Monday, April 15, 2024

ಅವಸಾನದ ಅಂಚಿನಲ್ಲಿ ಕಿತ್ತೂರು ಕೋಟೆ ಮತ್ತು ಕೋಟೆಯ ಸಂರಕ್ಷಣಾ ಗೋಡೆಗಳು

ಬಸವರಾಜ ಚಿನಗುಡಿ, ಚನ್ನಮ್ಮನ ಕಿತ್ತೂರು

ಸುದ್ದಿ ಸದ್ದು ನ್ಯೂಸ್

ನ್ನಮ್ಮನ ಕಿತ್ತೂರು: ದೇಶದಲ್ಲಿ ಪ್ರಥಮ ಸ್ವಾತಂತ್ರ ಹೋರಾಟದ ಕಿಚ್ಚು ಹತ್ತಿಸಿದವಳು ಕಿತ್ತೂರು ರಾಣಿ ಚನ್ನಮ್ಮ. ಇಂತಹ ವೀರ ರಾಣಿ ಚನ್ನಮ್ಮನ ಕೋಟೆ ಮತ್ತು ಕೋಟೆ ಸಂರಕ್ಷಣಾ ಗೋಡೆಗಳು ಇಂದು ನಿರ್ವಹಣೆ ಇಲ್ಲದೆ ಅವನಿತಿಯ ಅಂಚಿಗೆ ತಲುಪುತ್ತಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ಪ್ರತಿ ವರ್ಷ ಸರ್ಕಾರದಿಂದ ಕೋಟ್ಯಾಂತರ ಹಣ ಖರ್ಚು ಮಾಡಿ ಕಿತ್ತೂರು ಉತ್ಸವ ಮಾಡುತ್ತಾ ಬರುತ್ತಿದ್ದಾರೆ. ಮೂರು ದಿನ ನಡೆಯುವ ಉತ್ಸವದಲ್ಲಿ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಕೋಟೆ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿ ಹೋದರೆ ಮತ್ತೆ ಅಭಿವೃದ್ಧಿ ಬಗ್ಗೆ ಚಿಂತನೆ ಮುಂದಿನ ಕಿತ್ತೂರು ಉತ್ಸವದ ಆಶುಪಾಸಿನಲ್ಲಿಯೇ ಮಾಡುತ್ತಾ ಬರುತ್ತಿದ್ದಾರೆ.

  ಕೋಟೆ ಪೂರ್ವ ದಿಕ್ಕಿನಲ್ಲಿರುವ ಮುಖ್ಯದ್ವಾರದ ಎಡಗಡೆ ಮತ್ತು ಬಲಗಡೆ ಇರುವ ಕೋಟೆ ಸಂರಕ್ಷಣಾ ಗೋಡೆ ನಿರ್ವಹಣೆ ಕೊರತೆಯಿಂದ ಕುಸಿದು ಬಿದ್ದಿರುವುದು

ಕೋಟೆ ಈಗ ಅಲ್ಲಲ್ಲಿ ಹಾಳಾಗುತ್ತಿದ್ದು ಈಗಾಗಲೇ ಕೋಟೆಯ ಪೂರ್ವ ದಿಕ್ಕಿನಲ್ಲಿರುವ ಮುಖ್ಯದ್ವಾರದ ಎಡಗಡೆ ಮತ್ತು ಬಲಗಡೆ ಇರುವ ಕೋಟೆ ಸಂರಕ್ಷಣಾ ಗೋಡೆ ನಿರ್ವಹಣೆ ಕೊರತೆಯಿಂದ ಕುಸಿದು ಬಿದ್ದು ಸುಮಾರು ದಿನಗಳೇ ಕಳೆದರು ಯಾವದೆ ಸರಕಾರವಾಗಲಿ, ಜನಪ್ರತಿನಿಧಿಯಾಗಲಿ, ಸಂಭಂದ ಪಟ್ಟ ಅಧಿಕಾರಿಗಳಾಗಲಿ ಇತ್ತ ಕಡೆ ಗಮನ ಹರಿಸದೆ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.

           ಕೋಟೆಯ ಒಳಗಡೆ ಹುಲ್ಲು ಗಿಡಗಂಟಿಗಳು ಬೆಳೆದು ನಿಂತು ಕೊಟೆ ನೈಜ ಸ್ವರೂಪವನ್ನು ಕಳೆದುಕೊಂಡಿರುವುದು.

