Thursday, July 25, 2024

ಐತಿಹಾಸಿಕ ಕಿತ್ತೂರಿನಲ್ಲಿ ಡಿ 5 ರಂದು ಬಸವ ಮಂಟಪದ ಅಡಿಗಲ್ಲು ಸಮಾರಂಭ ಹಾಗೂ 37 ನೇ ಶರಣ ಮೇಳದ ಪ್ರಚಾರ ಸಭೆ

ಸುದ್ದಿ ಸದ್ದು ನ್ಯೂಸ್

ನ್ನಮ್ಮನ ಕಿತ್ತೂರು: ಪಟ್ಟಣದ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಚಂದರಗಿ ಸಭಾ ಭವನದಲ್ಲಿ ಡಿ 5 ರಂದು ಸಂಜೆ 6 30 ಕ್ಕೆ 37 ನೇ ಶರಣ ಮೇಳದ ಪ್ರಚಾರ ಕಾರ್ಯಕ್ರಮ ಹಾಗೂ ಸಾಯಂಕಾಲ 4 ಗಂಟೆಗೆ ಬೀಡಿ ರಸ್ತೆಗೆ ಹೊಂದಿಕೊಂಡು ಇರುವ ಬಸವ ನಗರದಲ್ಲಿ ಬಸವ ಮಂಟಪ ಅಡಿಗಲ್ಲು ಸಮಾರಂಭದ ಜರುಗಲಿದೆ ಎಂದು ರಾಷ್ಡ್ರೀಯ ಬಸವ ದಳದ ಮುಖಂಡರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಮಹಾಜಗದ್ಗುರು ಮಾತೆ ಡಾ ಗಂಗಾದೇವಿ ಹಾಗೂ ಸಾನಿದ್ಯವನ್ನು ರಾಜಗುರು ಸಂಸ್ಥಾನ ಕಲ್ಮಠ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಅಧ್ಯಕ್ಷರಾಗಿ ಶಾಸಕ ಬಾಬಾಸಾಹೇಬ ಪಾಟೀಲ ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಧಾರವಾಡ ಏಕತಾ ಸಮೀತಿ ಅಧ್ಯಕ್ಷ ಜಿ,ಬಿ, ಕೊಂಗವಾಡ, ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಡಾ ಶ್ರೀಕಾಂತ ದಳವಾಯಿ, ಹಿರಿಯ ಸಂಶೋಧಕ ಮಹೇಶ ಚನ್ನಂಗಿ. ಎಂ. ಕೆ. ಹುಬ್ಬಳ್ಳಿ ಖ್ಯಾತ ದಂತ ವೈದ್ಯರಾದ ಡಾ ಜಗದೀಶ ಹಾರುಗೊಪ್ಪ, ಡಾ ಚಂದ್ರು ಪೊಲೀಸ್‌ಪಾಟೀಲ, ಸಮಾಜ ಸೇವಕರಾದ ರುದ್ರಪ್ಪ ಪಡಾದ ಚಂದ್ರಗೌಡ ಪಾಟೀಲ, ಸಿಪಿಐ ಮಹಾಂತೇಶ ಹೊಸಪೇಟ, ಗುತ್ತಿಗೆದಾರರಾದ ಅಶ್ಫಾಕ ಹವಾಲ್ದಾರ, ರಾಜು ಜಾಂಗಟಿ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ತಾಲೂಕಾ ಘಟಕದ ಅದ್ಯಕ್ಷ ಡಿ. ಆರ್‌. ಪಾಟೀಲ ಆಗಮಿಸಲಿದ್ದಾರೆ.

ಅತಿಥಿಗಳಾಗಿ ಮಾಜಿ ತಾಲೂಕಾ ಪಂಚಾಯತ ಸದಸ್ಯ ಮುದಕಪ್ಪ ಮರಡಿ, ಉಗರಖೋಡ ಗ್ರಾಮ ಪಂಚಾಯತ ಅಧ್ಯಕ್ಷ ಶಫೀಕ ಹವಾಲ್ದಾರ, ಪಂಚಾಯತ ಸದಸ್ಯರಾದ ಎಂ. ಎಫ್.‌ ಜಕಾತಿ, ಕಿರಣ ಪಾಟೀಲ, ಶಂಕರ ಬಡಿಗೇರ. ಹಿರಿಯರಾದ ಕಲ್ಲಪ್ಪ ಕೂಗಟಿ, ರಾಯಪ್ಪ ಹಣಜಿ, ದುಂಡಪ್ಪ  ಇನಾಮದಾರ, ಮಲ್ಲಿಕಾರ್ಜುನ ಸಾಣಿಕೊಪ್ಪ, ಮಾಜಿ ಪಟ್ಟಣ ಪಂಚಾಯತ ಅಧ್ಯಕ್ಷರಾದ ಹನೀಫ ಸುತಗಟ್ಟಿ, ಹಣಮಂತ ಲಂಗೋಟಿ. ಸಾಹಿತಿಗಳಾದ ರಾಜಶೇಖರ ಕೋಟಿ, ಅಭಿಯಂತರ ಮಹಾಂತೇಶ ಗೆಜಪತಿ, ಖ್ಯಾತ ಪೆಂಡಾಲ ಉದ್ಯಮಿ ಕೃಷ್ಣಾ ಬಾಳೇಕುಂದರಗಿ, ಫಕ್ಕೀರಪ್ಪ ಮುರಗೋಡ, ಪಡೆಪ್ಪ ಬೋಗುರ ಹಾಗೂ ವಿರೇಶ ಹಲಕಿ ಅವರು ಆಗಮಿಸಲಿದ್ದಾರೆ.

ಕಿತ್ತೂರು ಹಾಗೂ ಸುತ್ತಮುತ್ತ ಇರುವ ಎಲ್ಲ ಗ್ರಾಮಗಳ ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಾಭಾ, ರಾಷ್ಟ್ರೀಯ ಬಸವ ಸೇನೆ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಸಮಸ್ತ ಬಸವಾಭಿಮಾನಿಗಳು ಕಾರ್ಯಕ್ರಮ ಮತ್ತು ಬಸವ ಮಂಟಪದ ಅಡಿಗಲ್ಲು ಸಮಾರಂಭಕ್ಕೆ ಆಗಮಿಸಬೇಕು ಎಂದು‌ ಶ್ರೀ ಗುರು ಬಸವೇಶ್ವರ ಅಭಿವೃದ್ಧಿ ಸೇವಾ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

 

 

 

 

 

 

ಜಿಲ್ಲೆ

ರಾಜ್ಯ

error: Content is protected !!