Sunday, September 8, 2024

ನಾನು ಬೆಳಗಾವಿ ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ; ಖ್ಯಾತ ಉದ್ಯಮಿ ಜಗಜಂಪಿ

ಸುದ್ದಿ ಸದ್ದು ನ್ಯೂಸ್

ಬೆಳಗಾವಿ: ಬೆಳಗಾವಿ ಜಿಲ್ಲೆಯಾದ್ಯಂತ ದಾಖಲೆಯ ಬಜಾಜ್ ಕಂಪನಿಯ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವುದರ ಜೊತೆ ಸಹಸ್ರಾರು ಸಂಖ್ಯೆಯಲ್ಲಿ ಯುವಕರಿಗೆ ಉದ್ಯೊಗ ಅವಕಾಶ ಕಲ್ಪಿಸುವ ಮೂಲಕ ಯಶಸ್ವಿ ಉದ್ಯಮಿಯಾಗಿರುವ ಮಲ್ಲಿಕಾರ್ಜುನ್ ಜಗಜಂಪಿ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ ಮತಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದಾರೆ.

ನಾನು ಬಿಜೆಪಿಯ ಸದಸ್ಯನೂ ಅಲ್ಲ, ಕಾಂಗ್ರೆಸ್ಸಿನ ಸದಸ್ಯನೂ ಅಲ್ಲ.ನಾನು ಬೆಳಗಾವಿ ಜಿಲ್ಲೆಯ ಜನಸಾಮಾನ್ಯರ, ರೈತರ, ತೇಜಸ್ವಿ ಯುವಕರ. ಕೂಲಿ ಕಾರ್ಮಿಕರ ಧ್ವನಿಯಾಗಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಇತ್ತಿಚೇಗೆ ಸುದ್ದಿ ಸದ್ದು ನ್ಯೂಸ್ ಜೊತೆ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. 

ಬಜಾಜ್ ಕಂಪನಿಯ ದ್ವಿಚಕ್ರ ವಾಹನಗಳನ್ನು ದಾಖಲೆಯ ಮಾರಾಟ ಮಾಡವ ಮೂಲಕ ಹೆಸರುವಾಸಿಯಾದ ಇವರು ವಿಜಯಪುರ ಜ್ಞಾನಯೋಗ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಆತ್ಮೀಯ ಶಿಷ್ಯರು ಹೌದು. ಮಲ್ಲಿಕಾರ್ಜುನ ಜಗಜಂಪಿ ಅವರು ಈಬಾರಿಯ ಎಂ.ಪಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವದು ವಿಶಿಷ್ಟವಾಗಿದೆ ಏಕೆಂದರೆ ಇಂದು ಎರಡು ರಾಷ್ಟ್ರೀಯ ಪಕ್ಷಗಳು ಬೆಳಗಾವಿ ಲೋಕಸಾಭಾ ಕ್ಷೇತ್ರದಲ್ಲಿ ನೆಲೆ ಕಳೆದುಕೊಂಡಿದ್ದು ಅಭ್ಯರ್ಥಿಗಳ ಹುಡುಕಾಟದಲ್ಲಿ ಗೊಂದಲ ಸೃಷ್ಠಿಯಾಗಿದ್ದು ಮಲ್ಲಿಕಾರ್ಜುನ ಜಗಜಂಪಿ ಅವರ ಲೋಕಸಭಾ ದಾರಿ ಸುಲಭ ಎಂದು ಹೇಳಿದರೆ ತಪ್ಪಾಗಲಾರದು.

ಮಲ್ಲಿಕಾರ್ಜುನ ಜಗಜಂಪಿ ಅವರು ರೈತರ ಕುರಿತು ಅಪಾರ ಕಾಳಜಿ ಹೊಂದಿದವರಾಗಿದ್ದಾರೆ. ರೈತರು ಶ್ರೀಮಂತರಾದರೆ ಭಾರತ ಶ್ರಿಮಂತವಾಗುತ್ತದೆ ಎಂದು ಹೇಳುವ ಇವರು ರೈತರಿಗಾಗಿ ತಮ್ಮ ಸಂಸ್ಥೆಯಲ್ಲಿ ದ್ವಿಚಕ್ರ ವಾಹನಗಳ ಮೇಲೆ ಅನೇಕ ಯೋಜನೆಗಳನ್ನು ತರುವ ಮೂಲಕ ರೈತರ ನೆಚ್ಚಿನ ನಾಯಕರಾಗಿದ್ದಾರೆ.

ಬೆಳಗಾವಿ ಕಾರ್ಯಕ್ರಮದಲ್ಲಿ ರಾಜಕೀಯ ನಾಯಕ ಮತ್ತು ವಿವಿದ ಮಠದ ಶ್ರೀಗಳೊಂದಿಗೆ ಮಲ್ಲಿಕಾರ್ಜುನ್ ಜಗಜಂಪಿ 

ಮಲ್ಲಿಕಾರ್ಜುನ್ ಜಗಜಂಪಿ ಅವರು ಯಾವುದೇ ಅಧಿಕಾರದಲ್ಲಿ ಇಲ್ಲದೇ ಹೋದರು ಅನೇಕ ಜನಪರ ಮತ್ತು ರೈತಪರ ಕೆಲಸಗಳನ್ನು ಮಾಡುತ್ತಾರೆ. ಇಂತವರು ಬೆಳಗಾವಿ ಲೋಕಸಭೆಗೆ ಸ್ಪರ್ದೆ ಮಾಡಿದರೆ ಜಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.

ಜಿಲ್ಲೆ

ರಾಜ್ಯ

error: Content is protected !!