ಕಿತ್ತೂರು ಕೋಟೆಯ ಅಳಿದುಳಿದ  ಐತಿಹಾಸಿಕ ಅವಶೇಷಗಳು ನೆಲಸಮವಾಗಿದ್ದು ಇತ್ತಚಿನ ದಿನಗಳಲ್ಲಿ ಅವುಗಳನ್ನು  ಕೃತಕವಾಗಿ ನಿರ್ಮಾಣ ಮಾಡಲಾಗಿತ್ತು.  ಅವು ಸಹ ಇಂದು ಹಾಳಾಗಿ ಹೋಗಿದ್ದು ಐತಿಹಾಸಿಕ ಕೋಟೆ ತನ್ನ ಅಂದ ಕಳೆದುಕೊಳುತ್ತಿದೆ. 

     ಕೋಟೆಯಲ್ಲಿ ಇರುವ ದೃವ ನಕ್ಷತ್ರ ವೀಕ್ಷಣಾಲಯ

ಇಂದು ಕೋಟೆ ಅಲ್ಪಸ್ವಲ್ಪ ಉಳಿದಿದ್ದು ಕೋಟೆಯ ಒಳಗಿರುವ ಬತ್ತೇರಿಗಳು, ಬುರ್ಜುಗಳು, ಈಜುಕೊಳ, ದರ್ಬಾರ ಸಭಾಂಗಣ, ಧೃವ ನಕ್ಷತ್ರ ವಿಕ್ಷಣಾ ರಂದ್ರ ಕುರುಹುಗಳು ಮಾತ್ರ ಉಳಿದುಕೊಂಡಿವೆ.

 ಕೋಟೆಯ ಸುತ್ತಮುತ್ತ ಫಾರ್ಥೆನೀಯಂ ಕಸ ಹಾಗು ಗಿಡ ಗಂಟಿಗಳು ಬೆಳೆದು ಕಾಡು ಕಂಡಂತೆ ಕಾಣುತ್ತಿದೆ

ಕೋಟೆಯ ಸುತ್ತಮುತ್ತ ಫಾರ್ಥೆನೀಯಂ ಕಸ ಹಾಗು ಗಿಡ ಗಂಟಿಗಳು ಬೆಳೆದು ಕಾಡು ಕಂಡಂತೆ ಕಾಣುತ್ತಿದೆ. ಕಳದ ಎರಡು ವರ್ಷದ ಹಿಂದೆ ತರಳುಭಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯರು ಅನೀರಿಕ್ಷಿತ ಬೇಟಿ ನೀಡಿದ ಸಂದರ್ಭದಲ್ಲಿ ಕೋಟೆಯ ದುಸ್ಥಿತಿ ಕಂಡು ಮರಮರ ಮರಗಿ ಸಂಭಂಧ ಪಟ್ಟ ಅಧಿಕಾರಿ ಮತು ಜನಪ್ರತಿನಿದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೋಟೆಯ ಸ್ವಚ್ಛತೆ ಕಾಪಾಡಲು ತಮ್ಮ ಮಠದಿಂದ 50 ಸಾವಿರ ಹಣ ನೀಡಿ ಹಿಂದಿನ ಬಿಜೆಪಿ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಸಚಿವ ಸಿ ಟಿ ರವಿ ಅವರಿಗೆ ಪೋನ ಮೂಲಕ ಸಂಪರ್ಕಿಸಿ ಕಿತ್ತೂರು ಕೋಟೆಯ ದುಸ್ಥಿತಿಯ ಕುರಿತು ವಿವರಿಸಿ ಶೀಘ್ರವಾಗಿ ಕೋಟೆ ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಆದರೂ ಸಚಿವರು ಹಾಗೂ ಸಂಭಂದಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದು ಖೇದಕರ ವಿಷಯ.

