಮಾನವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೇಸರಗಿ ಬ್ಲಾಕ್ ಅಧ್ಯಕ್ಷ ನಿಂಗಪ್ಪ ಅರಕೇರಿ ಮಾತನಾಡಿ,  ಕುಲವಳ್ಳಿ ಸೇರಿದಂತೆ 9 ಗ್ರಾಮಗಳ ಜನರ ಮೇಲೆ ನಮ್ಮ ಶಾಸಕರು ಕಾಳಜಿ ಇದ್ದಾರೆ, ಈ ಹಿಂದೆಯೂ ಕಿತ್ತೂರು ಆಡಳಿತ ಸೌಧದ ಬಳಿ ಅಹೋರಾತ್ರಿ ಧರಣಿ ನಡೆದಾಗ ಜಿಲ್ಲಾ ಉಸ್ತುವಾರಿ ಸಚಿವರ ಮನವೊಲಿಸಿ ಸ್ಥಳಕ್ಕೆ ಭೇಟಿ ಮಾಡಿಸುವ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಲು ಯಶಸ್ಸು ಕಂಡಿದ್ದಾರೆ, ಅದರಂತೆ ಜಿಲ್ಲಾ ಮಂತ್ರಿಗಳು ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದು ತಕ್ಷಣ ಸರ್ವೆ ಕಾರ್ಯ ಮಾಡಿಸಿದ್ದಾರೆ.  ಕೆಲವೊಂದು ದುಷ್ಟ ರಾಜಕೀಯ ಶಕ್ತಿಗಳು, ಶಾಸಕ ಬಾಬಾಸಾಹೇಬ್ ಪಾಟೀಲರ ಹೆಸರಿಗೆ ಕಳಂಕ ತರುವ ನಿಟ್ಟಿನಲ್ಲಿ ರೈತ ಹೋರಾಟದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದು ಇದನ್ನು ಖಂಡಿಸಿ ಬರುವ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದ ಅವರು ಈ ಸಮಸ್ಯೆಯನ್ನು ರಾಜಿ ಸಂದಾನದ ಮೂಲಕ ಬಗೆ ಹರಿಸಬಕೋ ಅಥವಾ ಬೇರೆ ಯಾವುದಾದರು ದಾರಿ ಇದೆಯೇ ಎಂಬುದರ ಬಗ್ಗೆ ಸಮಾಲೋಚನೆಗಳು ನಡೆದಿದ್ದು ಕುಲವಳ್ಳಿ ಭಾಗದ ಯಾವೊಬ್ಬ ರೈತರನ್ನು ಬಿಟ್ಟು ಕೊಡುವ ಪ್ರಮೇಯ ನಮ್ಮ ಶಾಸಕರ ಬಳಿ ಇಲ್ಲಾ ಎಂದು ಸ್ಪಷ್ಟ ಪಡಿಸಿದರು.

”ನಮ್ಮ ಶಾಸಕರು ಆಯ್ಕೆಯಾಗಿ ಆರೇಳು ತಿಂಗಳು ಕಳೆದಿವೆ ಇವರ ಕೆಲಸ ಕಾರ್ಯಗಳಿಗೆ ಹಾಗೂ ಹೆಸರಿಗೆ ಕಪ್ಪು ಮಸಿ ಹಚ್ಚಲು ಕಾಣದ ಕೈಗಳು ಸಾಕಷ್ಟು ಕೆಲಸಗಳನ್ನು ನಡೆಸಿದ್ದು ನಮ್ಮ ಗಮನಕ್ಕೂ ಬಂದಿವೆ. ಪ್ರತಿಭಟನೆಯಲ್ಲಿ  ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿ, ಅವಹೇಳನಕಾರಿಯಾಗಿ ಮಾತನಾಡಿದ ಮಹಿಳೆ  ಕ್ಷಮೆ ಯಾಚಿಸಬೇಕು. ಕ್ಷಮೆಯಾಚಿಸದಿದ್ದರೆ ಸೂಕ್ತ ಕ್ರಮಕ್ಕಾಗಿ ಇಲ್ಲಿಯ ತಹಶೀಲ್ದಾರ ಹಾಗೂ ಪೊಲೀಸ್ ಇಲಾಖೆಗೆ ಬಾಬಾಸಾಹೇಬ ಪಾಟೀಲ ಅಭಿಮಾನಿ ಬಳಗ, ಕಿತ್ತೂರು ಮತ್ತು ನೇಸರಗಿ ಬ್ಲಾಕ್ ಕಾಂಗ್ರೇಸ್‌ ವತಿಯಿಂದ ನಾಳೆ ಸೋಮವಾರ ಮನವಿ ಸಲ್ಲಿಸಲಾಗುವುದು‌”. ಮುದುಕಪ್ಪ ಮರಡಿ ಮಾಜಿ ತಾಲೂಕಾ ಪಂಚಾಯತ ಸದಸ್ಯ ಕಾದರವಳ್ಳಿ.

ಈ ವೇಳೆ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಮುಡ್ಡಪ್ಪ ಸಕ್ರೇನ್ನವರ, ಸುನಿಲ ಘಿವಾರಿ, ಬಸನಗೌಡ ಪಾಟೀಲ, ಕೃಷ್ಣ ಬಾಳೆಕುಂದ್ರಿ, ಚನ್ನಗೌಡ ಪಾಟೀಲ, ಚಂದ್ರಗೌಡ ಪಾಟೀಲ, ಬಸವರಾಜ ಸಂಗೊಳ್ಳಿ, ಸಾಗರ ಕಾಗತಿದೇಸಾಯಿ,ಹಣುಮಂತ ಗುಂಡಗಾವಿ, ಶಿವಯೋಗಿ ದೊಡಮನಿ, ಈರಣ್ಣ ಕೊಡ್ಲಿ, ರಾಮಲಿಂಗ ಬಶೆಟ್ಟಿ, ಹಾಗೂ ಬಾಬಾಸಾಹೇಬ ಪಾಟೀಲ ಅಭಿಮಾನಿ ಬಳಗದ ಸರ್ವ ಸದಸ್ಯರು ಕಾಂಗ್ರೇಸ್ ಕಾರ್ಯಕರ್ತರು ಇದ್ದರು.

ಜಿಲ್ಲೆ

ರಾಜ್ಯ

error: Content is protected !!