Tuesday, April 16, 2024

ರಾಜಗುರ ಸಂಸ್ಥಾನ ಕಲ್ಮಠದ ಪೂಜ್ಯರ ಪಟ್ಟಾಧಿಕಾರ ವಾರ್ಷಿಕೋತ್ಸವ ನಿಮಿತ್ತ ಸೋಮವಾರ ಗುರುವಂದನಾ ಸಮಾರಂಭ ಮತ್ತು ರಕ್ತದಾನ ಶಿಬಿರ

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರು: ಪಟ್ಟಣದ ರಾಜಗುರು ಸಂಸ್ಥಾನ  ಕಲ್ಮಠದ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳ 14 ನೇ ಪಟ್ಟಾಧಿಕಾರದ ವಾರ್ಷಿಕೋತ್ಸವ ಸಮಾರಂಭದ ನಿಮಿತ್ತ ಸೋಮವಾರ ಮುಂಜಾನೆ 10.30 ಗಂಟೆಗೆ ಗುರುವಂದನಾ ಸಮಾರಂಭ ಮತ್ತು ರಕ್ತದಾನ ಶಿಬಿರವನ್ನು ಇಲ್ಲಿಯ ಕಲ್ಮಠದ ಶ್ರೀ ಚಂದರಗಿ ಸಭಾ ಭವನದಲ್ಲಿ ಜರುಗಲಿದ್ದು ಕಿತ್ತೂರು ನಾಡಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕಿತ್ತೂರ ತಾಲೂಕಾ ಕನ್ನಡ‌ ಸಾಹಿತ್ಯ ಪರಿಷತ್ತ ಅಧ್ಯಕ್ಷ ಡಾ.ಎಸ್.ಬಿ.ದಳವಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ಕಲ್ಮಠದ ಸದ್ಭಕ್ತರು, ಹಳೆಯ ವಿದ್ಯಾರ್ಥಿಗಳು, ಕಿತ್ತೂರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ರಾಜಗುರು ಕಾನ್ವೆಂಟ್ ಶಾಲೆ, ಶರಣ ಸಾಹಿತ್ಯ ಪರಿಷತ್ತು ಮತ್ತು ಕಿತ್ತೂರ ಕರ್ನಾಟಕ ಸೌಹಾರ್ದ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಡಾ.ಸತೀಶ ಆರ್. ಚೌಲಿಗೇರ ನವಜೀವನ ಫೌಂಡೇಶನ್ ನವಜೀವನ ಆಸ್ಪತ್ರೆ ಬೆಳಗಾವಿ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಲಿದ್ದು ನಾಡಿನ ಅನೇಕ ಪೂಜ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪತ್ರಕರ್ತರು, ವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು, ರಾಷ್ಟ್ರೀಯ ಬಸವ ದಳದ ಶರಣರು, ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ ಅವರು ಸರ್ವರು ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು.

 

ಜಿಲ್ಲೆ

ರಾಜ್ಯ

error: Content is protected !!