Saturday, June 29, 2024

ಐತಿಹಾಸಿಕ ಕ್ರಾಂತಿನೆಲ ಕಿತ್ತೂರಿನಲ್ಲಿ ಬಸವ ಮಂಟಪದ ಅಡಿಗಲ್ಲು ಸಮಾರಂಭ ಜರುಗಿತು.

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರ: ಬಸವ ಮಂಟಪದಲ್ಲಿ ಲಿಂಗಾಯತ ಧರ್ಮಕ್ಕೆ ಸಂಭಂದಪಟ್ಟ ದಾರ್ಮಿಕ ಮತ್ತು ತಾತ್ವಿಕ ಚಿಂತನ ಮಂಥನಗಳು ಹಾಗೂ ಪ್ರವಚನಗಳು ನಡೆಯುವುದರ ಜೊತೆಗೆ ಪ್ರಾರ್ಥನೆಗಳನ್ನು ಹೇಳಿಕೊಡುವ ಮೂಲಕ ದಾರಿ ತಪ್ಪುತ್ತಿರುವ ಯುವ ಪಿಳಿಗೆಯನ್ನು ಸರಿದಾರಿಗೆ ತಂದು ಅವರಲ್ಲಿ ಸಂಸ್ಕಾರ ಬೆಳಸುವ ಕೆಲಸಗಳಾಗುತ್ತವೆ ಎಂದು ಕೆಪಿಸಿಸಿ ಸದಸ್ಯೆ ಹಾಗೂ ಮಾಜಿ ಜಿ.ಪಂ. ಸದಸ್ಯೆ ರೋಹಿಣಿ ಪಾಟೀಲ ಹೇಳಿದರು.

ಪಟ್ಟಣದ ಬೀಡಿ ರಸ್ತೆಗೆ ಹೊಂದಿಕೊಂಡು ಇರುವ ಬಸವನಗರದಲ್ಲಿ ಬಸವ ಮಂಟಪದ ಅಡಿಗಲ್ಲು ಸಮಾರಂಭದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಬಸವ ಮಂಟಪದಲ್ಲಿ ಪ್ರತಿದಿನ ನಡೆಯುವ ಬಸವ ಪ್ರಾರ್ಥನೆಗಳು ಇಂದಿನ ಯುವಪಿಳಿಗೆಗೆ ದಾರಿ ದೀಪವಾಗಿವೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ  ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ಬಸವ ಮಂಟಪ ನಿರ್ಮಾಣ ಕಾರ್ಯಕ್ಕೆ ಸಮೀತಿ ಪದಾಧಿಕಾರಿಗಳು ಯಾವುದೇ ತರಹದ ಸಹಾಯ ಕೇಳಿಲ್ಲ ಬಸವ ಮಂಟಪ ನಮ್ಮದು ಆದ್ದರಿಂದ ನೂತನ ಬಸವ ಮಂಟಪ ಕಟ್ಟಡ ಪ್ರಾರಂಭದಿಂದ ಮುಗಿಯುವವರೆಗೆ ನಿಮ್ಮ ಜೊತೆ ನಾನಿದ್ದು ಕಟ್ಟಡಕ್ಕೆ ಬೇಕಾದ ಸಹಾಯ ಸಹಕಾರ ಮಾಡುತ್ತೇನೆ ಎಂದು ಹೇಳಿದ ಅವರು ಒಳ್ಳೆಯ ಕೆಲಸಕ್ಕೆ ನನ್ನ ಸಹಾಯ ಸಹಕಾರ ಯಾವತ್ತು ಇರುತ್ತದೆ ಎಂದರು.

ಕೂಡಲಸಂಗಮ ಬಸವ ಧರ್ಮಪೀಠದ ಡಾ ಗಂಗಾದೇವಿ ಮಾತೆ ಮಾತನಾಡಿದರು

ಕೂಡಲ ಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ  ಡಾ ಗಂಗಾದೇವಿ ಮಾತೆ ಮಾತನಾಡಿ ಕಿತ್ತೂರು ಭಾಗದಲ್ಲಿ ಬಸವ ದಳದ ಪದಾಧಿಕಾರಿಗಳು ಬಹಳ ಅನುಭಾವಿಗಳಾಗಿದ್ದು ಕಿತ್ತೂರು ಪಟ್ಟಣದಲ್ಲಿ ಬಸವ ಮಂಟಪ ನಿರ್ಮಾಣ ಮಾಡಬೇಕು ಎಂದು ಬಹಳ ದಿನಗಳ ಕನಸು ಇತು ಅದು ಇಂದು ನನಸಾಯಿತು. ಶಾಸಕ ಬಾಬಾಸಾಹೇಬ ಪಾಟೀಲ ಮತ್ತು ಅವರ ಧರ್ಮಪತ್ನಿ ರೋಹಿಣಿ ಪಾಟೀಲ ಅವರು ಸಹ ಬಸವ ತತ್ವ ನಿಷ್ಠರು ಆಗಿರುವುದರಿಂದ ಬಸವ ಮಂಟಪದ ನಿರ್ಮಾಣ ಕಾರ್ಯ ಬಹುಬೇಗ ಆರಂಭವಾಗಿ ಯಾವುದೇ ಅಡತಡೆಗಳು ಆಗದೇ ಮಾದರಿ ಬಸವ ಮಂಟಪ ನಿರ್ಮಾಣ ಮಾಡುವ ಮೂಲಕ ಈ ಭಾಗದ ಜನರಿಗೆ ಅನಕೂಲ ಆಗಲಿ ಎಂದು ಆಶೀರ್ವದಿಸಿದರು.

