Saturday, September 7, 2024

ಐತಿಹಾಸಿಕ ಕಿತ್ತೂರು ಹಿರಿಮೆಗೆ ಮತ್ತೊಂದು ಗರಿ ; ಪಿಎಚ್‌ಡಿ ಪದವಿ ಪಡೆದ ಪ್ರಾಧ್ಯಾಪಕಿ ಸಂಗೀತಾ ತೋಲಗಿ

ಸುದ್ದಿ ಸದ್ದು ನ್ಯೂಸ್‌

ನ್ನಮ್ಮನ ಕಿತ್ತೂರು: ಐತಿಹಾಸಿಕ ಭಾರತದ ಸ್ವಾತಂತ್ರ‍್ಯದ ಚರಿತ್ರೆಯ ಪುಟಗಳನ್ನೊಮ್ಮೆ ತೆರೆದು ನೋಡಿದರೆ ಸಾಕು ದೇಶಾಭಿಮಾನ ಮೈವೆತ್ತು ಮೈ ಜುಮ್ಮೆನ್ನಿಸುವಂತ ಅನುಭವ ತರುತ್ತದೆ. ಕಿತ್ತೂರು ಸಾಮಾನ್ಯ ಸಂಸ್ಥಾನದ ಮಹಿಳೆ ಬ್ರಿಟಿಷ್ ಸಾಮ್ರಾಜ್ಯದ ವಿರುದ್ದವೇ ಸೆಟೆದು ನಿಂತು ತೊಡೆ ತಟ್ಟಿ ದಿಟ್ಟತನದಿಂದ ಕೆಂಪು ಕೋತಿಗಳ ಅಟ್ಟಹಾಸ ಮೆಟ್ಟಿ ನಿಂತ ವೀರ ಪರಾಕ್ರಮದ ಇತಿಹಾಸ ಹೊಂದಿದ ಕಿತ್ತೂರು ನಾಡಿನಲ್ಲಿ ಇರುವ ಕಿತ್ತೂರು ನಾಡ ವಿದ್ಯಾವರ್ದಕ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ಸಹಾಯಕ ಪ್ರಾಧ್ಯಾಪಕಿ ಸಂಗೀತಾ ತೋಲಗಿ ಅವರು ಡಾಕ್ಟರೇಟ್ ಪದವಿ ಪಡೆಯುವ ಮೂಲಕ ಕ್ರಾಂತಿಕಾರಿಗಳ ಹೋರಾಟ ನೆಲದ ವೀರ ಪರಂಪರೆಯನ್ನು ಮುಂದುವರೆಸುವ ಮೂಲಕ ಮತ್ತೊಮ್ಮೆ ಇಡೀ ನಾಡಿನ ಗಮನ ಸೆಳೆಯುವಂತೆ ಮಾಡಿದ್ದಾರೆ.

ಇವರು ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಧ್ಯಾಪಕಿ ಡಾ. ಕೆ. ಎಸ್. ಸರಳಾ ಇವರ ಮಾರ್ಗದರ್ಶನದಲ್ಲಿ “ ಭಾರತೀಯ ವಾಣಿಜ್ಯ ಬ್ಯಾಂಕುಗಳ ದಕ್ಷತೆಯ ಮೇಲೆ ವಿಲೀನಗಳು ಮತ್ತು ಸ್ವಾಧೀನ ನಿರ್ಧಾರಗಳ ಪ್ರಭಾವ ” ಎಂಬ ವಿಷಯದ ಬಗ್ಗೆ ಮಂಡಿಸಿದ ಮಹಾ ಪ್ರಬಂಧಕ್ಕೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯ  ಡಾಕ್ಟರೇಟ್ ಪದವಿ ನೀಡಿದೆ.

ಡಾಕ್ಟರೇಟ್ ಪದವಿ ಪಡೆಯುವ ಮೂಲಕ ಕಿತ್ತೂರು ನಾಡಿನ ಕಿರ್ತಿಯನ್ನು ಎತ್ತರಕ್ಕೇರಿಸಿದ ಸಂಗೀತಾ ತೋಲಗಿ ಅವರನ್ನು ಅವರ ತಂದೆ ಬಸವರಾಜ, ತಾಯಿ ಸುವರ್ಣ, ಪತಿ ಚಂದ್ರಶೇಖರ, ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು, ಸಂಘದ ಅಧ್ಯಕ್ಷ ಜಗದೀಶ ವಸ್ತ್ರದ, ಗೌರವ ಕಾರ್ಯದರ್ಶಿ ಜಗದೀಶ ಬಿಕ್ಕಣ್ಣವರ, ಆಡಳಿತ ಮಂಡಳಿ ಸರ್ವ ನಿರ್ದೇಶಕರು, ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಿ. ಕೆ. ಭೂಮನಗೌಡರ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಪಟ್ಟಣದ ನಾಗರಿಕರು ಅಭಿನಂದಿಸಿದ್ದಾರೆ.

                                                                                          ವರದಿ: ಬಸವರಾಜ ಚಿನಗುಡಿ

 

ಜಿಲ್ಲೆ

ರಾಜ್ಯ

error: Content is protected !!