     ಕಿತ್ತತೂರು ಕೋಟೆಗೆ ರಳುಭಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯರು ಬೇಟಿ ನೀಡಿದ ಸಂದರ್ಭ

ಹಿಂದೆ ಬಿಜೆಪಿಯ ಶಾಸಕ ಮಹಾಂತೇಶ ದೊಡ್ಡಗೌಡರ ಅವರ ಆಡಳಿತಾವದಿಯಲ್ಲಿ ಕೆಲವು ಕೋಟೆಯ ಆವರಣದ ಸಂರಕ್ಷಣಾ ಗೋಡೆಗಳು ಕುಸಿದು ಬಿದ್ದಿದ್ದವು ಮಾಜಿ ಶಾಸಕರು ಸರ್ಕಾರವನ್ನು ಒತ್ತಾಯಿಸಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 200 ಕೋಟಿ ಮಂಜೂರು ಮಾಡಿಸಿ ಕೋಟೆಯ ಆವರಣದ ಸಂರಕ್ಷಣಾ ಗೋಡೆಗಳನ್ನು ದುರಸ್ತಿ ಮಾಡಲು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದರು. ಆದರೆ ಅವರ ಮಾತು ಹುಸಿಯಾಯಿತು.

ಕೇವಲ 15 ದಿನಗಳಲ್ಲಿ ಕಿತ್ತೂರು ಉತ್ಸವ ನಡೆಯಲಿದೆ ಅಸಂಖ್ಯಾತ ಜನ ಉತ್ಸವಕ್ಕೆ ಆಗಮಿಸುತ್ತಾರೆ. ಅದಕ್ಕಾಗಿ ಕೋಟೆಯ ದುರಸ್ತಿ ತಕ್ಷಣ ಆಗಬೇಕು ಹಾಗು ಕಿತ್ತೂರು ಸಂಸ್ಥಾನಕ್ಕೆ ಸಂಭಂದಪಟ್ಟ ಎಲ್ಲ ಐತಿಹಾಸಿಕ ಸ್ಥಳಗಳನ್ನ ಗುರ್ತಿಸಿ ಅಭಿವೃದ್ದಿಗೆ ನೀಲ ನಕ್ಷೆಯನ್ನು ರೂಪಿಸಬೇಕು ಎನ್ನುವುದು ಕಿತ್ತೂರು ನಾಡಿನ ಜನರ ಒತ್ತಾಸೆಯಾಗಿದೆ.

 

ಕೋಟೆಯ ಸಂರಕ್ಷಣಾ ಗೋಡೆಗಳು ಕುಸಿದಿದ್ದು ನನ್ನ ಗಮನಕ್ಕೆ ಬಂದಿದೆ. ಪುನರ್ ನಿರ್ಮಾಣಕ್ಕಾಗಿ ಪುರಾತತ್ವ ಇಲಾಖೆಯ ಗಮನಕ್ಕೆ ತಂದಿದ್ದು ಅವರ ಅನುಮತಿಗಾಗಿ ಕಾಯುತ್ತಿದ್ದು ಅನುಮತಿ ಸಿಕ್ಕ ತಕ್ಷಣ ಅತಿ ಶೀಘ್ರದಲ್ಲಿ ಅಂದರೆ ಕಿತ್ತೂರು ಉತ್ಸವದ ಒಳಗಾಗಿ ದುರಸ್ಥಿ ಗೊಳಿಸಲಾಗುವುದು. ಪ್ರಭಾವತಿ ಫಕೀರಪುರ, ಬೈಲಹೊಂಗಲ  ಉಪ ವಿಭಾಗಾಧಿಕಾರಿ ಹಾಗೂ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತೆ

ಭಾರತ ದೇಶದ ಮೊದಲ ಸ್ವಾತಂತ್ರ ಹೋರಾಟಕ್ಕೆ ಸಾಕ್ಷಿಯಾಗಿ ಇರುವದು ಕಿತ್ತೂರು ರಾಣಿ ಚನ್ನಮ್ಮನ ಕೋಟೆ ಒಂದೇ ಇಂದು ಕೋಟೆ ಮತ್ತು ಅದರ ಸಂರಕ್ಷಣಾ ಗೋಡೆಗಳು ಕುಸಿದು ಬಿದ್ದಿದ್ದು ಅವುಗಳ ದುರಸ್ತಿಗೆ ಸರ್ಕಾರಗಳು ಮುಂದಾಗಬೇಕು. ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ರಾಜಗುರು ಸಂಸ್ಥಾನ ಕಲ್ಮಠ ಕಿತ್ತೂರು.

 

 

ಜಿಲ್ಲೆ

ರಾಜ್ಯ

error: Content is protected !!