      ನೂರಾರು ಬಸವಾಭಿಮಾನಿಗಳು ಅಡಿಗಲ್ಲು ಸಮಾರಂಭದಲ್ಲಿ ಭಾಗಿಯಾಗಿದ್ದರು

ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗಿಂದ್ರ  ಮಹಾಸ್ವಾಮಿಗಳು ಮಾತನಾಡಿ ಕಿತ್ತೂರು ಪಟ್ಟಣದಲ್ಲಿ ಬಸವ ಮಂಟಪ ಆಗಬೇಕು ಎಂಬುದು ಬಹಳ ದಿನಗಳ ಬೇಡಿಕೆ. ಅನೇಕ ವರ್ಷಗಳಿಂದ ಬಸವ ಮಂಟಪ ಆಗಬೇಕು ಎಂದು ಶರಣರು ಸಂಕಲ್ಪ ಮಾಡಿದ್ದರು. ಇಂದು ಪಟ್ಟಣದ ಬಸವ ನಗರದಲ್ಲಿ ಬಸವ ಮಂಟಪ ನಿರ್ಮಾಣವಾಗುತ್ತಿರುವುದು ಇತಿಹಾಸ. ಶಾಸಕರು ಸಹ ಬಸವಾಭಿಮಾನಿಗಳು ಅವರ ನೇತೃತ್ವದಲ್ಲಿ ಬರುವ ಬಸವ ಜಯಂತಿ ಹೊತ್ತಿಗೆ ಮಾದರಿ ಬಸವ ಮಂಟಪ ನಿರ್ಮಾಣವಾಗುವ ವಿಶ್ವಾಸ ನಮಗಿದೆ ಎಂದರು.

 

ಈ ವೇಳೆ ಪರಮಪೂಜ್ಯ ಶ್ರೀ ಬಸವರತ್ನ ಮಾತಾಜೀ, ಶ್ರೀ ಅಗ್ನಿವೇಷ ಸ್ವಾಮಿಜಿ, ಉಗರಖೋಡ ಗ್ರಾ.ಪಂ. ಅಧ್ಯಕ್ಷ ಶಪೀಕ್ ಹವಾಲ್ದಾರ, ದಂತ ವೈದ್ಯ ಜಗದೀಶ ಹಾರೂಗೊಪ್ಪ, ಕಲ್ಲಪ್ಪಾ ಕೂಗಟಿ, ಚಂದ್ರಗೌಡ ಪಾಟೀಲ, ರಾಷ್ಟ್ರೀಯ ಬಸವ ದಳದ ಕಿತ್ತೂರು ತಾಲೂಕಾ ಅಧ್ಯಕ್ಷ ಮಹೇಶ ಪೂಜೇರ,  ಬಸವರಾಜ ಅವರಾದಿ, ಜಗದೀಶ ಕಂಬಾರಗಣವಿ, ಅಶೋಕ ಕುಗಟಿ, ರಾಜು ಜಾಂಗಟಿ, ಡಾ ಚಂದ್ರಶೇಖರ ಪೊಲೀಸಪಾಟೀಲ,

ನಿಂಗನಗೌಡ ಪಾಟೀಲ, ಮಡಿವಾಳೆಪ್ಪ ಅಸುಂಡಿ, ಮಡಿವಾಳೆಪ್ಪ ಕೋಟಿ, ಶಂಕರ ಚನ್ನಂಗಿ, ತಾಲೂಕಿನ ಎಲ್ಲ ರಾಷ್ಟ್ರೀಯ ಬಸವ ದಳದ ಪದಾಧಿಕಾರಿಗಳು, ಲಿಂಗಾಯತ ಧರ್ಮ ಮಹಾಸಾಭಾದ ಪದಾಧಿಕಾರಿಗಳು,  ರಾಷ್ಟ್ರೀಯ ಬಸವ ಸೇನೆಯ ಪದಾಧಿಕಾರಿಗಳು,  ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು, ಸಮಸ್ತ ಬಸವಾಭಿಮಾನಿಗಳು ಹಾಗೂ ಶ್ರೀ ಗುರು ಬಸವೇಶ್ವರ ಅಭಿವೃದ್ಧಿ ಸೇವಾ ಸಂಘದ ಪದಾಧಿಕಾರಿಗಳು ಇದ್ದರು

ಶ್ರೀ ಗುರು ಬಸವೇಶ್ವರ ಅಭಿವೃದ್ಧಿ ಸೇವಾ ಸಂಘದ ಅಧ್ಯಕ್ಷ  ಅಶೋಕ ಅಳ್ನಾವರ ನಿರೂಪಿಸಿದರು. ಶರಣ ಮಡಿವಾಳಪ್ಪ ಕೋಟಿ ಸ್ವಾಗತಿಸಿದರು, ವರ್ತಕರ ಸಂಘದ ಮುಖಂಡ ಮಲ್ಲಿಕಾರ್ಜುನ ಸಾಣಿಕೊಪ್ಪ ವಂದಿಸಿದರು.

 

ಜಿಲ್ಲೆ

ರಾಜ್ಯ

error: Content is protected !!