Friday, July 26, 2024

ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಹಾಕುತ್ತಿದ್ದ ಆರೋಪದಡ ರೈತ ನಾಯಕಿ ಮಂಜುಳಾ ಪೂಜಾರಿ ವಿರುದ್ಧ FIR.

ಬೆಳಗಾವಿ: ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಹಾಕುತ್ತಿದ್ದ ಆರೋಪದ ಮೇಲೆ ರೈತ ನಾಯಕಿ ಮಂಜುಳಾ ಪೂಜಾರಿ ವಿರುದ್ಧ ಗೋಕಾಕ್ ತಾಲೂಕಿನ ಮೂಡಲಗಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಂತೋಷ್ ಪಾಟೀಲ್ ಎನ್ನುವವರಿಗೆ ಜಮೀನು ಸಮಸ್ಯೆ ಬಗೆಹರಿಸಿ ಕೊಡುವುದಾಗಿ ಹೇಳಿ ಹಣ ವಸೂಲಿ ಮಾಡಿದ್ದಲ್ಲದೇ ಇನ್ನು ಹೆಚ್ಚಿನ ಹಣ ನೀಡುವಂತೆ ಮಂಜುಳಾ ಪೂಜಾರಿ ಬೆದರಿಕೆ ಹಾಕಿದ್ದರು ಎಂಬ ಆರೋಪ ಕೇಳಿಬಂದಿತ್ತು. ಸಂತೋಷ್​ ಅವರ ಬಾಡಿಗೆ ಮನೆ ಮುಂದೆ ಬಂದು ಗಲಾಟೆ ಮಾಡಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ಪೋನ್ ಮೂಲಕ ಬೈದಿರುವುದು, ಜೀವ ಬೆದರಿಕೆ ಹಾಕಿರುವ ಆರೋಪದ ಮೇಲೆ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಸಂತೋಷ್ ಪ್ರಕರಣ ದಾಖಲು ಮಾಡಿದ್ದಾರೆ.

ಮಂಜುಳಾ ಪೂಜಾರಿ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 186, 504, 506 ಮತ್ತು 34 ಅಡಿ ಎಫ್​ಐಆರ್ ದಾಖಲಿಸಿದ್ದಾರೆ.

ಸ್ವಯಂ ಘೋಷಿತ ರೈತ ನಾಯಕಿ ಮಂಜುಳಾ ಪೂಜಾರಿ ವಿರುದ್ಧ ನಿನ್ನೆ ಗಂಭೀರ ಆರೋಪ ಕೇಳಿ ಬಂದಿತ್ತು. ಜಮೀನು ವಿಚಾರವಾಗಿ ನ್ಯಾಯ ಕೊಡಿಸಿ ಎಂದು ಬಂದ ಮೂಡಲಗಿ ತಾಲೂಕಿನ ನಾಗನೂರ ಗ್ರಾಮದ ಸಂತೋಷ್​ ಪಾಟೀಲ್ ಬಳಿ 1 ಲಕ್ಷದ 20 ಸಾವಿರ ವಸೂಲಿ ಮಾಡಿದ್ದಾರಂತೆ. ಒಟ್ಟು 2 ಲಕ್ಷ ರೂ.ಗಳನ್ನು ಪಡೆದುಕೊಂಡರೂ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ಕೊಡಲಿಲ್ಲ ಅಂದ್ರೆ ಅಟ್ರಾಸಿಟಿ ಕೇಸ್ ಹಾಕೋದಾಗಿ ಬೆದರಿಕೆ ಹಾಕಿದ್ದರು. ಮನೆ ಮುಂದೆ ಬಂದು ಗಲಾಟೆ ಮಾಡೋದಾಗಿ ಧಮ್ಕಿ ಹಾಕ್ತಿದ್ದಾಳೆ. ನಿತ್ಯ ಹಣಕ್ಕಾಗಿ ಟಾರ್ಚರ್ ಕೊಡ್ತಿದ್ದಾಳೆ ಎಂದು ಸಂತೋಷ್ ಪಾಟೀಲ್ ನಿನ್ನೆ ಆರೋಪ ಮಾಡಿದ್ದರು.

 

 

 

ಕೃಪೆ:ನ್ಯೂಸ್​ ಫಸ್ಟ್

ಜಿಲ್ಲೆ

ರಾಜ್ಯ

error: Content is protected !!