Thursday, September 12, 2024

ಕಂದಾಯ ಇಲಾಖೆಯ ‘ಗ್ರಾಮ ಸಹಾಯಕರ’ ರಿಂದ ‘ಡಿ’ ದರ್ಜೆ, ಸೇವಾ ಭದ್ರತೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿ.11 ರಂದು “ಪಾದಯಾತ್ರೆ ಮುಖಾಂತರ”ವಿಧಾನ ಸೌಧಕ್ಕೆ ಮುತ್ತಿಗೆ

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರ: ಕಂದಾಯ ಇಲಾಖೆಯಲ್ಲಿ ಗ್ರಾಮ ಸಹಾಯಕರಾಗಿ ಕಳೆದ ೪೫ ವರ್ಷಗಳಿಂದ ಸೇವೆ ಸಲ್ಲಿಸುತಿರುವ ರಾಜ್ಯದ ಸಮಾರು 10450 ಗ್ರಾಮ ಸಹಾಯಕರನ್ನು ‘ಡಿ’ ದರ್ಜೆ ನೌಕರರನ್ನಾಗಿ ಪರಿಗಣಿಸಿ, ಸೇವಾ ಭದ್ರತೆಗಾಗಿ ಡಿ.11 ರಂದು ಮಂಗಳವಾರ ಪಟ್ಟಣದ ಕೋಟೆ ಆವರಣದಿಂದ ಪಾದಯಾತ್ರೆ ಮುಖಾಂತರ ಹೋರಾಟ ಮಾಡಲು  ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ಮಹಾದೇವಪ್ಪ ಇಂಗಳಗಿ ತಿಳಿಸಿದರು.

ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಬೆಳಗಾವಿ ಜಿಲ್ಲಾ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದ ಸುದ್ಧಿಗೋಷ್ಠಿಯಲ್ಲಿ ಸಭೆಯಲ್ಲಿ ಮಾತನಾಡಿ,  ರಾಜ್ಯ ಮಟ್ಟದ ವಿಶೇಷ ಸಭೆಗಳಲ್ಲಿ ನಿರ್ಧರಿಸಿದಂತೆ ‘ಚನ್ನಮ್ಮನ ಕಿತ್ತೂರಿನ ರಾಣಿ ಚೆನ್ನಮ್ಮ ಕೋಟೆ’ ಮೈದಾನದಿಂದ ಪಾದಯಾತ್ರೆ ಮೂಲಕ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪೂರ್ವಭಾವಿಯಾಗಿ ನಿರ್ಧರಿಸಿದಂತೆ ಉಗ್ರ ಹೋರಾಟ ಮಾಡಲಾಗುವುದು ಎಂದರು.

ರಾಜ್ಯ ಕಂದಾಯ ಇಲಾಖೆಯ ಗ್ರಾಮ ಸಹಾಯಕರ ಸಂಘದ ಕಾನೂನು ಹೋರಾಟ ಸಮಿತಿ ರಾಜ್ಯಾದ್ಯಕ್ಷ ಮಡಿವಾಳಪ್ಪ ವಣ್ಣೂರ ಮಾತನಾಡಿ, ರಾಜ್ಯದ ಎಲ್ಲ ಗ್ರಾಮ ಸಹಾಯಕರು ಪಟ್ಣದ ‘ರಾಣಿ ಚನ್ನಮ್ಮ ಕೋಟೆ’ ಆವರಣದಿಂದ ಡಿ.11 ರಂದು ಬೆಳಿಗ್ಗೆ 8 ಗಂಟೆಗೆ ಪಟ್ಟಣದ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ನಂತರ ಪಾದಯಾತ್ರೆ ಮುಖಾಂತರ ಕಿತ್ತೂರ, ಎಂ.ಕೆ.ಹುಬ್ಬಳ್ಳಿ, ಹಿರೇಬಾಗೇವಾಡಿಯ “ಜಾಲಾಕ್ಷಿ” ಗಾರ್ಡನದಲ್ಲಿ ಸೋಮವಾರ ಡಿ.11  ರಂದು ವಾಸ್ತವ್ಯ ಮಾಡಿ, ಡಿ.12 ರಂದು ಬೆಳಿಗ್ಗೆ 8.30 ಕ್ಕೆ ಹಿರೇಬಾಗೇವಾಡಿಯ ಶ್ರೀ ಬಸವೇಶ್ವರ ಮೂರ್ತಿಗೆ ಪೂಜೆ ಸಲ್ಲಿಸಿ, ಬೆಳಗಾವಿ ಸುವರ್ಣ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಕಿತ್ತೂರ ತಾಲೂಕಾ ಅಧ್ಯಕ್ಷ ಈರಪ್ಪ ಕುಂಟಿರಪ್ಪಗೋಳ, ಪ್ರಕಾಶ ಸುಣಗಾರ ಹಾಗೂ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.  

ಜಿಲ್ಲೆ

ರಾಜ್ಯ

error: Content is protected !!